RESPONSIVE LEADERBOARD AD AREA
Film News

ಆಗ ‘ಅಣ್ಣಾಬಾಂಡ್’ ಈಗ ‘ಜೇಮ್ಸ್’ಬಾಂಡ್…!!

ಎರಡು ವರ್ಷಗಳ ಹಿಂದೆ ಪುನೀತ್ ರಾಜಕುಮಾರ್, ‘ಜೇಮ್ಸ್’ ಎಂಬ ಚಿತ್ರದಲ್ಲಿ ಅಭಿನಯಿಸುವ ಬಗ್ಗೆ ಘೋಷಿಸಿದ್ದರು. ಅದೇಕೋ ಈ ಪ್ರಾಜೆಕ್ಟ್ ಮುಂದೆ ಹೋಗಿತ್ತು. ಇದೀಗ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಈ ಚಿತ್ರವನ್ನು ನಿರ್ಮಿಸಲಿದ್ದು, ‘ಬಹದ್ದೂರ್’, ‘ಭರ್ಜರಿ’ ಹಾಗೂ ಶ್ರೀ ಮುರಳಿ ಅಭಿನಯದ ‘ಭರಾಟೆ’ ಚಿತ್ರಗಳ ಖ್ಯಾತಿಯ ಚೇತನ್ ಕುಮಾರ್, ಈ ಚಿತ್ರವನ್ನು ನಿರ್ದೇಶಿಸುವ ಹೊಣೆ ಹೊತ್ತಿದ್ದಾರೆ.

ಈಗಾಗಲೇ ಈ ಚಿತ್ರದ ಕುರಿತು ನಿರ್ದೇಶಕ ಮತ್ತು ನಿರ್ಮಾಪಕರು, ಪುನೀತ್ ಅವರೊಂದಿಗೆ ಕೆಲವು ಸುತ್ತಿನ ಮಾತುಕತೆ ನಡೆಸಿದ್ದು, ಇನ್ನಷ್ಟೇ ಈ ಚಿತ್ರದ ಅಧಿಕೃತ ಘೋಷಣೆ ಆಗಬೇಕಿದೆ. ಈಗಾಗಲೇ ‘ಜೇಮ್ಸ್’ ಹೆಸರಿರುವ ಲೋಗೋವನ್ನು ಕ್ರಿಯೇಟ್ ಮಾಡಿದ್ದು, ಪುನೀತ್ ರಾಜ್ ಕುಮಾರ್ ಧರಿಸಿರುವ ಟಿ ಶರ್ಟ್ ನ ಮುಂಭಾಗದಲ್ಲಿ ಮುದ್ರಿಸಲಾಗಿದೆ‌. ಈ ಫೋಟೋ ಬಿಡುಗಡೆಯಾಗಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ.

‘ಹೆಸರೇ ಸೂಚಿಸುವಂತೆ ‘ಜೇಮ್ಸ್ ಬಾಂಡ್’ ನೆನಪಿಸುವ ಚಿತ್ರ ಇದಾಗಿದ್ದರೂ, ಸ್ಥಳೀಯ ನೇಟಿವಿಟಿಗೆ ತಕ್ಕಂತೆ ಚಿತ್ರದ ಸ್ಟೈಲ್ ಮತ್ತು ಫ್ಲೇವರ್ ಇರಲಿದೆ’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ಪವರ್ ಸ್ಟಾರ್ ಅಭಿನಯದ ‘ನಟಸಾರ್ವಭೌಮ’ ಬಿಡುಗಡೆಯಾಗಲಿದ್ದು, ಆ ಬಳಿಕ ಸಂತೋಷ್ ಆನಂದರಾಮ್ ನಿರ್ದೇಶನದ ‘ಯುವರತ್ನ’, ಬರುವ ಪ್ರೇಮಿಗಳ ದಿನ (ಫೆಬ್ರವರಿ 14) ದಿಂದ ಚಿತ್ರೀಕರಣ ಆರಂಭಿಸಲಿದೆ. ಈ ಮಧ್ಯೆ ‘ಜೇಮ್ಸ್’ ಕೂಡ ಚಿತ್ರೀಕರಣ ಆರಂಭಿಸಲಿದೆ ಎನ್ನಲಾಗಿದೆ.

ಕೆಲವು ಮೂಲಗಳ ಪ್ರಕಾರ, ಪುನೀತ್ ಅವರ ಜನ್ಮದಿನದಂದು (ಮಾರ್ಚ್ 17) ಈ ಚಿತ್ರದ ಅಧಿಕೃತ ಘೋಷಣೆ ಮಾಡಲಾಗುವುದು ಎನ್ನಲಾಗುತ್ತಿದೆ. ‘ಜೇಮ್ಸ್’ ಮೂಲಕ ಪುನೀತ್ ಅವರ ಮತ್ತೊಂದು ಚಿತ್ರ ಬರಲಿರುವುದು ಪುನೀತ್ ಅಭಿಮಾನಿಗಳಿಗೆ ಖುಷಿ ನೀಡಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top