RESPONSIVE LEADERBOARD AD AREA
Movie Articles

Nirup & Avantika’s freezing romance

ನಿರೂಪ್ – ಅವಂತಿಕಾ ಚಳಿ ಚಳಿ!

‘ಕಾಲೇಜ್ ಡೇಸ್’ ಮತ್ತು ‘ಹೇಳೇ ಮೇಘವೇ’ ಹಾಡುಗಳ ಬಿಡುಗಡೆಯ ನಂತರ ‘ರಾಜರಾಥ’ ಚಿತ್ರ ತಂಡವು ಮತ್ತೊಂದು ಅಲೆಯನ್ನು ಎಲ್ಲೆಡೆ ಸೃಷ್ಟಿ ಮಾಡಿದೆ ಹಾಗು ಈ ಎರಡು ಹಾಡುಗಳಿಗೆ ಸಂಗೀತ ಮತ್ತು ಸಾಹಿತ್ಯ ಅನೂಪ್ ಭಂಡಾರಿಯವರೇ ಬರೆದಿದ್ದಾರೆ. ನಿಮ್ಮೆಲ್ಲಿರಿಗೋಸ್ಕರ ಪರದೆಯ ಹಿಂದಿನ ಕುತೂಹಲಕಾರಿ ಕಥೆಯೊಂದು ಇಲ್ಲಿದೆ. ಈ ಹಾಡುಗಳು ಹಳೆ ನೆನಪುಗಳನ್ನು ತಾಜಾ ಮಾಡುವುದಷ್ಟೇ ಅಲ್ಲದೆ , ರೋಮ್ಯಾಂಟಿಕ್ ಫೀಲ್ ಕೂಡ ನೀಡುತ್ತದೆ. ಇದನ್ನೆಲ್ಲ ಪರದೆಯಮೇಲೆ ತರಲು ನಿರೂಪ್ ಮತ್ತು ಅವಂತಿಕಾ ಇಬ್ಬರು ನಡುಗುತ್ತಿದ್ದರಂತೆ.. ಯಾಕೆಂದರೆ, ಊಟಿಯಲ್ಲಿ ನಡೆದ ಮಳೆ ಸನ್ನಿವೇಶವನ್ನು ಚಿತ್ರೀಕರಿಸುವಾಗ ಅಲ್ಲಿ ತುಂಬಾ ಚಳಿ ಇದ್ದಿದ್ದರಿಂದ, ನೀರು ಅವರ ಮೇಲೆ ಬಿದ್ದಂತೆಯೇ ಇಬ್ಬರು ನಡುಗುತ್ತ ಹಾಗೆ ಮುಖಭಾವಗಳನ್ನು ಸನ್ನಿವೇಶಕ್ಕೆ ತಕ್ಕಂತೆ ಕೊಡುತಿದ್ದರೆಂದು ತಿಳಿದು ಬಂದಿದೆ. ‘ಕಟ್’ ಎಂದು ಹೇಳಿದ ಕೂಡಲೆ , ಚಿತ್ರ ತಂಡದವರು ಅವರಿಬ್ಬರ ಮೇಲೆ ಬಿಸಿ ನೀರು ಹಾಕಿ, ಕಂಬಳಿಗಳನ್ನು ಹೊದಿಸುತ್ತಿದ್ದರಂತೆ. ಈ ವಿಷಯದ ಅರಿವಿದ್ದರೂ, ತನ್ನ ಪರಿಪೂರ್ಣತೆಗಾಗಿ ಹೆಸರುವಾಸಿಯಾದ ಅನೂಪ್ ‘ಪರ್ಫೆಕ್ಟ್ ಶಾಟ್’ ಬರುವವರೆಗೂ ರೀ-ಟೇಕ್ ಎಂದು ಹೇಳುತ್ತಲೇ ಇದ್ದರೆಂದು ಹೇಳಲಾಗಿದೆ.

ಈ ಸನ್ನಿವೇಶದ ಚಿತ್ರೀಕರಣ ಮುಗಿಯುವಷ್ಟರಲ್ಲಿ ಐಸ್ ಗೊಂಬೆಗಳಂತೆ ಆಗಿದ್ದ ನಿರೂಪ್, ಅವಂತಿಕಾ ಇಬ್ಬರು ಸಹಜ ಸ್ಥಿತಿಗೆ ಬರಲು ಹೀಟರ್ಗಳ ಮುಂದೆ ೩೦ ನಿಮಿಷಗಳು ಕೂರಬೇಕಾಗಿತ್ತು. ಚಳಿ ಸನ್ನಿವೇಶದ ಮರುದಿನ ಇಬ್ಬರಿಗೂ ಜ್ವರ ಬಂದರೂ ಸಹ ಚಿತ್ರೀಕರಣವನ್ನು ನಿಲ್ಲಿಸದೆ ಎಂದಿನಂತೆ ಕೆಲಸವನ್ನು ಮುಂದುವರಿಸುತಿದ್ದರು. ಉತ್ತಮ ಸಿನಿಮಾ ಹೊರ ತರಬೇಕೆಂದರೆ ಅದು ಸುಲಭದ ಕೆಲಸವಲ್ಲ. ‘ರಾಜರಾಥ’ ಚಿತ್ರತಂಡದ ನಿರ್ಮಾಪಕರುಗಳಾದ ಅಜಯ್ ರೆಡ್ಡಿ, ಅಂಜು ವಲ್ಲಭನೇನಿ, ವಿಷು ದಕ್ಕಪ್ಪಗಾರಿ ಮತ್ತು ಸತೀಶ್ ಶಾಸ್ತ್ರಿ ರವರು ಫೆಬ್ರವರಿ ೧೬ಕ್ಕೆ ವಿಶ್ವಾದ್ಯಂತ ಚಿತ್ರ ಬಿಡುಗಡೆ ಮಾಡುತಿದ್ದಾರೆ

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top