RESPONSIVE LEADERBOARD AD AREA
Film News

‘ಒಲವಿನ ಉಡುಗೊರೆ ಕೊಡಲೇನು..’ ಈ ‘ಅಮರ’ ಗೀತೆ ಚಿತ್ರಮಂದಿರದಲ್ಲಿ ಮಾತ್ರ..!!

ಕನ್ನಡ ಚಿತ್ರರಸಿಕರು ಬಹಳ ನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ ‘ಅಮರ್’..!! ಏಕೆಂದರೆ ಇದು ದಿವಂಗತ ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ನಟಿಸುತ್ತಿರುವ ಚೊಚ್ಚಲ ಚಿತ್ರ.

ಈ ಚಿತ್ರದಲ್ಲಿ, ಅಂಬರೀಶ್ ಅವರ ಜನಪ್ರಿಯ ಚಿತ್ರ ‘ಒಲವಿನ ಉಡುಗೊರೆ’ಯ ಅತ್ಯಂತ ಸುಮಧುರ ಗೀತೆ, ‘ಒಲವಿನ ಉಡುಗೊರೆ ಕೊಡಲೇನು…’ ಗೀತೆಯನ್ನು ಬಳಸಿಕೊಳ್ಳಲಾಗುತ್ತಿದೆ. ಈ ಗೀತೆಯ ಹಕ್ಕುಗಳು ಸಂಗೀತ ಆಡಿಯೋ ಕಂಪನಿ ಅವರ ಸ್ವಾಮ್ಯದಲ್ಲಿದ್ದು ಅವರು ಈ ಗೀತೆಗಳನ್ನು ಸೋಶಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬಿಡದಿರುವಂತೆ ನಿರ್ಬಂಧಿಸಿದ್ದಾರೆ. ಹಾಗಾಗಿ ಇದನ್ನು ನೀವು ಥಿಯೇಟರ್ ನಲ್ಲಿಯೇ ನೋಡಬೇಕಾಗಿದೆ. ಈ ಗೀತೆಗೆ ಅಭಿಷೇಕ್ ಮತ್ತು ತಾನ್ಯಾ ಹೋಪ್ ಹೆಜ್ಜೆ ಹಾಕಿದ್ದಾರೆ.

ನಿರ್ದೇಶಕ ನಾಗಶೇಖರ್ ಈ ಚಿತ್ರದ ಹಾಡುಗಳ ಆಲ್ಬಮ್ ಅನ್ನು ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲು ಯೋಚಿಸುತ್ತಿದ್ದಾರೆ. ಅಲ್ಲದೆ ‘ಒಲವಿನ ಉಡುಗೊರೆ’ ಗೀತೆಯನ್ನು ಸಹ ಈ ಮ್ಯೂಸಿಕ್ ಆಲ್ಬಮ್ ನಲ್ಲಿ ಸೇರಿಸಲು ಆಲೋಚಿಸಿದ್ದರು. ಆದರೆ ನಿಯಮಗಳಂತೆ ಈ ಗೀತೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಲು ಅವಕಾಶವಿಲ್ಲದಿರುವುದರಿಂದ ಅದನ್ನು ಬಿಟ್ಟು ಉಳಿದ ಗೀತೆಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ.

ಅಂಬರೀಶ್ ಪುತ್ರ ಅಭಿಷೇಕ್, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಸ್ಟಿಲ್ಸ್ ಗಳಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡಿದ್ದು, ಚಿತ್ರ ಬಿಡುಗಡೆಗೆ ಮುನ್ನವೇ ಸಖತ್ ಸುದ್ದಿ ಮಾಡುತ್ತಿದ್ದಾರೆ. ಚಿತ್ರದ ಪೋಸ್ಟರ್ಸ್ ಮತ್ತು ಮೇಕಿಂಗ್ ಕೂಡ ಚಿತ್ರವನ್ನು ಕಾತರದಿಂದ ಕಾಯುವಂತೆ ಮಾಡಿದೆ.

ಕರ್ನಾಟಕದ ಸುಂದರ ಲೋಕೇಶನ್ ಗಳಲ್ಲಿ ಈ ಚಿತ್ರವನ್ನು ಚಿತ್ರೀಕರಿಸಿದ್ದಷ್ಟೇ ಅಲ್ಲದೆ ಸ್ವಿಜರ್ಲ್ಯಾಂಡಿನ ಸುಂದರ ಸ್ಥಳಗಳಲ್ಲಿ ಹಾಡುಗಳ ಮತ್ತು ದೃಶ್ಯಗಳ ಚಿತ್ರೀಕರಣ ನಡೆಸಲಾಗಿದೆ. ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ಮುಗಿಸಿದ್ದು, ಶೀಘ್ರದಲ್ಲಿಯೇ ಸೆನ್ಸಾರ್ ಮಂಡಳಿಯ ಮುಂದೆ ಬರಲಿದೆ.

ಚಿತ್ರವನ್ನು ಸಂದೇಶ್ ನಾಗರಾಜ್ ಅವರ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಿಸುತ್ತಿದ್ದು, ಏಪ್ರಿಲ್ ನ ಕಡೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಗೆ ಆಲೋಚನೆ ಮಾಡಲಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ ಇವರ ಜೊತೆಯಲ್ಲಿ ದೇವರಾಜ್, ಸಾಧು ಕೋಕಿಲ ಮುಂತಾದವರ ದೊಡ್ಡ ತಾರಾಗಣವಿದೆ. ಯಜಮಾನ ಚಿತ್ರದಲ್ಲಿ ಮಿಂಚಿರುವ ಬೆಡಗಿ ತಾನ್ಯ ಹೋಪ್ ಅವರಿಗೆ ಇದು ಎರಡನೇ ಕನ್ನಡ ಚಿತ್ರ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top