RESPONSIVE LEADERBOARD AD AREA
Film News

ದೇವಿ – ಸೀನಾ ಎಂಬಿಬ್ಬರ ವಿಚಿತ್ರ ಜೀವನದ ಅದ್ವಿತೀಯ ಚಿತ್ರಣವೇ “ಪಾಕ್ ಕಾರ್ನ್ ಮಂಕಿ ಟೈಗರ್”

ಕನ್ನಡ ಸಿನಿಮಾ ಆಡಿಯನ್ಸ್ ಗಳಿಗೆ ಅದರಲ್ಲೂ ಯೂತ್ ಗಳಿಗೆ ದುನಿಯಾ ಸೂರಿ ಅಂದರೆ ಭಾರಿ ಅಚ್ಚುಮೆಚ್ಚು. ಅದಕೆ ಕಾರಣ ಅವರು ಮಾಡುವ ಡಿಫರೆಂಟಾದ ರಿಯಲ್ಲಿಸ್ಟಿಕ್ ಆದ ಚಿತ್ರಗಳು. ಬೇಸಿಕಲಿ ದುನಿಯಾ ಸೂರಿ ಅವರು ಮಾಡೋದೇ ಒಂದಕ್ಕಿಂತ ಒಂದು ಡಿಫರೆಂಟ್ ಆದ ಸಿನಿಮಾಗಳನ್ನೇ. ಆದರೆ ಈ ಬಾರಿ ಅವರು ಬಾಯಿಬಿಟ್ಟು ಇದು ಬಹಳ ಡಿಫರೆಂಟ್ ಆದ ಸಿನಿಮಾ ಅಂತ ಹೇಳಿಕೊಂಡಿದ್ದಾರೆ. ಅದುವೇ ಪಾಪ್ಕಾರ್ನ್ ಮಂಕಿ ಟೈಗರ್.

ಕಳೆದ ಒಂದು ವರ್ಷ ನಿರಂತರವಾಗಿ, 9 ಹಂತಗಳಲ್ಲಿ ಚಿತ್ರೀಕರಣ ನಡೆದಿರುವ ಸಿನಿಮಾ ಇದು. ಧನಂಜಯ್, ನಿವೇದಿತ ಬಿಟ್ಟರೆ ಮತ್ತೆಲ್ಲರೂ ಹೊಸ ಕಲಾವಿದರೇ. ಈ ಬಾರಿ ತಮಗೆ ತಾವೇ ಚಾಲೆಂಜ್ ಹಾಕಿಕೊಂಡು ಕೆಲಸ ಮಾಡಿದ್ದಾರಂತೆ ದುನಿಯಾ ಸೂರಿ ಕನ್ನಡ ಪ್ರೇಕ್ಷಕರು ಇದುವರೆಗೂ ನೋಡಿದಂತಹ ಒಂದು ವಿಚಿತ್ರ ಸ್ವಭಾವಗಳ, ವ್ಯಕ್ತಿತ್ವಗಳ, ವ್ಯಕ್ತಿಗಳ ಲೋಕಕ್ಕೆ ನಮ್ಮನ್ನೆಲ್ಲಾ ಕರೆದೊಯ್ಯಲ್ಲಿದ್ದಾರೆ ಅವರು. ಅಸಲಿ ಪಾಪ್ ಕಾರ್ನ್ ಮಂಕಿ ಟೈಗರ್ ಅಂದರೆ ಏನು ಗೊತ್ತಾ? ಅದು ಸಿನಿಮಾದಲ್ಲಿರುವ ಪ್ರಮುಖ ಪಾತ್ರಗಳ ಜೀವನದ ಮೂರು ಹಂತಗಳಿಗೆ ಅವರು ಇಟ್ಟಿರುವ ಹೆಸರು. ಖತರ್ನಾಕ್ ಕ್ಯಾರೆಕ್ಟರ್ಗಳು, ಚಿತ್ರ ವಿಚಿತ್ರ ಹೆಸರಿನ ಸೋಷಿಯಲ್ ಎಲಿಮೆಂಟ್ ಗಳು, ಸಾಮಾನ್ಯ ಸ್ತರದ ಜನ ಜೀವನದ ನೈಜ ಮುಖಗಳು, ಕ್ರೈಮು, ಲವ್ವು, ಧೋಕ ಹೀಗೆ ಸೂರಿ ಸಿನಿಮಾಗಳಲ್ಲಿ ಕಾಣ ಸಿಗುವ ಎಲ್ಲಾ ಐಟಂಗಳು ಈ ಸಿನಿಮಾದಲ್ಲಿ ಡಬಲ್ ಡಬಲ್ ಸಿಗಲಿವೆ.

ಯಾರೇ ಒಬ್ಬನನ್ನು ತಡೆದು ನಿಲ್ಲಿಸಿ ಅವನ ಕಥೆ ಕೇಳಿದರೆ ಗಂಟೆಗಟ್ಟಲೆ ಹೇಳುತ್ತಾನೆ. ಹಾಗೆಯೇ ಈ ಸಿನಿಮಾದಲ್ಲಿ ದೇವಿ ಹಾಗೂ ಸೀನಾ ಎಂಬ ಇಬ್ಬರು ವ್ಯಕ್ತಿಗಳ ಇಡೀ ಜೀವನವನ್ನು 2 ಗಂಟೆ ಅವಧಿಯಲ್ಲಿ ಜನರ ಮುಂದೆ ರೋಚಕವಾಗಿ ತೆರದಿಡಲಿದ್ದೇನೆ ಎಂದು ಸುಕ್ಕ ಸೂರಿ ಹೇಳಿಕೊಂಡಿದ್ದಾರೆ. ಸಿನಿಮಾದಲ್ಲಿ ಖಳ ನಾಯಕನಾಗಿ ನಿರ್ಮಾಪಕ ಹಾಗೂ ನಟಿ ಭಾವನಾ ಮೆನನ್ ಅವರ ಪತಿ ನವೀನ್ ಯಾರು ಊಹಿಸದಂತಹ ಪಾತ್ರದಲ್ಲಿ ನಟಿಸಿದ್ದಾರಂತೆ. ಟಗರು ಚಿತ್ರದಲ್ಲಿ ಡಾಲಿ ಪಾತ್ರದಲ್ಲಿ ಅಬ್ಬರಿಸಿದ್ದ ಧನಂಜಯ್ ಈ ಸಿನಿಮಾದಲ್ಲಂತೂ ತಮ್ಮೊಳಗಿರುವ ಎಲ್ಲ ಕಲಾಕಾರ ಮುಖವನ್ನು ಸಾದರಪಡಿಸಿದ್ದಾರೆ ಎನ್ನಲಾಗಿದೆ.

ದುನಿಯಾ ಸೂರಿ ಅಂದರೇನೇ ಇದ್ದಿದ್ದು ಇದ್ದ ಹಾಗೆ ತೋರಿಸೋ ಸುಕ್ಕಾ ರಾ ಡೈರೆಕ್ಟರ್. ಈ ಸಿನಿಮಾ ನೋಡಿದ ಮೇಲೆ ದುನಿಯಾ ಸೂರಿ ಅವರಿಗೆ ಹೊಚ್ಚ ಹೊಸ ಟೈಟಲ್ ಗಳು ಸಿಗೋದು ಪಕ್ಕಾ ಅಂತ ಗಾಂಧಿನಗರದಲ್ಲಿ ಗುಲ್ಲೆಬ್ಬಿದೆ. ಈಗಾಗಲೇ ಡಬ್ಬಿಂಗ್ ಮುಗಿಸಿರುವ ಪಾಪ್ ಕಾರ್ನ್ ಮಂಕಿ ಟೈಗರ್ ಅತಿ ಶೀಘ್ರದಲ್ಲಿ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top