RESPONSIVE LEADERBOARD AD AREA
Film News

ಒಂಟಿ ತಂಟೆಗೆ ಬಂದರೆ ಗುನ್ನಾ ಗ್ಯಾರಂಟಿ

ಒಂಟಿ ಅಕ್ಷರಶಃ ಒಬ್ಬ ಉಡಾಫೆ ಯುವಕ. ಫ್ರೆಂಡ್ಸ್ ಗೆ ಸಮಸ್ಯೆ ಎದುರಾದಾಗಲೆಲ್ಲ ನುಗ್ಗಿ ನುಗ್ಗಿ ಹೋಗುವ ಅವನಿಗೆ, ತನ್ನದೇ ಜೀವನದಲ್ಲಿ ಜವಾಬ್ದಾರಿಯಿಂದ ಬದುಕಿ ದುಡಿದು ತನ್ನ ಕಾಲ ಮೇಲೆ ತಾನೇ ನಿಲ್ಲಬೇಕೆನ್ನುವ ಉಮೇದಿಯೇ ಇಲ್ಲ. ಅಣ್ಣನ ಬುದ್ಧಿ ಮಾತು ಕಿವಿಗೆ ಕೇಳಲ್ಲ, ಸ್ನೇಹಿತರ ತಂಟೆಗೆ ಬಂದವರನ್ನು ಸುಮ್ಮನೆ ಬಿಡಲ್ಲ. ಹುಡುಗರೆದುರು ರಾಮಾಚಾರಿ ಹುಡುಗಿ ಎದುರು ಪ್ರೇಮಾಚಾರಿ. ಇಂಥ ಥೇಟು ರಾಂಗ್ ನಂಬರ್ ಕ್ಯಾರೆಕ್ಟರ್ ಹುಡುಗನ ಆಪ್ತರ ತಂಟೆಗೆ ಬಂದರೆ ಅವನು ಸುಮ್ಮನೆ ಬಿಡುತ್ತಾನಾ? ಟೋಟಲ್ ಆಗಿ ಇದು ಒಂಟಿ ಅನ್ನೋನ ಹಾರ್ಟಲ್ಲಿ ಎಷ್ಟು ಮ್ಯಾಟರ್ ಇದೆ ಅಂತ ತೋರಿಸುವ ಕಥೆ ಇರೋ ಚಿತ್ರ.

ಒರಟ ಐ ಲವ್ ಯೂ ನಿರ್ದೇಶನ ಮಾಡಿದ್ದ ಶ್ರೀ ಅವರು ಮಾಡಿದರೆ ಮಾಸ್ ಸಿನಿಮಾವನ್ನೇ ಮಾಡಬೇಕು ಅಂತ ಮಾಡಿರೋ ರೆಗ್ಯುಲರ್ ಮಾಸ್ ಸಿನಿಮಾನೇ ಒಂಟಿ. ಇಲ್ಲಿ ಒಂದರ ಹಿಂದೊಂದು ಅದ್ಧೂರಿ ಫೈಟ್ಸ್ ಇವೆ, ಹೀರೋಯಿಸಂ ಡೈಲಾಗುಗಳಿದ್ದಾವೆ, ಹಠಮಾರಿ ಹುಡುಗಿಯನ್ನು ಕಾಡಿ ಬೀಳಿಸಿಕೊಳ್ಳುವ ಲವ್ ಟ್ರ್ಯಾಕ್ ಇದೆ ಜೊತೆಗೆ ಖತರ್ನಾಕ್ ವಿಲನ್ ಗಳ ಉಪಟಳವೂ ಇದೆ. ಮಾಸ್ ಸಿನಿಮಾಗಳಲ್ಲಿ ನೀವು ಇದುವರೆಗೂ ನೋಡಿರುವ ಎಲ್ಲವೂ ಒಂದರ ಹಿಂದೊಂದು ಬಂದು ಹೋಗುತ್ತವೆ.

ನಾಯಕ ಆರ್ಯ ಮಾಸ್ ಹೀರೋ ಆಗಿ ಅಬ್ಬರಿಸಲು ಪ್ರಯತ್ನಪಟ್ಟರೆ, ಮೇಘನಾ ರಾಜ್ ಕಾಲೇಜು ಹುಡುಗಿಯಾಗಿ, ಪ್ರೇಯಸಿಯಾಗಿ ಸಿನಿಪ್ರಿಯರ ಕಣ್ತುಂಬಿಕೊಳ್ಳುತ್ತಾರೆ. ಮಜಾ ಟಾಕೀಸ್ ಪವನ್ ಹಾಸ್ಯ ಹಾಗೂ ನೀನಾಸಂ ಅಶ್ವತ್ಥ್ ಅವರ ಪಾತ್ರ ಪೋಷಣೆ ಚೆನ್ನಾಗಿದೆ, ಲೋಹಿತಾಶ್ವ, ದೇವರಾಜ್ ಗಟ್ಟಿ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾರೆ.

ತಾಂತ್ರಿಕ ವರ್ಗದಲ್ಲಿ ಮನೋಜ್ ಸಂಗೀತ, ಶಶಿಧರ್ ಛಾಯಾಗ್ರಹಣ ಚೆನ್ನಾಗಿ ಮೂಡಿಬಂದಿದೆ. ಉಳಿದಂತೆ ಒಂದು ಆ್ಯಕ್ಷನ್ ಸಿನಿಮಾ ಮಾಡಬೇಕೆನ್ನುವ ಇಡೀ ತಂಡದ ಕಾರ್ಯವೈಖರಿ ತಕ್ಕಮಟ್ಟಿಗೆ ಸಫಲವಾಗಿದೆ. ಫೈಟಿಂಗ್ ಸಿನಿಮಾ ಪ್ರಿಯರಿಗೆ ಒಂಟಿ ಹೊಡೆದಾಟ ಇಷ್ಟವಾದೀತು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top