RESPONSIVE LEADERBOARD AD AREA
Film News

ರಾಮ್ ಕುಮಾರ್ ಪುತ್ರ ಧೀರೇನ್, ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ…!

ನಟ ರಾಮ್ ಕುಮಾರ್ ಪುತ್ರ ‘ಧೀರೇನ್ ಕುಮಾರ್’ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ನಿಶ್ಚಿತವಾಗಿದೆ. 90 ರ ದಶಕದ ರೋಮ್ಯಾಂಟಿಕ್ ಹೀರೋ, ಮುದ್ದುಗಲ್ಲದ ರಾಮ್ ಕುಮಾರ್ ಮತ್ತು ಪೂರ್ಣಿಮಾ (ಡಾ. ರಾಜ್ ಕುಮಾರ್ ಪುತ್ರಿ) ದಂಪತಿಯ ಮಗ ಧೀರೇನ್ ಕುಮಾರ್ ರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಲು ಸದ್ದಿಲ್ಲದೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಇದಕ್ಕಾಗಿ ಧೀರೇನ್, ಸಿನಿಮಾದ ವಿವಿಧ ವಿಭಾಗಗಳ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಇವರ ಚಿತ್ರವನ್ನು ಯಶ್ ಅಭಿನಯದ ‘ಮೈ ನೇಮ್ ಇಸ್ ಕಿರಾತಕ’ ಚಿತ್ರವನ್ನು ನಿರ್ದೇಶಿಸುತ್ತಿರುವ ಅನಿಲ್ ಕುಮಾರ್ ನಿರ್ದೇಶಿಸಲಿದ್ದಾರೆ.

ಡಾಕ್ಟರ್ ಸೂರಿ ಮತ್ತು ಜಯಣ್ಣ ಕಂಬೈನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆಂದು ತಿಳಿದುಬಂದಿದೆ. ತೆಲುಗಿನಲ್ಲಿ ಇತ್ತೀಚೆಗೆ ಸೈಲೆಂಟ್ ಹಿಟ್ ಆಗಿರುವ ‘ಆರ್ ಎಕ್ಸ್ 100’ ಎಂಬ ಚಿತ್ರದ ರಿಮೇಕ್ ಹಕ್ಕುಗಳನ್ನು ನಿರ್ಮಾಪಕ ಜಯಣ್ಣ ಖರೀದಿಸಿದ್ದು, ಈ ಚಿತ್ರದ ಮೂಲಕ ರಾಮ್ ಕುಮಾರ್ ಪುತ್ರನನ್ನು ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ.

ಹಿಂದಿಯ ಸುನಿಲ್ ಶೆಟ್ಟಿ ಪುತ್ರ ಅಹಾನ್ ನನ್ನು ಕೂಡ ಇದೇ ‘ಆರ್ ಎಕ್ಸ್ 100’ ಚಿತ್ರದ ಹಿಂದಿ ಅವತರಣಿಕೆ ಯ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯಿಸಲು ಈ ಚಿತ್ರದ ಹಿಂದಿ ಹಕ್ಕುಗಳನ್ನು ನಿರ್ಮಾಪಕ ಸಾಜಿದ್ ನಾಡಿಯಾವಾಲ ಖರೀದಿಸಿದ್ದಾರಂತೆ.

ಒಟ್ಟಿನಲ್ಲಿ ಡಾ‌. ರಾಜ್ ಕುಟುಂಬದ ಮತ್ತೊಬ್ಬ ನಟ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವುದು ಖಚಿತವಾಗಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಾಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top