RESPONSIVE LEADERBOARD AD AREA
Film News

‘ನಟಸಾರ್ವಭೌಮ’ನ ಎಣ್ಣೆ ಗೀತೆ ಸಖತ್ ವೈರಲ್..!!

‘ನಟಸಾರ್ವಭೌಮ’ ಚಿತ್ರದ ಎರಡನೇ ಹಾಡು ಬಿಡುಗಡೆಯಾದ, ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಗಟ್ಟಲೆ ವಿವ್ಸ್ ಲಭ್ಯವಾಗಿದೆ. ಇದೇ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ಎಣ್ಣೆ ಸಂಬಂಧಿಸಿದ ಗೀತೆಯೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

‘ಓಪನ್ ದ ಬಾಟಲ್ …ಏಳುವರೆಗೇ ತುಟಿ ಒಣಗುತ್ತೆ ಏನು ಮಾಡೋಣ..! ಹಾಳು ಎಣ್ಣೆ ಚಟ ಬಿಡಬೇಕು.. ಕಮ್ಮಿ ಕುಡಿಯೋಣ…’ ಎಂಬ ಯೋಗರಾಜ್ ಭಟ್ಟರ ಗೀತೆಗೆ, ಡಿ ಇಮಾನ್ ಸಂಗೀತ ಸಂಯೋಜಿಸಿದ್ದಾರೆ. ವಿಜಯಪ್ರಕಾಶ್ ಹಾಡಿರುವ, ಫಿಲಾಸಫಿಕಲ್ ಟಚ್ ಹೊಂದಿರುವ ಈ ಗೀತೆ ಹೊಸ ವರ್ಷದ ಹಿಂದಿನ ದಿನ ಬಿಡುಗಡೆಯಾಗಿದ್ದು, ಸಂಚಲನ ಮೂಡಿಸಿದೆ. ಪುನೀತ್ ಅವರು ಈ ಗೀತೆಗೆ ವಿಶೇಷ ಸ್ಟೆಪ್ಸ್ ಹಾಕಿದ್ದು ಕೊರಿಯೋಗ್ರಫಿಯನ್ನು ಜಾನಿ ಮಾಸ್ಟರ್ ನಿರ್ವಹಿಸಿದ್ದಾರೆ.

ಈ ಗೀತೆಯನ್ನು ಕೇಳುತ್ತಿದ್ದರೆ, ಕುಡುಕರ ಅಚ್ಚುಮೆಚ್ಚಿನ ನಂಬರ್ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನಿಸುತ್ತದೆ. ಚಿತ್ರ ಬಿಡುಗಡೆಯಾದ ಬಹುಕಾಲದ ನಂತರವೂ ಕುಡುಕರ ನಾಲಿಗೆ ಮೇಲೆ ನಲಿಯುವುದು ಖಚಿತ. ಬೆಳಗಿನ ಜಾವ 3 ಗಂಟೆಯಲ್ಲಿ ಯೋಗರಾಜ್ ಭಟ್ಟರು ಈ ಗೀತೆಯನ್ನು ಬರೆದಿದ್ದಂತೆ.

ಪವನ್ ವಡೆಯರ್ ನಿರ್ದೇಶಿಸುತ್ತಿರುವ ಈ ಚಿತ್ರ ಫೆಬ್ರವರಿ 7ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವನ್ನು ರಾಕಲೈನ್ ವೆಂಕಟೇಶ್ ನಿರ್ಮಿಸುತ್ತಿದ್ದಾರೆ. ಲಹರಿ ಸಂಸ್ಥೆ ಆಡಿಯೋ ಹಕ್ಕುಗಳನ್ನು ಪಡೆದು ಕೊಂಡಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top