RESPONSIVE LEADERBOARD AD AREA
Movie Reviews

ಜರ್ನಿಯಲ್ಲಿ ಸಿಗುವ ವಿಧವಿಧವಾದ ಬಣ್ಣಗಳು

ಪಯಣ ಎನ್ನುವುದು ನಮ್ಮೊಳಗಿನ ಇನ್ನೊಬ್ಬ ವ್ಯಕ್ತಿಯ ಪರಿಚಯ ಮಾಡುತ್ತದೆ. ಅಲ್ಲಿಯವರೆಗೂ ಪಕ್ಕದಲ್ಲೇ ಇದ್ದು ತಿಳಿಯದಂತಹ ಎಷ್ಟೋ ವಿಚಾರಗಳು ಪಯಣದಿಂದ ಹೊಸದಾಗಿ ಸಾಕ್ಷಾತ್ಕಾರವಾಗುತ್ತದೆ. ಪಯಣದ ಹಿರಿಮೆಯೇ ಅಂತಹುದು. ಹಾಗೆ ಪಯಣದ ಹಿರಿಮೆಯನ್ನು ತೋರಿಸಿದ್ದ ಹಿಂದಿಯ ಐಕಾನಿಕ್ ಜರ್ನಿ ಬೇಸ್ ಸಿನಿಮಾಗಳಾದಂತಹ ದಿಲ್ ಚಾಹ್ತಾ ಹೈ, ಜಿಂದಗಿ ನಾ ಮಿಲೇಗಿ ದೊಬಾರಾ ಮಾದರಿಯಲ್ಲಿ ಮೂಡಿಬಂದಿರುವ “ಒಂಥರ ಬಣ್ಣಗಳು” ಪ್ರೇಕ್ಷಕರಿಗೆ ಹಿತವಾದ ಜರ್ನಿಯ ಅನುಭವ ನೀಡುತ್ತದೆ.

ಮೂವರು ಸ್ನೇಹಿತರು ತಮ್ಮ ಒತ್ತಡದ ವೃತ್ತಿ ಜೀವನದ ಏಕತಾನತೆಯ ಜೀವನದಿಂದ ಬೇಸತ್ತು ಬಾದಾಮಿ ಹುಬ್ಬಳ್ಳಿ ಮಂಗಳೂರಿಗೆ ಕಾರಿನಲ್ಲಿ ಪ್ರಯಾಣ ಮಾಡಲು ತೀರ್ಮಾನಿಸುತ್ತಾರೆ. ಅವರೊಡನೆ ಇಬ್ಬರು ನಾಯಕಿಯರು ಕತೆಯ ಕ್ರಮೇಣ ಕೂಡಿಕೊಳ್ಳುತ್ತಾರೆ. ಹೀಗೆ ಸಾಗುವ ಕತೆ slice of the life ಮಾದರಿಯಲ್ಲಿ ಮುಂದುವರೆಯುತ್ತಾ ಪ್ರೇಕ್ಷಕರಿಗೆ ಹಿತವಾಗಿ ಮುದ ನೀಡುತ್ತಾ ಸಾಗುತ್ತದೆ.

ಜರ್ನಿಯ ತಗ್ಗುಗಳೆಂದರೆ ಕೊಂಚ ನಿಧಾನಗತಿಯ ಫ್ಲಾಶ್ಬಾಕ್ ಚಿತ್ರಣ ಹಾಗೂ ಕೆಲ ಹಾಡುಗಳ ಪ್ಲೇಸ್ ಮೆಂಟ್. ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್ ಮನೋಹರ್ ಜೋಷಿಯವರ ಅತ್ಯುತ್ತಮ ಛಾಯಾಗ್ರಹಣ. ಬಿ.ಜೆ.ಭರತ್ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕಥೆಗೆ ಹಾಸುಹೊಕ್ಕಾಗಿದೆ. ದತ್ತಣ್ಣ ಅವರ ಅಭಿನಯ as usual ಬೊಂಬಾಟ್. ಹಿತ ಚಂದ್ರಶೇಖರ್ ಅವರ ಅಭಿನಯ ಎಲ್ಲರ ಗಮನ ಸೆಳೆಯುತ್ತದೆ. ಪ್ರತಾಪ್ ನಾರಾಯಣ್, ಕಿರಣ್ ಶ್ರೀನಿವಾಸ್ ಹಾಗೂ ಸೋನು ಗೌಡ ಅವರದು ಉತ್ತಮ ನಟನೆ.

ಸುನೀಲ್ ಭೀಮರಾವ್ ಅವರು ಒಂದು ಉತ್ತಮ ಚಿತ್ರ ನೀಡುವಲ್ಲಿ ಬಹುಪಾಲು ಗೆದ್ದಿದ್ದಾರೆ ಎನ್ನಲ್ಲಡ್ಡಿಯಿಲ್ಲ. ಒಂದು ವಿಭಿನ್ನ ಅನುಭವ ನೀಡುವ ಒಳ್ಳೆಯ ಸಿನಿಮಾ ಮಾಡಬೇಕೆಂಬ ನಿರ್ದೇಶಕರ ಪ್ರಯತ್ನ ಮತ್ತು ವಿಶ್ವಾಸ ಚಿತ್ರದುದ್ದಕ್ಕೂ ಎದ್ದು ಕಾಣುತ್ತದೆ. ಎಲ್ಲದಕ್ಕಿಂತ ಮುಖ್ಯವಾಗಿ ಚಿತ್ರದ ಕಥಾ ಹಂದರ ಇಂದಿನ ಯುವಪೀಳಿಗೆಗೆ ಇಮ್ಮಿಡಿಯೇಟ್ ಆಗಿ ಕನೆಕ್ಟ್ ಆಗಿಬಿಡುವಂತದು. ಒಂದು ತಾಜಾ ಪಯಣದ ಅನುಭವ ದಕ್ಕಿಸಿಕೊಳ್ಳಲು ಒಂಥರ ಬಣ್ಣಗಳು ಚಿತ್ರವನ್ನು ಅವಶ್ಯವಾಗಿ ನೋಡಬಹದು.

ರೇಟಿಂಗ್ – 3.25/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top