RESPONSIVE LEADERBOARD AD AREA
Movie Articles

Nirup Bhandari says Hele Meghave to Avantika

ಅವಂತಿಕಾ ಶೆಟ್ಟಿಗೆ ‘ಹೇಳೇ ಮೇಘವೇ’ ಎಂದ ನಿರೂಪ್ ಭಂಡಾರಿ

‘ರಾಜರಾಥ’ ತಂಡವು ಎರಡನೇ ಹಾಡನ್ನು ಅಭಯ್ ಜೋದ್ಪುರ್ಕರ್ ಅವರ ದನಿಯಲ್ಲಿ ಬಿಡುಗಡೆ ಮಾಡಿದ್ದಾರೆ. ‘ರಂಗಿತರಂಗ’ ಚಿತ್ರದಲ್ಲಿ ಈ ಸಂಜೆ ಹಾಡನ್ನು ಹಾಡಿದ ಗಾಯಕನೇ ‘ಹೇಳೇ ಮೇಘವೇ’ ಹಾಡನ್ನು ಹಾಡಿದ್ದಾರೆ. ಕನ್ನಡದಲ್ಲಿ ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ ಹಾಡನ್ನು ಬಿಡುಗಡೆ ಮಾಡಿದರೆ, ತೆಲುಗುವಿನಲ್ಲಿ ಕಿರ್ರಕ್ ಪಾರ್ಟಿಯ ನಟ ನಿಖಿಲ್, ‘ನೀಲಿ ಮೇಘಮಾ’ ವನ್ನು ಬಿಡುಗಡೆ ಮಾಡಿದರು. ಈ ಪ್ರಣಯದ ಹಾಡನ್ನು ಮಲ್ಶೇಜ್ ಘಾಟ್ ಮತ್ತು ಮಹಾಬಲೇಶ್ವರದ ಪ್ರಕೃತಿಯ ಸೌಂದರ್ಯದಲ್ಲಿ ಹಾಗು ಇಲ್ಲಿಯವರೆಗೂ ಪರಿಚಯಿಸದ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ಈ ಹಾಡು ಈಗಿನ ಕಾಲಕ್ಕೆ ತಕ್ಕಂತಹ ಸಂಗೀತ ಮತ್ತು ಶುದ್ಧ ಕನ್ನಡ ಸಾಹಿತ್ಯದ ಪರಿಪೂರ್ಣ ಮಿಶ್ರಣವಾಗಿದೆ. ಸಂಗೀತ ನಿರ್ದೇಶಕ ಮತ್ತು ಗೀತಾರಚನಾಕಾರರಾದ ಅನೂಪ್ ಭಂಡಾರಿ ಈ ಹಾಡನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳುವ ಹಾಗೆ ರಚಿಸಿದ್ದಾರೆ; ಭೂಮಿ, ಮೋಡ ಮತ್ತು ಸೂರ್ಯ ಅಥವಾ 3 ಪಾತ್ರಗಳಾದ – ಅಭಿ, ಮೇಘಾ ಮತ್ತು ಸೂರಜ್ ಬಗ್ಗೆ ಇರುವಂತಹ ಹಾಡಿದಾಗಿದೆ.

ಪ್ರಸಿದ್ಧ ಸಂಗೀತಗಾರರು ಈ ಹಾಡಿನಲ್ಲಿ ಕೆಲಸ ಮಾಡಿದ್ದಾರೆ, ಅದರಲ್ಲೊಂದು ತಂಡ ಚೆನ್ನೈ ಆರ್ಕೆಸ್ಟ್ರಾದವರು. ಪ್ರೇಮಲೋಕ ಚಿತ್ರದಿಂದಲೂ ಹಂಸಲೇಖರವರಿಗೆ ಸಂಗೀತ ಸಂಯೋಜನೆಯಲ್ಲಿ ಸಹಾಯ ಮಾಡುತಿದ್ದ ಹಾಗು ಸ್ಯಾಕ್ಸೋಫೋನ್ ವಾದಕರಾದ ಸ್ಯಾಕ್ಸ್ ರಾಜರವರು ಈ ಹಾಡಿನ ಸ್ಟ್ರಿಂಗ್ಸ್ ವಿಭಾಗಕ್ಕೆ ಸಂಗೀತದ ಮಾರ್ಗದರ್ಶಿಯಾದರೆ, ಬಾಸ್ಕೋ-ಸೀಸರ್ ಜೋಡಿಯ ಸರಳ ಮತ್ತು ಅಚ್ಚುಕಟ್ಟಾಗಿರುವ ನೃತ್ಯ ರಚನೆ, ರಜತ್ ಪೊದ್ದಾರ್ ರವರ ಕಲಾ ವಿನ್ಯಾಸ ಮತ್ತು ವಿಲಿಯಂ ಡೇವಿಡ್ ಅವರ ಛಾಯಾಗ್ರಹಣವು ಒಂದು ದೃಶ್ಯ-ಕಾವ್ಯದಂತೆ ಈ ಹಾಡಿನಲ್ಲಿ ಮೂಡಿಬಂದಿದೆ.

ನಿರೂಪ್ ಭಂಡಾರಿ, ಅವಂತಿಕಾ ಶೆಟ್ಟಿ, ಆರ್ಯ, ರವಿಶಂಕರ್ ಮುಖ್ಯ ಪಾತ್ರವರ್ಗದಲ್ಲಿದ್ದು, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ‘ರಾಜರಥ’ವಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ರೊಮ್ಯಾಂಟಿಕ್ – ಕಾಮಿಡಿ ಚಿತ್ರ ಇದಾಗಿದೆ. ಮೊದಲಬಾರಿ ನಿರ್ಮಾಪಕರಾಗಿರುವ ಜಾಲಿ ಹಿಟ್ಸ್ ನ ಅಜಯ್ ರೆಡ್ಡಿ, ಅಂಜು ವಲ್ಲಭನೆನಿ, ವಿಶು ಡಕ್ಕಪ್ಪಗಾರಿ, ಸತೀಶ್ ಶಾಸ್ತ್ರಿ ರವರು ಈ ಚಿತ್ರವನ್ನು ವಿಶ್ವದಾದ್ಯಂತ ಫೆಬ್ರುವರಿ 16 ರಂದು ಬಿಡುಗಡೆ ಮಾಡಲಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top