RESPONSIVE LEADERBOARD AD AREA
Film News

ಧ್ರುವ ಸರ್ಜಾಗೆ ಪಾಠ ಹೇಳಲಿರುವ ರಶ್ಮಿಕಾ ಮಂದಣ್ಣ..!!

‘ಇನ್ಕೇಂ ಇನ್ಕೇಂ ಇನ್ಕೇಂ ಕಾವಾಲೆ…’ ಎನ್ನುತ್ತಾ ತೆಲುಗಿನಲ್ಲಿ ರಾತ್ರಿ ಬೆಳಗಾಗುವುದರೊಳಗೆ ಸ್ಟಾರ್ ಪಟ್ಟ ಪಡೆದುಕೊಂಡ ರಶ್ಮಿಕಾ ಮಂದಣ್ಣ ಕನ್ನಡದ ಭರ್ಜರಿ ಹೀರೋ ಧ್ರುವ ಸರ್ಜಾಗೆ ಪಾಠ ಹೇಳಲಿದ್ದಾರೆ.!  ಹೌದು.. ಧ್ರುವ ಅಭಿನಯಿಸುತ್ತಿರುವ ‘ಪೊಗರು’ ಚಿತ್ರದಲ್ಲಿ ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣ, ಪ್ರೊಫೆಸರ್ ಆಗಿ ಅಭಿನಯಿಸುತ್ತಿದ್ದಾರೆ.!

ಮೊನ್ನೆ ತಾನೆ ಧ್ರುವ ಸರ್ಜಾ, ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಎಂಬ ಬೆಂಗಳೂರಿನ ಪ್ರೊಫೆಸರ್ ಜೊತೆಗೆ ಉಂಗುರ ಬದಲಾಯಿಸಿಕೊಂಡು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ‘ಪೊಗರು’ ಚಿತ್ರದಲ್ಲಿ  ಪ್ರೊಫೆಸರ್ ರಶ್ಮಿಕಾರಿಂದ ಮತ್ತೆ ಪಾಠ ಕೇಳಬೇಕಿದೆ.!

ತೆಲುಗಿನ ‘ಗೀತ ಗೋವಿಂದಂ’ ಸೂಪರ್ ಹಿಟ್ ಆದ ಬಳಿಕ ರಶ್ಮಿಕಾ ಗೆ ವ್ಯಾಪಕ ಬೇಡಿಕೆ ಬಂದಿದ್ದು, ಹಲವು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.ಈ ಮೊದಲು ಯಾವುದೇ ಭಾಷೆಯಲ್ಲಾಗಲಿ ಅತ್ಯುತ್ತಮ ಚಿತ್ರಕಥೆಗಳು ಸಿಕ್ಕರೆ ನಾನು ಅಭಿನಯಿಸಲು ಸಿದ್ಧ ಎಂದು ಹೇಳಿದ್ದ ರಶ್ಮಿಕಾ ಈಗ ಧ್ರುವ ಗೆ ಜೋಡಿಯಾಗಿದ್ದಾರೆ.

ಈ ನಡುವೆ ರಶ್ಮಿಕಾ, ದರ್ಶನ್ ನಾಯಕತ್ವದ ‘ಯಜಮಾನ’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ತೆಲುಗು ಮತ್ತು ಕನ್ನಡ ಎರಡರಲ್ಲೂ ಅಭಿನಯಿಸುತ್ತಿರುವ ಈ ಚೆಲುವೆ ವಿಜಯ್ ದೇವರಕೊಂಡ ಅಭಿನಯದ ‘ಡಿಯರ್ ಕಾಮ್ರೇಡ್’ ಎಂಬ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಂದಕಿಶೋರ್ ನಿರ್ದೇಶಿಸುತ್ತಿರುವ ಈ ಚಿತ್ರದ ಟೀಸರ್ ಕಳೆದ ಅಕ್ಟೋಬರ್ 6 ರಂದು (ಧ್ರುವ ಜನ್ಮದಿನ) ಬಿಡುಗಡೆಯಾಗಿದ್ದು, ಚಿತ್ರದ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಚಿತ್ರಕ್ಕೆ ಅರ್ಜುನ್ ಸರ್ಜಾ ಕಥೆ ಒದಗಿಸಿದ್ದು ಗಂಗಾಧರ್ ಚಿತ್ರಕ್ಕೆ ಹಣ ಹೂಡಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top