RESPONSIVE LEADERBOARD AD AREA
Film News

ರಮೇಶ್ ಅರವಿಂದ್ ಈಗ ಪತ್ತೇದಾರಿ ‘ಶಿವಾಜಿ ಸುರತ್ಕಲ್’..!!!

ಹಿರಿಯ ನಟ, ನಿರ್ದೇಶಕ ರಮೇಶ್ ಅರವಿಂದ್ ಈಗ ಪತ್ತೇದಾರನಾಗುತ್ತಿದ್ದಾರೆ..! ಹೌದು.. ಆಕಾಶ್ ಶ್ರೀವತ್ಸ ನಿರ್ದೇಶಿಸುತ್ತಿರುವ ಹೊಸ ಚಿತ್ರದಲ್ಲಿ ರಮೇಶ್ ಅವರು ನಟಿಸುತ್ತಿದ್ದು, ಈಗಾಗಲೇ ಶೇಕಡಾ 30 ರಷ್ಟು ಚಿತ್ರೀಕರಣ ಮುಗಿದಿದೆ. ಚಿತ್ರದ ಹೆಸರು ‘ಶಿವಾಜಿ ಸುರತ್ಕಲ್’, ಟ್ಯಾಗ್ ಲೈನ್ ‘ರಣಗಿರಿ ರಹಸ್ಯ’

“ಚಿತ್ರಕ್ಕೆ ಹೆಸರಿಡುವ ಕುರಿತು ಬಹಳ ತಲೆಕೆಡಿಸಿಕೊಂಡಿದ್ದೆವು. ಹಲವು ವಿಭಿನ್ನ ಟೈಟಲ್ ಗಳ ನಡುವೆ, ರಮೇಶ್ ಅರವಿಂದ್ ಮತ್ತು ನಾನು, ‘ಶಿವಾಜಿ’ ಮತ್ತು ‘ಸುರತ್ಕಲ್’ ಎಂಬ ಹೆಸರುಗಳನ್ನು ಸೇರಿಸಿ ಈ ವಿಭಿನ್ನ ಹೆಸರನ್ನು ಅಂತಿಮಗೊಳಿಸಿದೆವು”

“ಚಿತ್ರದಲ್ಲಿ ರಮೇಶ್ ಅರವಿಂದ್ ಅವರು ಎರಡು ಭಿನ್ನ ಶೇಡ್ ಗಳುಳ್ಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ಇದುವರೆಗೆ ಮಾಡಿರುವ ಎಲ್ಲಾ ಪಾತ್ರಗಳಿಗಿಂತ ಈ ಪಾತ್ರ ಭಿನ್ನವಾಗಿದ್ದು, ತುಂಬಾ ಕೋಪಿಷ್ಠನಾದ, ಕ್ಷಣ ಕ್ಷಣಕ್ಕೂ ಬದಲಾಗುವ ಭಿನ್ನ ವ್ಯಕ್ತಿತ್ವದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಶಿವಾಜಿ, ಮಂಗಳೂರಿನವ. ಕೆಲಸದ ನಿಮಿತ್ತ ಮೈಸೂರಿಗೆ ಬರುತ್ತಾನೆ. ನಂತರ ಮಡಿಕೇರಿಯಲ್ಲಿ ಪತ್ತೆದಾರಿ ಕೆಲಸದಲ್ಲಿ ತೊಡಗುತ್ತಾನೆ. ಇದೊಂದು ಕುತೂಹಲಕಾರಿ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸಿನಿಮಾವಾಗಲಿದೆ” ಎನ್ನುತ್ತಾರೆ ನಿರ್ದೇಶಕ ಆಕಾಶ್ ಶ್ರೀವತ್ಸ.

ಚಿತ್ರದ ಸ್ಕ್ರಿಪ್ಟ್ ಅನ್ನು ನಿರ್ದೇಶಕ ಆಕಾಶ್ ಮತ್ತು ಅಭಿಷೇಕ್ ಮಾಡಿದ್ದಾರೆ. “ಈ ಚಿತ್ರವನ್ನು ನಿರ್ದೇಶಿಸಲು ಪ್ರಮುಖ ಸ್ಪೂರ್ತಿ ಎಂದರೆ ರಮೇಶ್ ಅರವಿಂದ್ ಸರ್. ಅವರು ನಮ್ಮ ಕಥೆಯನ್ನು ಮೆಚ್ಚಿಕೊಂಡಿದ್ದಲ್ಲದೆ ನಮ್ಮ ಕೆಲಸದ ಕುರಿತು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಪ್ರತಿಸಲ ಅವರ ಬಳಿ ಚಿತ್ರದ ಕುರಿತು ಚರ್ಚಿಸಿದಾಗ, ಸ್ಕ್ರಿಪ್ಟ್ ಉತ್ತಮಗೊಳ್ಳುತ್ತಲೇ ಹೋಗುತ್ತಿತ್ತು. ಈ ಚಿತ್ರದ ಸ್ಕ್ರಿಪ್ಟ್ ಕೆಲಸದಲ್ಲಿ ರಮೇಶ್ ಅರವಿಂದ್ ಸಾಕಷ್ಟು ಸಲಹೆಗಳನ್ನು ನೀಡಿದರು. ಇಂತಹ ಸಿನಿಮಾಗಳಲ್ಲೇ ಇದೊಂದು ವಿಭಿನ್ನವಾದ ಸಿನಿಮಾವಾಗುವ ಭರವಸೆ ಇದೆ’ ಎಂದಿದ್ದಾರೆ ನಿರ್ದೇಶಕರು.

ಚಿತ್ರದಲ್ಲಿ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್, ಹಾಗೂ ಆರೋಹಿ ನಾರಾಯಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ಅಂಜನಾದ್ರಿ ಸಿನಿಮಾ ಕ್ರಿಯೇಷನ್ಸ್ ರವರು ನಿರ್ಮಾಣ ಮಾಡುತ್ತಿದ್ದು ಜೂಡಾ ಸ್ಯಾಂಡಿ ಸಂಗೀತ, ಜಯಂತ್ ಕಾಯ್ಕಿಣಿ ಸಾಹಿತ್ಯ ಮತ್ತು ಗುರುಪ್ರಸಾದ ಎಂ ಜಿ ಛಾಯಾಗ್ರಹಣ ಇರಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top