RESPONSIVE LEADERBOARD AD AREA
Film News

ರಕ್ಷಿತ್ ಶೆಟ್ಟಿ ‘777ಚಾರ್ಲಿ’ಗೆ ಜೊತೆಯಾಗಲಿದ್ದಾರೆ ಈ ಮುದ್ದು ಪುಟಾಣಿಗಳು..!!

ರಕ್ಷಿತ್ ಶೆಟ್ಟಿ ಅಭಿನಯಿಸುತ್ತಿರುವ ‘777 ಚಾರ್ಲಿ’ ತನ್ನ ಹೆಸರಿನಿಂದ ಮತ್ತು ತಾರಾಗಣ ದಿಂದ ಸುದ್ದಿ ಮಾಡುತ್ತಿದೆ. ಈ ದಿನ ಹೊಸ ಸುದ್ದಿಯೊಂದು ಬಂದಿದ್ದು, ಚಿತ್ರದಲ್ಲಿ ಬಾಲ ಕಲಾವಿದೆಯರು ನಟಿಸುತ್ತಿದ್ದಾರೆ. ಬಾಲ ನಟಿಯರಾದ ಶಾರ್ವರಿ ಮತ್ತು ಪ್ರಾಣ್ಯ ಈ ಚಿತ್ರದಲ್ಲಿ ನಟಿಸುವುದು ಖಚಿತವಾಗಿದೆ.

ಇದೊಂದು ಪೂರ್ಣ ಮುಗ್ಧತೆಯ ಕೇಂದ್ರಿತ ಚಿತ್ರವಾಗಿದ್ದು, ಈ ಪುಟಾಣಿಗಳು ಬಹಳ ಪ್ರಮುಖ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಕಿರಣ್ ರಾಜ್ ಹೇಳಿದ್ದಾರೆ.

‘ಶಾರ್ವರಿ ಈ ಮೊದಲು ಡ್ರಾಮಾ ಜೂನಿಯರ್ಸ್ ನಲ್ಲಿ ತನ್ನ ಮುಗ್ಧ ಅಭಿನಯದಿಂದ ಗಮನ ಸೆಳೆದಿದ್ದ ಪುಟಾಣಿ. ಪ್ರಾಣ್ಯ, ಡಬ್ಸ್ಮ್ಯಾಶ್ ಮೂಲಕ ಗಮನ ಸೆಳೆದಿದ್ದ ಪುಟಾಣಿ. ಇವರಿಬ್ಬರನ್ನು ಆಡಿಶನ್ ಬಳಿಕ ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದಿದ್ದಾರೆ ನಿರ್ದೇಶಕರು.

ಈಗಾಗಲೇ ಚಿತ್ರದ ಶೇಕಡಾ 30 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಈ ನಡುವೆ ರಕ್ಷಿತ್ ಶೆಟ್ಟಿ ಅವರು ‘ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ತೊಡಗಿಕೊಂಡಿರುವುದರಿಂದ ಆ ಚಿತ್ರದ ಬಳಿಕ ‘ಚಾರ್ಲಿ’ ಚಿತ್ರೀಕರಣ ಮುಂದುವರೆಯಲಿದೆ. ಈ ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ರಕ್ಷಿತ್ ಶೆಟ್ಟಿ ಅವರಿಗೆ ನಾಯಕಿಯಾಗಿ ಸಂಗೀತ ಕಾಣಿಸಿಕೊಳ್ಳುತ್ತಿದ್ದಾರೆ. ಲ್ಯಾಬ್ರಡಾರ್ ನಾಯಿಗಳು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಹೊಂದಿವೆ ಎನ್ನಲಾಗುತ್ತಿದೆ. ‘ಕಿರಿಕ್ ಪಾರ್ಟಿ’ ಯ ಬಳಿಕ ರಕ್ಷಿತ್ ಶೆಟ್ಟಿ ಅವರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾತುರರಾಗಿದ್ದು, ‘ಅವನೇ ಶ್ರೀಮನ್ನಾರಾಯಣ’ ಮತ್ತು ‘777 ಚಾರ್ಲಿ’ ಚಿತ್ರಗಳ ನಿರೀಕ್ಷೆಯಲ್ಲಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top