RESPONSIVE LEADERBOARD AD AREA
Film News

‘ಪ್ರೀಮಿಯರ್ ಪದ್ಮಿನಿ’ ಬದುಕಿಗೆ ಹತ್ತಿರವಾದ ಸಿನಿಮಾ: ಜಗ್ಗೇಶ್

ಈ ವಾರ ಬಿಡುಗಡೆಯಾಗುತ್ತಿರುವ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ತಮಗೆ ಒಳ್ಳೆಯ ಹೆಸರು ತಂದು ಕೊಡಲಿದೆ ಎನ್ನುವ ಆತ್ಮವಿಶ್ವಾಸವನ್ನು ಜಗ್ಗೇಶ್ ಹೊಂದಿದ್ದಾರೆ. ಇದೊಂದು ಸಂಬಂಧಗಳ ನಡುವಿನ ಕಥೆಯಾಗಿದ್ದು ಪ್ರತಿಯೊಬ್ಬ ಪ್ರೇಕ್ಷಕನ ಎದೆಗೆ ನಾಟುವಂತಹ ಸಬ್ಜೆಕ್ಟ್ ಒಳಗೊಂಡಿದೆ ಎನ್ನುತ್ತಾರೆ ಜಗ್ಗೇಶ್.

ಚಿತ್ರದಲ್ಲಿ ಜಗ್ಗೇಶ್, ಪ್ರಿಮಿಯರ್ ಪದ್ಮಿನಿ ಕಾರ್ ನೊಂದಿಗೆ ಹೊಂದಿರುವ ಭಾವನಾತ್ಮಕ ಸಂಬಂಧದ ದೃಶ್ಯಗಳು ಇರಲಿವೆಯಂತೆ. ನಿಜ ಜೀವನದಲ್ಲಿ ಜಗ್ಗೇಶ್ ತಮ್ಮ ಬುಲೆಟ್ ಬೈಕ್ ನೊಂದಿಗೆ ಇದೇ ರೀತಿಯ ಸಂಬಂಧವನ್ನು ಹೊಂದಿದ್ದಾರಂತೆ. 1956 ರಲ್ಲಿ ಇಂಗ್ಲೆಂಡ್ ನಲ್ಲಿ ತಯಾರಾದಂತಹ ಬುಲೆಟ್ ನ್ನು ಅವರ ತಂದೆ ಓಡಿಸುತ್ತಿದ್ದರಂತೆ. ಅವರ ತಾಯಿ ಆ ಬುಲೆಟ್ ನ ಹಿಂಬದಿಯ ಖಾಯಂ ಸವಾರರು. ಜಗ್ಗೇಶ್ ಅವರ ತಂದೆ, ಹುಡುಗ ಜಗ್ಗೇಶ್ ರನ್ನು ಅದರ ಟ್ಯಾಂಕ್ ಮೇಲೆ ಕೂರಿಸುತ್ತಿದ್ದರಂತೆ. ಈಗಲೂ ಜಗ್ಗೇಶ್ ಅವರಿಗೆ ಈ ಬೈಕ್ ಎಂದರೆ ಮನೆಯ ಸದಸ್ಯ ಇದ್ದಂತೆ ಎಂದು ನೆನಪಿಸಿಕೊಳ್ಳುತ್ತಾರೆ.

“ಈಗ ಈ ಬುಲೆಟ್ ನ ಮಾರುಕಟ್ಟೆ ಮೌಲ್ಯ ಸುಮಾರು 15 ಲಕ್ಷ ಇರಬಹುದು. ಇಂಗ್ಲೆಂಡ್ ಗೆ ಕಳುಹಿಸಿ ಅದನ್ನು ನವೀಕರಣ ಮಾಡಿಸಿದ್ದೇನೆ. ಈಗ ನನ್ನ ಪುತ್ರರು, ಮೊಮ್ಮಕ್ಕಳು ಸೇರಿದಂತೆ ಎಲ್ಲರಿಗೂ ಈ ಬುಲೆಟ್ ಎಂದರೆ ಬಹಳ ಇಷ್ಟ” ಎಂದು ‘ಪ್ರೀಮಿಯರ್ ಪದ್ಮಿನಿ’ ಸಿನಿಮಾವನ್ನು ತಮ್ಮ ಬದುಕಿಗೆ ರಿಲೇಟ್ ಮಾಡಿಕೊಳ್ಳುತ್ತಾರೆ ಜಗ್ಗೇಶ್.

‘ಪ್ರೀಮಿಯರ್ ಪದ್ಮನಿ’ ಒಂದು ಬದುಕಿನ ಪಯಣದ ಕಥೆಯಾಗಿದ್ದು, ಎಲ್ಲರೂ ನೋಡಲೇ ಬೇಕಾದ ಸಿನಿಮಾ. ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಟೆಕ್ಕಿಗಳ ಮನಸ್ಸಿಗೆ ಹತ್ತಿರವಾಗುವಂಥ ಸಿನಿಮಾ ಇದಾಗಿದೆ’ ಎನ್ನುತ್ತಾರೆ ಜಗ್ಗೇಶ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top