RESPONSIVE LEADERBOARD AD AREA
Film News

ಯೋಗರಾಜ್ ಭಟ್ಟರ ‘ಪಂಚತಂತ್ರ’ ಮತ್ತು ಗೇಮ್ ಆ್ಯಪ್..!!

ಯೋಗರಾಜ್ ಭಟ್ಟರ ‘ಪಂಚತಂತ್ರ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕರು ಒಂದು ಗೇಮಿಂಗ್ ಆ್ಯಪ್ ಅನ್ನು ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ರೇಸ್ ಹಿನ್ನೆಲೆಯ ಕತೆಯನ್ನು ಆಧರಿಸಿದ್ದು, ಚಿತ್ರರಸಿಕರನ್ನು ಆಕರ್ಷಿಸಲು ಈ ಒಂದು ಹೊಸ ಪ್ರಯತ್ನವನ್ನು ಯೋಗರಾಜ್ ಭಟ್ ಮತ್ತು ತಂಡ ಹಮ್ಮಿಕೊಂಡಿದೆ. ಈ ಚಿತ್ರದ ಟೀಸರ್ ಮತ್ತು ಆ್ಯಪ್ ಅನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು.

ಈ ಮೊಬೈಲ್ ಆ್ಯಪ್ ಅನ್ನು ವಾಲಾ ಇಂಟರಾಕ್ಟಿವ್ ಸಂಸ್ಥೆಯು ನಿರ್ಮಾಣ ಮಾಡಿದ್ದು, ಈ ಗೇಮ್ ನಲ್ಲಿ ಮೂರು ಹಂತಗಳಿವೆ. ಚಿತ್ರದ ನಾಯಕ ವಿಹಾನ್, ನಾಯಕಿ ಸೋನಲ್ ಮಂಟೇರಿಯೋ, ಅಕ್ಷರ ಗೌಡ ಮತ್ತು ರಂಗಾಯಣ ರಘು ಈ ಗೇಮ್ ನಲ್ಲಿ ನಿಮಗೆ ಸಿಗುತ್ತಾರೆ.

ಈ ಆಟವು ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲೂ ಲಭ್ಯವಿದೆ. ರೇಸ್ ನ ಮಜವನ್ನು ವರ್ಚುಅಲ್ ಆಗಿ ನೀವು ಅನುಭವಿಸಬಹುದಾಗಿದೆ. ಚಿತ್ರದಲ್ಲಿ ವಿ ಹರಿಕೃಷ್ಣ ಅವರ ಸಂಗೀತದ ಹಾಡುಗಳು ಈಗಾಗಲೆ ಚಿತ್ರದ ಸೋಶಿಯಲ್ ಮೀಡಿಯಾದಲ್ಲಿ ಟಾಪ್‌ ಸ್ಥಾನ ಹೊಂದಿವೆ.

ಹರಿಪ್ರಸಾದ್ ಜಯಣ್ಣ, ಹೇಮಂತ್ ಪರಾಡ್ಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಸುಜ್ಞಾನ್ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಚಿತ್ರವು ಇದೇ ಮಾರ್ಚ್ 29 ರಂದು ಬಿಡುಗಡೆಯಾಗುತ್ತಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top