RESPONSIVE LEADERBOARD AD AREA
Film News

ರಕ್ಷಿತ್ ಶೆಟ್ಟಿ ಯಿಂದ ‘ದಿ ಟೆರರಿಸ್ಟ್’ ಟ್ರೈಲರ್ ಬಿಡುಗಡೆ..

ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ  ಅಭಿನಯದ ‘ದಿ ಟೆರರಿಸ್ಟ್’ ಚಿತ್ರದ ಟ್ರೈಲರ್ ಸೆಪ್ಟೆಂಬರ್ 2 ರಂದು ಲಾಂಚ್ ಆಗಲಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ಟ್ರೈಲರ್ ನ್ನು ಮಂತ್ರಿ ಮಾಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ.

ಕನ್ನಡದಲ್ಲಿ ಇದೇ ಮೊದಲ ಬಾರಿಗೆ ‘ಐಮ್ಯಾಕ್ಸ್ ಫಾರ್ಮ್ಯಾಟ್’ ನಲ್ಲಿ ಚಿತ್ರದ ಟ್ರೈಲರ್ ಸಿದ್ಧಪಡಿಸಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅಭಿಮಾನಿಗಳಿಗೆ ಅದರ ಅನುಭವ ಮಾಡಿಸಲು ವಿಶೇಷ ಸಿದ್ಧತೆ ಮಾಡಿರುವುದಾಗಿ ಚಿತ್ರದ ನಿರ್ದೇಶಕ ಪಿ.ಸಿ. ಶೇಖರ್ ತಿಳಿಸಿದ್ದಾರೆ. ಮಿತ್ರ ಮತ್ತು ಭಾಮಾ ಜೋಡಿಯಾಗಿ ಅಭಿನಯಿಸಿದ್ದ ‘ರಾಗ’ ಎಂಬ ವಿಶೇಷ ಸಿನಿಮಾ ನಿರ್ದೇಶಿಸಿದ್ದ ಪಿ.ಸಿ. ಶೇಖರ್ ಈಗ ಹೊಸ ಸಬ್ಜೆಕ್ಟ್ ನೊಂದಿಗೆ ಮತ್ತೆ ಬಂದಿದ್ದಾರೆ.

ಚಿತ್ರವು ಮುಸ್ಲಿಂ ಹುಡುಗಿಯೊಬ್ಬಳು ಟೆರರಿಸ್ಟ್ ಆಗಿರುವ ವಿಭಿನ್ನ ಚಿತ್ರ ಕಥೆ ಹೊಂದಿದ್ದು, ಸಕತ್ ಸ್ಲಿಮ್ ಆಗಿರುವ ರಾಗಿಣಿ ದ್ವಿವೇದಿ ‘ರೇಷ್ಮಾ’ ಎಂಬ ಮುಸ್ಲಿಂ ಹುಡುಗಿಯ ಪಾತ್ರ ನಿರ್ವಹಿಸಿದ್ದಾರೆ. ಭಯೋತ್ಪಾದನೆಯ ಕಾರಣದಿಂದ ಮುಸ್ಲಿಂ ಕುಟುಂಬವೊಂದು ಅನುಭವಿಸುವ ಯಾತನೆಯ ಕಥಾಹಂದರ ಈ ಚಿತ್ರದಲ್ಲಿದೆ. ಚಿತ್ರಕ್ಕೆ ಎಸ್. ಪ್ರದೀಪ್ ವರ್ಮಾ ಸಂಗೀತ ನೀಡಿದ್ದು, ಮುರುಳಿ ಕೃಷ್ಣ ಛಾಯಾಗ್ರಹಣವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top