RESPONSIVE LEADERBOARD AD AREA
Film News

‘ ಒಂದು ಮೊಟ್ಟೆಯ ಕಥೆ’ ನಾಯಕನ ಮುಂದಿನ ಚಿತ್ರ ‘ಹರಿಹರ’..!!

‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಜನಪ್ರಿಯತೆ ಪಡೆದುಕೊಂಡ ರಾಜ್ ಬಿ ಶೆಟ್ಟಿ ಆ ಬಳಿಕ ಯಾವುದೇ ಚಿತ್ರವನ್ನು ನಿರ್ದೇಶಿಸಿರಲಿಲ್ಲ. ಇದೀಗ ಅವರು ತಮ್ಮ ಮುಂದಿನ ಚಿತ್ರವನ್ನು ನಿರ್ದೇಶಿಸುವುದು ಖಚಿತವಾಗಿದ್ದು ಚಿತ್ರಕ್ಕೆ ‘ಹರಿಹರ’ ಎಂಬ ಹೆಸರನ್ನು ಇಡಲಾಗಿದೆ.

ಚಿತ್ರದಲ್ಲಿ ನಿರ್ದೇಶನದ ಜೊತೆಗೆ ಅವರು ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಚಿತ್ರದಲ್ಲಿ ಇನ್ನೊಬ್ಬ ನಾಯಕ ಕೂಡ ಇರಲಿದ್ದಾರಂತೆ. ಆದರೆ ಆ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನುವುದು ಖಚಿತವಾಗಿಲ್ಲ. ಸೂಕ್ತ ನಾಯಕನ ಹುಡುಕಾಟದಲ್ಲಿದ್ದಾರೆ ರಾಜ್ ಬಿ ಶೆಟ್ಟಿ.

ರಾಜ್ ಬಿ ಶೆಟ್ಟಿ ಸದ್ಯ, ರಾಹುಲ್ ಮೆನನ್ ನಿರ್ದೇಶಿಸುತ್ತಿರುವ ‘ಗಾಂಧಿ’ ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರವು ಬರುವ ಮಾರ್ಚ್ 31ರ ವೇಳೆಗೆ ಪೂರ್ಣಗೊಳ್ಳಲಿದೆ. ಆ ಬಳಿಕ ಈ ಹೊಸ ಚಿತ್ರವನ್ನು ಆರಂಭಿಸಲಿದ್ದಾರಂತೆ.

“ಈಗ ನಾವು ಚಿತ್ರದ ಚಿತ್ರೀಕರಣದ ಲೊಕೇಶನ್ ಗಳನ್ನು ಅಂತಿಮಗೊಳಿಸಿದ್ದು, ಇನ್ನೊಬ್ಬ ನಾಯಕನ ಆಯ್ಕೆಯ ಬಳಿಕ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ” ಎಂದರು ಶೆಟ್ಟಿ.

ಈ ಚಿತ್ರಕ್ಕೆ ‘ಶ್ರೀ ದೇವಿ ಮಹಾತ್ಮೆ’ ಎಂಬ ಯಕ್ಷಗಾನದ ಕಥೆಯನ್ನು ಮೂಲವಾಗಿಟ್ಟುಕೊಂಡು ಚಿತ್ರಕತೆಯನ್ನು ಹೆಣೆದಿದ್ದಾರೆ. ಹಿಂದೆ ಬ್ರಹ್ಮ ಮತ್ತು ವಿಷ್ಣುವಿನ ಮಧ್ಯೆ ಅಹಂ ಮತ್ತು ಪ್ರತಿಷ್ಠೆಯ ಕಾರಣದಿಂದ ಉಂಟಾದ ವಿವಾದಗಳನ್ನು ಹಿನ್ನೆಲೆಯಾಗಿಸಿ ಈಗಿನ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಕತೆಯನ್ನು ಹೆಣೆದಿದ್ದಾರೆ.

“ನಮ್ಮ ದೇವರುಗಳೇ ‘ಅಹಂ’ ಮತ್ತು ಶ್ರೇಷ್ಠತೆಗಾಗಿ ತಮ್ಮ ನಡುವೆಯೇ ಹೋರಾಡಿದ ಕಥೆಗಳಿವೆ. ನಾವು ಹುಲು ಮನುಜರು ಇಂತಹ ಘಟನೆಗಳನ್ನು ನಿತ್ಯವೂ ಕಾಣುತ್ತೇವೆ. ಹಾಗಾಗಿ ಇಬ್ಬರೂ ತಮ್ಮ ಪ್ರತಿಷ್ಠೆ ಮತ್ತು ಅಹಂಕಾರದ ಕಾರಣಕ್ಕಾಗಿ ಹೊಡೆದಾಡುವ ಈ ಒಂದು ಅಂಶವನ್ನು ಇಟ್ಟುಕೊಂಡು ನಮ್ಮ ಪ್ರೇಕ್ಷಕರ ಮನಸ್ಸನ್ನು ಮುಟ್ಟಲು ಪ್ರಯತ್ನಿಸಿದ್ದೇನೆ” ಎನ್ನುತ್ತಾರೆ ರಾಜ್ ಬಿ ಶೆಟ್ಟಿ.

ಈ ನಡುವೆ ರಾಜ್ ಬಿ ಶೆಟ್ಟಿ, ರಾಧಾಕೃಷ್ಣ ರೆಡ್ಡಿ ನಿರ್ದೇಶಿಸುತ್ತಿರುವ ‘ಮಾಯಾ ಬಜಾರ್’ ಹಾಗು ‘ರಾಮನ ಅವತಾರ’ ಚಿತ್ರದಲ್ಲಿ ಡ್ಯಾನಿಶ್ ಶೇಟ್ ಮತ್ತು ರಿಷಿ ಅವರೊಂದಿಗೆ ನಟಿಸುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top