RESPONSIVE LEADERBOARD AD AREA
Movie Reviews

‘ರ‍್ಯಾಂಬೋ 2’ ಒಂದು ಪಕ್ಕಾ ಥ್ರಿಲ್ಲಿಂಗ್ ಕಾಮಿಡಿ ಸಿನಿಮಾ

ವಿಕ್ಟರಿ, ರಾಂಬೋ, ಅಧ್ಯಕ್ಷ ರೀತಿಯ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದ ಶರಣ್ – ತರುಣ್ ಸುಧೀರ್ ತಂಡ ಈಗ ರಾಂಬೋ2 ಎನ್ನುವ ಕಲರ್ಫುಲ್ ಕಾಮಿಡಿ ಸಿನಿಮಾದೊಂದಿಗೆ ವಾಪಾಸಾಗಿದ್ದಾರೆ. ಬಹುತೇಕ ರೋಡ್ ಜರ್ನಿಯಲ್ಲಿ ಸಾಗುವ ಚಿತ್ರ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರೊಂದಿಗೆ, ಥ್ರಿಲ್ ಕೂಡ ನೀಡಿ, ಕೊನೆಗೆ ಸಮಾಜಕ್ಕೆ ಒಂದು ಸಂದೇಶವನ್ನು ಸಹ ನೀಡಿ ಪಕ್ಕಾ ಸೆನ್ಸಿಬಲ್ ಎಂಟರ್ಟೈನರ್ ಆಗಿ ಹೊರಹೊಮ್ಮಿದೆ.

ಲಾರ್ಡ್ ಗಣೇಶನ ಕಟ್ಟಾ ಭಕ್ತನಾದ ನಾಯಕ ಕ್ರಿಷ್ ತನ್ನ ತಂದೆಯೊಂದಿಗೆ ಗ್ಯಾರೇಜ್ ನಡೆಸುತ್ತಿರುತ್ತಾನೆ. ಸದಾ ಜೀವನದಲ್ಲಿ ವೆರೈಟಿ ಬಯಸುವ ನಾಯಕನಿಗೆ ಮಯೂರಿ ಎನ್ನುವ ಮುದ್ದಾದ ಮಾಡ್ರರ್ನ್ ನಾಯಕಿಯ ಪರಿಚಯವಾಗುತ್ತದೆ. ನಾಯಕಿಯೊಂದಿಗೆ ಲಾಂಗ್ ಡ್ರೈವ್ ಡೇಟಿಂಗ್ ಹೋಗುವ ನಾಯಕನಿಗೆ ದಾರಿಯಲ್ಲಿ ಡಿಜೆ ಎನ್ನುವ ಕ್ವಾಟ್ಲೆ ಮನುಷ್ಯನ ಪರಿಚಯವಾಗುತ್ತದೆ. ಹಾಸ್ಯದಿಂದ ಕೂಡಿರುವ ಈ ಮೂವರ ಕಾರಿನ ಪಯಣಕ್ಕೆ ಮತ್ತೊಂದು ಕಾರ್ ಅಡ್ಡಿಯುಂಟುಮಾಡಿ ಈ ಮೂವರನ್ನು ಬೆಂಬಿಡದ ಬೇತಾಳನಂತೆ ಕಾಡಿ ಅಪಾಯದ ಅಂಚಿಗೆ ದೂಡುತ್ತದೆ. ಅಸಲಿಗೆ ಈ ಕಾರ್ ಯಾರದು? ಕ್ರಿಷ್ಗೂ ಈ ಕಾರ್ ಗು ಏನು ಸಂಬಂಧ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲು ನೀವು ರಾಂಬೋ2 ನೋಡಬೇಕು.

ಶರಣ್ ರವರು ಎಂದಿನಂತೆ ತಮ್ಮ ಬ್ರಾಂಡ್ ಕಾಮಿಡಿ ಟೈಮಿಂಗ್ ನಿಂದ ನಗಿಸುತ್ತಾರೆ. ಚಿಕ್ಕಣ್ಣ ತಮ್ಮ ಬಟ್ಲರ್ ಇಂಗ್ಲಿಷ್ ಮೂಲಕ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಿ ರಂಜಿಸುತ್ತಾರೆ. ಆಶಿಕಾ ಪ್ರತಿ ಫ್ರೇಮಲ್ಲೂ ಮುದ್ದಾಗಿ, ಮಾದಕವಾಗಿ ಕಾಣಿಸುವುದರೊಂದಿಗೆ ಉತ್ತಮವಾಗಿ ನಟಿಸಿ ಪ್ರೇಕ್ಷಕರನ್ನು ಸೆಳೆಯುತ್ತಾರೆ. ಸಾಧು ಮಹಾರಾಜ್ ಹಾಗು ಕುರೀ ಪ್ರತಾಪ್ ತಮ್ಮ ಕಾಮಿಡಿ ಪಂಚ್ ಎಷ್ಟು ಎಫೆಕ್ಟಿವ್ ಎಂದು ಕೆಲವೇ ದೃಶ್ಯಗಳಲ್ಲಿ ಭರ್ಜರಿಯಾಗಿ ಸಾಬೀತು ಮಾಡಿದ್ದಾರೆ. ರವಿಶಂಕರ್ ಅವರ ವಿಶಿಷ್ಟ ಪಾತ್ರ ಪ್ರೇಕ್ಷಕರ ಮನಸ್ಸಿಗೆ ತಟ್ಟುತ್ತದೆ.

ಗಣೇಶ ಹಾಗೂ ಮೂಷಿಕ ಅನಿಮೇಷನ್ ಪಾತ್ರಗಳಿಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿವರಾಜ್ ಕೆ.ಆರ್.ಪೇಟೆ ಅವರು ಹಿನ್ನೆಲೆ ಧ್ವನಿ ನೀಡಿದ್ದು ಸಿನಿಮಾದ ಕಥೆ ರಸವತ್ತಾಗಿ ಮೂಡಿಬರಲು ಸಹಕರಿಸಿವೆ.

ಅರ್ಜುನ್ ಜನ್ಯರವರ ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿದ್ದು ತೆರೆಯ ಮೇಲೆ ಕಣ್ಣು ಕೋರೈಸುವ ರಂಗು ರಂಗಿನ ಸೊಗಸಾದ ವಿನ್ಯಾಸದಲ್ಲಿ ಮೂಡಿಬಂದಿವೆ. ಛಾಯಾಗ್ರಹಣ ಚಿತ್ರದ ಬಹುದೊಡ್ಡ ಪ್ಲಸ್. ತರುಣ್ ಸುಧೀರ್ ಅವರ ಶರವೇಗದ ಚಿತ್ರಕತೆ ಹಾಗೂ ಅನಿಲ್ ಕುಮಾರ್ ಅವರ ದಕ್ಷ ನಿದೇರ್ಶನ ಚಿತ್ರದ ಮತ್ತೊಂದು ಶಕ್ತಿ. ಚುನಾವಣೆ ಬಿಸಿ ಮುಗಿದಿರುವುದರಿಂದ ಕುಟುಂಬ ಸಮೇತರಾಗಿ ಈ ಚಿತ್ರವನ್ನು ಬೇಸಿಗೆಯ ಬಿಸಿಲಲ್ಲಿ ತಂಪಾದ ಪಾನೀಯದಂತೆ ಆಸ್ವಾದಿಸಬಹುದು. ಮಿಸ್ ಮಾಡದೆ ನೋಡಿ ರಾಂಬೋ-೨.

ರೇಟಿಂಗ್ – ೪ / ೫

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top