RESPONSIVE LEADERBOARD AD AREA
Movie Articles

Rajaratha trailer is Pure Wow, Amazing is the word

ಅಬ್ಬಬ್ಬಾ, ರಾಜರಥ ಟ್ರೈಲರ್ ಏಕಿಷ್ಟು ಸುಂದರ?

ರಂಗಿತರಂಗ ಖ್ಯಾತಿಯ ಭಂಡಾರಿ ಬ್ರದರ್ಸ್ ಕನ್ನಡಿಗರಿಗಾಗಿ ”ರಾಜರಥ” ಹೊತ್ತು ತಂದಿದ್ದಾರೆ. ನಿನ್ನೆ ರಾತ್ರಿ ಬಿಡುಗಡೆಯಾದ ಚಿತ್ರದ ಟ್ರೈಲರ್ ನೋಡಿದ ಪ್ರತಿಯೊಬ್ಬರೂ ಥ್ರಿಲ್ ಆಗಿದ್ದಾರೆ. ಎಂಥಾ ಕ್ವಾಲಿಟಿ, ಎಂಥಾ ವಿಶುಯಲ್..ಅಬ್ಬಬ್ಬಾ, ಪವರ್ ಸ್ಟಾರ್ ಪುನೀತ್ ಧ್ವನಿಯಲ್ಲಿ ಕಥೆ ಹೇಳುವಿಕೆ, ವಾವ್ ಸೂಪರ್ಬ್. ಇದೇನು ಕನ್ನಡ ಚಿತ್ರವೋ ಇಲ್ಲ ಬಿಗ್ ಬಜೆಟ್ ಬಾಲಿವುಡ್ ಚಿತ್ರವೋ? ಎಂಬ ಆಲೋಚನೆ ಸುಳಿಯುವಂತೆ ಮಾಡುತ್ತದೆ ಟ್ರೈಲರ್. ನಿರೂಪ್ ಭಂಡಾರಿ ಮತ್ತು ಅವಂತಿಕಾ ಶೆಟ್ಟಿ ಬಹಳ ಸುಂದರವಾಗಿ ಕಾಣುತ್ತಿದ್ದಾರೆ, ರವಿ ಶಂಕರ್ ಅವರ ವೃತ್ತಿ ಜೀವನದಲ್ಲೇ ಉತ್ತಮ ಪಾತ್ರವೊಂದರಲ್ಲಿ ಕಾಣಿಸಿಕೊಂಡಿರುವ ಕುರುಹು ಟ್ರೈಲರ್ ನೀಡಿಯೇ ಬಿಟ್ಟಿದೆ. ತಮಿಳು ಸ್ಟಾರ್ ಆರ್ಯ ಕನ್ನಡಿಗರಿಗೆ ಒಬ್ಬ ಅದ್ದೂರಿ ಖಡಕ್ ವಿಲ್ಲನ್ ಆಗಿ ಪರಿಚಯವಾಗಲಿದ್ದಾರೆ. ಕೊನೆಗೆ ರಾಜರಥ ಪರಿಚಯದೊಂದಿಗೆ ಪುನೀತ್ ಇದರಲ್ಲಿ ಬಸ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಎಂಬ ಅಚ್ಚರಿ ಮತ್ತು ಪುಳಕ ಭಾವನೆಗಳನ್ನು ನೀಡಿ ಟ್ರೈಲರ್ ಮುಗಿಯುತ್ತದೆ ಮತ್ತು ಮತ್ತೆ ಮತ್ತೆ ನೋಡಿಸಿಕೊಳ್ಳುತ್ತದೆ.

ರಂಗಿತರಂಗ, ರಾಜಕುಮಾರ, ಕಿರಿಕ್ ಪಾರ್ಟಿ ಚಿತ್ರಗಳನ್ನು ವಿದೇಶಗಳಲ್ಲಿ ವಿತರಣೆ ಮಾಡಿ ಗೆದ್ದಿದ್ದ ಜಾಲಿ ಹಿಟ್ಸ್ (ಅಜಯ್ ರೆಡ್ಡಿ, ಅಂಜು ವಲ್ಲಭನೇನಿ , ಸತೀಶ್ ಶಾಸ್ತ್ರಿ) ಸಂಸ್ಥೆ ಇದೇ ಮೊದಲ ಬಾರಿಗೆ ”ರಾಜರಥ” ಚಿತ್ರದ ಮೂಲಕ ನಿರ್ಮಾಣಕ್ಕೆ ಇಳಿದಿದ್ದಾರೆ. ಅನೂಪ್ ಭಂಡಾರಿ ಕಲ್ಪನೆಗಾಗಿ ನೀರಿನಂತೆ ಹಣ ಖರ್ಚು ಮಾಡಿರುವ ನಿರ್ಮಾಪಕರು ಚಿತ್ರರಸಿಕರಿಗೆ ಉನ್ನತ ಗುಣಮಟ್ಟದ ಮನರಂಜನೆ ನೀಡುವ ಶಪಥ ಮಾಡಿದಂತಿದೆ. ರಂಗಿಯಲ್ಲಿ ಇದ್ದಂತೆಯೇ ಅನೂಪ್ ಭಂಡಾರಿ ನಿರ್ದೇಶನದ ಜೊತೆಗೆ ಸಾಹಿತ್ಯ ರಚಿಸಿ ಸಂಗೀತವನ್ನೂ ನೀಡಿದ್ದಾರೆ. ಅಜನೀಶ್ ಲೋಕನಾಥ್ ಬ್ಯೂಟಿಫುಲ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ರಂಗಿಯ ವಿಲಿಯಂ ಡೇವಿಡ್ ಛಾಯಾಗ್ರಹಣ ರಾಜರಥಕ್ಕೂ ಇದೆ. ಬಾಲಿವುಡ್ ನ ಆರ್ಟ್ ಡೈರೆಕ್ಟರ್ ರಜತ್ ಪೋಡ್ಕರ್ ಕಲಾವಿನ್ಯಾಸ, ಹೈದೆರಾಬಾದ್ ಜಾನಿ ಮಾಸ್ಟರ್ ಮತ್ತು ಬೋಸ್ಕೋ ಸೀಸರ್ ನೃತ್ಯ ನಿರ್ದೇಶನ, ಬಾಹುಬಲಿ ಖ್ಯಾತಿಯ ಶಿವಕುಮಾರ್ ಕಲರ್ ಗ್ರೇಡಿಂಗ್ ರಾಜರಥ ಚಿತ್ರಕ್ಕಿದೆ. ಒಟ್ಟಿನಲ್ಲಿ ಅವರವರ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿರುವ ತಂತ್ರಜ್ಞರ ಸಮ್ಮಿಲನವೇ ”ರಾಜರಥ” ಚಿತ್ರದಲ್ಲಿದೆ. ಅದಕ್ಕೆ ನೋಡಿ ಟ್ರೈಲರ್ ಅಷ್ಟೊಂದು ಪಸಂದಾಗಿರೋದು.

ಅದ್ಭುತ ಟ್ರೈಲರ್ ಅಂದರೆ ತಪ್ಪೇ ಇಲ್ಲ, ಸ್ಕ್ರೀನ್ ರಿಚ್ ನೆಸ್ – ಲೊಕೇಶನ್ – ಸೆಟ್ಸ್ – ಟೇಕಿಂಗ್ಸ್ – ಕಾಸ್ಟ್ಯೂಮ್ಸ್ ಮತ್ತು ಪಾತ್ರ ಪರಿಚಯ ಎಲ್ಲಾ ಸುಪೀರಿಯರ್ ಕ್ವಾಲಿಟಿಲಿ ಇದೆ. ಎದೆ ತಟ್ಟಿಕೊಂಡು ಇದು ನಮ್ಮ ಕನ್ನಡ ಸಿನಿಮಾ ಅಂತ ಹೇಳಿಕೊಳ್ಳಬಹುದು. ಒಳ್ಳೆ ಬ್ಲಾಕ್ ಬಸ್ಟರ್ ಮೆಟೀರಿಯಲ್ ಅಂತ ಪ್ರತಿ ಸೆಕೆಂಡ್ ನ ಟ್ರೈಲರ್ ಹೇಳುತ್ತಿದೆ. ಅನೂಪ್ ಭಂಡಾರಿ ಚಿತ್ರಕಥೆ, ನಿರೂಪ್ ಭಂಡಾರಿ ಅವರ ಅಭಿನಯ ಎಲ್ಲ ಕ್ಲಿಕ್ ಆಗಿ ಬಿಟ್ಟರೆ ಇಂಡಸ್ಟ್ರಿ ಹಿಟ್ ಆಗುವ ಸಾಧ್ಯತೆಗಳೂ ಇವೆ.

ಈ ಅನೂಪ್ ಭಂಡಾರಿ ಇದ್ದಾರಲ್ಲ ಇವರು ಬರೀ ಟ್ಯಾಲೆಂಟ್ ಅಲ್ಲ, ಟೆರರ್ ಟ್ಯಾಲೆಂಟ್. ಇವರಿಗಿರುವ ವಿಷನ್, ಕಾಂಟ್ಯಾಕ್ಟ್ಸ್ & ಪ್ರಮೋಷನ್ ಸ್ಟ್ರಾಟರ್ಜಿ ಗಳು ಭಯಂಕರ. ರಾಜರಥ ಕನ್ನಡಿಗರಿಗಲ್ಲದೆ ”ರಾಜರಥಮ್” ಆಗಿ ತೆಲುಗು ಮತ್ತು ತಮಿಳು ಪ್ರೇಕ್ಷಕರಿಗೂ ಖುಷಿ ನೀಡಲಿದ್ದಾನೆ. ಕನ್ನಡ ಇಂಡಸ್ಟ್ರಿಯನ್ನು ಮತ್ತೊಂದು ರೇಂಜ್ ಗೆ ತಗೊಂಡು ಹೋಗಲು ಇಂತಹ ಸಿನಿಮಾಗಳು ಬೇಕು ನೋಡಿ. ಹಾಟ್ಸ್ ಆಫ್ ಟು ಅನೂಪ್ ಭಂಡಾರಿ ಸರ್.

Click Here To watch the Movie Trailer

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top