RESPONSIVE LEADERBOARD AD AREA
Film News

ಪುನೀತ್ ‘ರಾಜ ಕುಮಾರ’ ತಂಡದಿಂದ ಮತ್ತೊಂದು ಚಿತ್ರ….!!!

‘ರಾಜಕುಮಾರ’ ಚಿತ್ರದ ದೊಡ್ಡ ಯಶಸ್ಸಿನ ನಂತರ ಪುನೀತ್ ರಾಜಕುಮಾರ್, ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಗೂ ನಿರ್ಮಾಪಕ ವಿಜಯ್ ಕಿರಗುಂದೂರು ಮತ್ತೆ ಒಂದಾಗುತ್ತಿದ್ದಾರೆ. ಬರುವ ನವೆಂಬರ್ 1ರ ಕನ್ನಡ ರಾಜ್ಯೋತ್ಸವ ದಿನದಂದು ಈ ಜೋಡಿ ಹೊಸ ಚಿತ್ರಕ್ಕೆ ‘ಟೈಟಲ್’ ಅನ್ನು ಪುನೀತ್ ಅಭಿಮಾನಿಯೊಬ್ಬರ ಕೈಯಲ್ಲಿ ಬಿಡುಗಡೆ ಮಾಡಿಸುವುದಾಗಿ ಸುದ್ದಿ ನೀಡಿದೆ.

ಡಾ. ರಾಜಕುಮಾರ್ ಅವರ ಹಿಂದಿನ ಸಿನಿಮಾಗಳ ಹೆಸರುಗಳಲ್ಲಿ ಒಂದನ್ನು ಇಡಲು ನಿರ್ಧರಿಸಲಾಗಿದೆಯಂತೆ. ಕೆಲವು ಮೂಲಗಳ ಪ್ರಕಾರ ಚಿತ್ರಕ್ಕೆ ‘ಪರಶುರಾಮ’ ಎಂದು ಹೆಸರನ್ನು ಇಡಲು ನಿರ್ಧರಿಸಲಾಗಿದೆಯಂತೆ. ಆದರೆ ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಬರಬೇಕಿದೆ. ಡಾ.ರಾಜಕುಮಾರ್ ಅವರ ಚಿತ್ರದ ಹೆಸರಿಗೆ ಈಗಿನ ಟ್ರೆಂಡ್ ಗೆ ತಕ್ಕಂತೆ ತುಸು ಬದಲಾವಣೆ ಅಥವಾ ಸಬ್ ಟೈಟಲ್ ಇಡುವ ಮೂಲಕ ವಿಶೇಷತೆಯನ್ನು ತರಲಾಗುವುದು ಎಂಬುದು ಸದ್ಯಕ್ಕೆ ತಿಳಿದು ಬಂದ ವಿಷಯ.

ಕಳೆದ ವರ್ಷ ಇದೇ ತಂಡ ‘ರಾಜಕುಮಾರ’ ಚಿತ್ರದ ಮೂಲಕ ರಾಜ್ಯದಲ್ಲಿ ಭಾರಿ ಯಶಸ್ಸು ಪಡೆದಿತ್ತು. ಹಾಗಾಗಿ ಪುನೀತ್ ರ ಈ ಸಿನಿಮಾ ಬಗ್ಗೆ ಬಹಳ ಕುತೂಹಲ ಮೂಡಿದೆ. ಹೊಂಬಾಳೆ ಫಿಲಂಸ್ ರವರು ಈ ಚಿತ್ರದ ಚಿತ್ರೀಕರಣವನ್ನು ಡಿಸೆಂಬರ್ ನಲ್ಲಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top