RESPONSIVE LEADERBOARD AD AREA
Film News

2019 ರಲ್ಲಿ ಪ್ರಜ್ವಲಿಸಲಿರುವ ಪ್ರಜ್ವಲ್ ದೇವರಾಜ್..!

ಪ್ರಜ್ವಲ್ ದೇವರಾಜ್ ಗೆ 2019 ಶುಭ ವಾಗುವ ಸೂಚನೆಗಳು ಕಂಡು ಬರುತ್ತಿವೆ. ‘ಇನ್ಸ್ಪೆಕ್ಟರ್ ವಿಕ್ರಂ’, ‘ಅರ್ಜುನ್ ಗೌಡ’, ‘ರುಧಿರ’ ಮತ್ತು ‘ಜಂಟಲ್ ಮ್ಯಾನ್’ ಪ್ರಜ್ವಲ್ ದೇವರಾಜ್ ಅವರ ಕೈಯಲ್ಲಿರುವ ಹೊಸ ಚಿತ್ರಗಳು. ಈ ನಡುವೆ ಪಿ ಸಿ ಶೇಖರ್ ನಿರ್ದೇಶಿಸಲಿರುವ ಹೊಸ ಚಿತ್ರವೊಂದರಲ್ಲಿ ಅಭಿನಯಿಸುವುದು ಖಚಿತವಾಗಿದೆ.

ಈ ಮೊದಲು ಇದೇ ಜೋಡಿ ‘ಅರ್ಜುನ’ ಚಿತ್ರಕ್ಕಾಗಿ ಒಂದಾಗಿತ್ತು. ಇದೀಗ ಹೊಸ ಚಿತ್ರಕ್ಕಾಗಿ ಎರಡನೇ ಬಾರಿಗೆ ಪಿ ಸಿ ಶೇಖರ್ ಮತ್ತು ಪ್ರಜ್ವಲ್ ದೇವರಾಜ್ ಒಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಜ್ವಲ್, ‘ನಾನು ಇದುವರೆಗೆ ಅಭಿನಯಿಸಿರುವ ಚಿತ್ರಗಳಲ್ಲಿ ‘ಅರ್ಜುನ’ ವಿಶೇಷವಾದ ಚಿತ್ರ. ಅದರಲ್ಲಿ ನನ್ನ ಅಭಿನಯ ಖುಷಿ ಕೊಟ್ಟಿತ್ತು. ಪಿಸಿ ಶೇಖರ್ ಒಂದು ಅತ್ಯುತ್ತಮವಾದ ಕಥೆಯಲ್ಲಿ ಅಭಿನಯಿಸಲು ಅತ್ಯುತ್ತಮ ಅವಕಾಶ ಮಾಡಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಅವರ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿರುವುದು ಖುಷಿಯಾಗಿದೆ’ ಎನ್ನುತ್ತಾರೆ.

ಜಡೇಶ್ ಕುಮಾರ್ ನಿರ್ದೇಶನದ ‘ಜಂಟಲ್ ಮ್ಯಾನ್’, ಶಂಕರ್ ನಿರ್ದೇಶನದ ‘ಅರ್ಜುನ್ ಗೌಡ’ ಚಿತ್ರಗಳ ಚಿತ್ರೀಕರಣ ನಡೆಯುತ್ತಿದ್ದು, ಆ ಬಳಿಕ ಪ್ರಜ್ವಲ್, ಶ್ರೀ ನರಸಿಂಹ ನಿರ್ದೇಶನದ ‘ಇನ್ಸ್‌ಪೆಕ್ಟರ್ ವಿಕ್ರಂ’ ಚಿತ್ರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಒಟ್ಟಿನಲ್ಲಿ ಕೈ ತುಂಬಾ ಉತ್ತಮ ಪ್ರಾಜೆಕ್ಟ್ ಗಳನ್ನು ಇಟ್ಟುಕೊಂಡಿರುವ ಪ್ರಜ್ವಲ್ ಗೆ 2019 ಶುಭ ತರಲಿದೆಯೇ..? ಕಾದು ನೋಡಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top