RESPONSIVE LEADERBOARD AD AREA
Movie Articles

RangiTaranga impresses the Censor team

ಈಚೆಗೆ ಏನಿದ್ದರೂ ಟ್ರೈಲರ್ ಗಳ ಭರಾಟೆ . ನೋಡಿದವರಿಗೆಲ್ಲ ಇದನ್ನು ಇನ್ನೊಬ್ಬರಿಗೆ ತೋರಿಸದೆ ಇರಲಾರೆ ಅನ್ನಿಸುವಂತ ಟ್ರೈಲರ್ ಕೊಟ್ಟಿದ್ದು ಸಿಂಪಲ್ ಆಗೊಂದು ಲವ್ ಸ್ಟೋರಿ. ಆಮೇಲೆ ಲೂಸಿಯಾ, ಉಳಿದವರು ಕಂಡಂತೆಗಳೂ ಜನ ಮೆಚ್ಚುವಂತ ಟ್ರೈಲರ್ ಕೊಟ್ಟಿದ್ದವು . ಇದು ನಿಮಗೂ ಗೊತ್ತೇ ಇದೆ.

ಅದಾದ ಮೇಲೆ ಆ ಮಟ್ಟಕ್ಕೆ ಭರವಸೆ ಹುಟ್ಟಿಸುವಂತ ಟ್ರೈಲರ್ ಯಾವುದು ಬಂದೀತು ಅಂತ ಕಾದಿದ್ದವರಿಗೆ ಸಿಕ್ಕಿದ್ದು ರಂಗಿತರಂಗ. ಇದ್ಯಾವುದೋ ಕೇಳಿದ ಶಬ್ದ ಇದ್ದ ಹಾಗೂ ಇದೆ, ಹೊಸ ಶಬ್ದದ ತರಾನೂ ಇದೆ ಅನ್ನಿಸುವಂತ ಶೀರ್ಷಿಕೆ ಈ ಚಿತ್ರದ ಮೊದಲ ವಿಶೇಷ . ಅಬ್ಬರದ ಪ್ರಚಾರ, ವಿಚಿತ್ರ ವಿವಾದ ಮುಂತಾದ್ದು ಯಾವುದೂ ಇಲ್ಲದೆಯೇ ಸೌಂಡು ಮಾಡಿದ ಚಿತ್ರ ತಂಡ ಇದು . ಚಿತ್ರ ರಸಿಕರು, ಸಿನಿ ಪ್ರಿಯರು, ಅಭಿಮಾನಿ ದೇವತೆಗಳು ಎಲ್ಲ ಒಂದು ಸಲ ಕಣ್ಣರಳಿಸಿ ನೋಡುವಂತೆ ಮಾಡಿದ ಆಕರ್ಷಕ ತುಣುಕು ಕೊಟ್ಟು ಚಪ್ಪಾಳೆ ಗಿಟ್ಟಿಸಿಕೊಂಡಿತ್ತು ರಂಗಿತರಂಗ ತಂಡ . ಕುತೂಹಲ ಹುಟ್ಟಿಸುವ ದೃಶ್ಯಗಳು , ಅಜನೀಶ್ ಲೋಕನಾಥ್ ರ ಮೈ ನವಿರೀಳಿಸುವ ಹಿನ್ನೆಲೆ ಸಂಗೀತ, ಹಾಲಿವುಡ್ ಸಿನೆಮಾ ನೋಡಿದ ಹಾಗಿದೆ ಅನ್ನಿಸುವ ತಾಂತ್ರಿಕ ಗುಣ ಮಟ್ಟ ಎಲ್ಲ ಗಮನ ಸೆಳೆದಿದ್ದು ನಿಮ್ಮಲ್ಲ್ಲಿ ಕೆಲವರಿಗಾದರೂ ಗೊತ್ತಿದ್ದೀತು (ಗೊತ್ತಿಲ್ಲದಿದ್ದರೆ ಈಗಲಾದರೂ ಗೊತ್ತಾಯ್ತಲ್ಲ !)

ಇಂತಿಪ್ಪ ರಂಗಿತರಂಗ ಸಿನಿಮಾದ ಬಗ್ಗೆ ಸಿನಿಮಾ ಆಸಕ್ತರು ಖುಷಿ ಪಡುವಂತ ಸುದ್ದಿ ಬಂದಿದೆ. ಎಲ್ಲ ಸಿನಿಮಾಗಳಿಗೆ ಆಗುವಂತೆ ಈ ಚಿತ್ರಕ್ಕೂ ಸೆನ್ಸಾರ್ ಆಯಿತು. ಕೆಲವು ಮೂಲಗಳ ಪ್ರಕಾರ ಸೆನ್ಸಾರ್ ಮಂಡಳಿಗೆ ಸಿನಿಮಾ ತುಂಬಾ ಇಷ್ಟವಾಗಿದೆಯಂತೆ. ಅವರು ಮೆಚ್ಚಿ ಅಹುದಹುದು ಎಂದಿರುವ ಸುದ್ದಿ ಒಂದು ಪ್ರಖ್ಯಾತ ಟೀವಿ ಚಾನೆಲ್ ನ ಅಂಗಳಕ್ಕೂ ಮುಟ್ಟಿದೆಯಂತೆ . ಹೀಗೆ ಬಿಡುಗಡೆಗೆ ಮೊದಲೇ ಸಿನಿಮಾಕ್ಕೆ ಪ್ರಶಂಸೆ ಸಿಕ್ಕಿರುವುದು ಒಳ್ಳೆಯ ಸೂಚನೆಯೇ ಅಲ್ಲಿಗೆ ಸಿನಿಮಾ ನಾವಂದುಕೊಂಡ ಹಾಗೆ ಚೆನ್ನಾಗೇ ಇದೆ ಅಂತ ಆಯ್ತಲ್ಲ ! ಇನ್ನೇನಿದ್ದರೂ ಈ ಚಿತ್ರದ ಬಿಡುಗಡೆಗೆ ಕಾಯೋಣ ಅಷ್ಟೇ.

ಸೆನ್ಸಾರ್ ಮಂಡಳಿ ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ಕೊಟ್ಟಿದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top