RESPONSIVE LEADERBOARD AD AREA
Film News

‘ತಾರಕ್’ ನಂತರ ಮತ್ತೊಮ್ಮೆ ದರ್ಶನ್ ಜೊತೆಯಾಗಲಿದ್ದಾರೆ ಪ್ರಕಾಶ್…!

‘ತಾರಕ್’ ಚಿತ್ರ ನಿರ್ದೇಶಿಸುವ ಮೂಲಕ ದರ್ಶನ್ ಅವರಿಗೆ ಫ್ಯಾಮಿಲಿ ಎಂಟರ್ಟೈನರ್ ಇಮೇಜ್ ದೊರಕಿಸಿಕೊಟ್ಟ ಪ್ರಕಾಶ್ ಈಗ ಮತ್ತೊಮ್ಮೆ ದರ್ಶನ್ ಅವರಿಗಾಗಿ ಚಿತ್ರವೊಂದನ್ನು ನಿರ್ದೇಶಿಸಲಿದ್ದಾರೆ.
ಈ ಚಿತ್ರದ ಕಥೆಯನ್ನು ದರ್ಶನ್ ಅವರೊಂದಿಗೆ ಚರ್ಚಿಸಿದ್ದು, ಚಿತ್ರಕಥೆ ಸಿದ್ಧಗೊಳ್ಳುವ ಮುನ್ನವೇ ಚಾಲೆಂಜಿಂಗ್ ಸ್ಟಾರ್ ಈ ಚಿತ್ರ ಮಾಡಲು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ಪುನೀತ್ ಅಭಿನಯದ ಸೂಪರ್ ಹಿಟ್ ‘ಮಿಲನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಪ್ರಕಾಶ್ ಜಯರಾಮ್, ಕೌಟುಂಬಿಕ ಕಥಾಹಂದರ ಚಿತ್ರಗಳನ್ನು ನಿರ್ದೇಶಿಸುವ ನಿರ್ದೇಶಕ ಎಂದೇ ಪರಿಚಿತರು. ದರ್ಶನ್ ಅವರ 49 ನೇ ಚಿತ್ರ ‘ತಾರಕ್’ ಮೂಲಕ, ಮಾಸ್ ಹೀರೋ ದರ್ಶನ್ ಗೆ ಫ್ಯಾಮಿಲಿ ಆಡಿಯನ್ಸ್ ನೋಡುವಂತಹ ಸದಭಿರುಚಿಯ ಚಿತ್ರ ನಿರ್ದೇಶಿಸಿ, ಯಶಸ್ವಿಯಾಗಿದ್ದರು.

ಕಾರು ಅಪಘಾತದಿಂದ ದರ್ಶನ್ ಚೇತರಿಸಿಕೊಂಡಿದ್ದು, ವಿ ಹರಿಕೃಷ್ಣ ನಿರ್ದೇಶನದ ‘ಯಜಮಾನ’ ಚಿತ್ರದ ಡಬ್ಬಿಂಗ್ ಕೆಲಸದಲ್ಲಿ ನಿರತರಾಗಿದ್ದಾರೆ. ನಂತರ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ, ರಾಜೇಂದ್ರ ಸಿಂಗ್ ಬಾಬು ನಿರ್ದೇಶಿಸಲಿರುವ ‘ಗಂಡುಗಲಿ ಮದಕರಿ ನಾಯಕ’ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಬಳಿಕ ಉಮಾಪತಿ ನಿರ್ಮಾಣದ, ತರುಣ್ ಸುಧೀರ್ ನಿರ್ದೇಶಿಸಲಿರುವ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ನಂತರವಷ್ಟೇ ಪ್ರಕಾಶ್ ನಿರ್ದೇಶನದ ಸಿನಿಮಾ ಆರಂಭಗೊಳ್ಳಲಿದೆ.

‘ಯಜಮಾನ’ ಚಿತ್ರ ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರತಂಡ ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಎಂ ಡಿ ಶ್ರೀಧರ್ ನಿರ್ದೇಶನದ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ ‘ಒಡೆಯ’ ಚಿತ್ರದ ಚಿತ್ರೀಕರಣದಲ್ಲಿ ದರ್ಶನ್ ಡಿಸೆಂಬರ್ 10ರಿಂದ ಭಾಗವಹಿಸಲಿದ್ದಾರೆ. ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ ಸದ್ಯದಲ್ಲಿಯೇ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ 2019 ರಲ್ಲಿ ದರ್ಶನ್ ಅಭಿನಯದ ಸಾಲು ಸಾಲು ಬಿಗ್ ಬಜೆಟ್ ಚಿತ್ರಗಳು ಬರಲಿದ್ದು ಅವರ ಅಭಿಮಾನಿಗಳು ಖುಷಿಯಿಂದ ಕಾಯುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top