RESPONSIVE LEADERBOARD AD AREA
Film News

New ‘Mooguti Sundari’ Akhila Prakash

ಮೂಗುತಿ ಸುಂದರಿ ಎಂದರೆ ಮೊದಲಿಗೆ ನಮಗೆ ನೆನಪಿಗೆ ಬರೋದು ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು. ಅವರನ್ನು ಬಿಟ್ಟರೆ ನಮ್ಮ ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ ಅವರು. ಈಗ ಚಂದನವನ ಮತ್ತೊಬ್ಬ ಪ್ರತಿಭಾವಂತ ಮೂಗುತಿ ಸುಂದರಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದೆ. ಅವರೇ ಅಖಿಲಾ ಪ್ರಕಾಶ್, ನಾಗತಿಹಳ್ಳಿ ಚಂದ್ರಶೇಖರ್ ಅವರ ಸಂಸ್ಥೆಯಲ್ಲಿ ನಟನಾ ತರಬೇತಿ ಪಡೆದು ಸ್ಯಾಂಡಲ್ವುಡ್ಗೆ ಕಾಲಿಟ್ಟಿರುವ ಅಖಿಲಾ ಪ್ರಕಾಶ್ ‘ರತ್ನಮಂಜರಿ’ ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸಿಗೆ ಲಗ್ಗೆ ಹಾಕಲು ಸಿದ್ಧರಾಗಿದ್ದಾರೆ.

ಅಮೆರಿಕೆಯಲ್ಲಿ ನೆಲೆಸಿರುವ ಸ್ವಾಭಿಮಾನಿ ಕನ್ನಡಿಗರ ಸಿನಿಮಾ ಪ್ರೀತಿಯಿಂದ ತಯಾರಾಗಲಿರೊ, ಟೆಕ್ಕಿಗಳೇ ಸೇರಿ ಅದ್ದೂರಿಯಾಗಿ ರೂಪಿಸುತ್ತಿರೋ ಸಿನಿಮಾ ರತ್ನಮಂಜರಿ. ಪ್ರಸಿದ್ಧ್​​ ಅವರ ನಿರ್ದೇಶನದ ರತ್ನಮಂಜರಿ ಪಕ್ಕಾ ಕ್ರೈಂ ಥ್ರಿಲ್ಲರ್​ ಸಿನಿಮಾ. ಚಿತ್ರದ ಪೋಸ್ಟರ್​​ ಹಾಗೂ ಟೈಟಲ್ ಟೀಸರ್​ ಈಗಾಗಲೇ ಸಿನಿಮಾದ ಬಗ್ಗೆ ಒಂದು ಕುತೂಹಲ ಕ್ರಿಯೇಟ್ ಮಾಡಿದೆ. ಎನ್​​​ಆರ್​ಐಗಳಾದ ನಟರಾಜ್​ ಹಳೇಬೀಡು ಹಾಗೂ ಸಂದೀಪ್​ ಕುಮಾರ್​​​ ನಿರ್ಮಾಣ ಮಾಡ್ತಿರೋ ರತ್ನಮಂಜರಿ ಸಿನಿಮಾದ ಶೂಟಿಂಗ್ ಇದೇ ಜೂನ್​​ನಿಂದ ಶುರುವಾಗಲಿದೆ. ಸಿನಿಮಾದ ಶೇ.50 ಭಾಗ ಅಮೇರಿಕಾದಲ್ಲಿ ಶೂಟ್​ ಆಗಲಿದ್ದು, ಉಳಿದ ಭಾಗದ ಸಿನಿಮಾ ಮಡಿಕೇರಿಯಲ್ಲಿ ಶೂಟ್​ ಆಗಲಿದೆ. 2007-08ರಲ್ಲಿ ನಡೆದ ನೈಜ ಘಟನೆಯ ಎಳೆಯನ್ನಿಟ್ಟುಕೊಂಡು ರತ್ನಮಂಜರಿ ಕಥೆ ಹೆಣೆಯಲಾಗಿದೆ.

ನಾಗತಿಹಳ್ಳಿ ಚಂದ್ರಶೇಖರ್​ ಗರಡಿಯಲ್ಲಿ ನಟನೆಯ ತರಭೇತಿ ಪಡೆದಿರುವ ರಾಜ್​ ಚರಣ್​ ಹಾಗೂ ಅಖಿಲಾ ಪ್ರಕಾಶ್​ ರತ್ನಮಂಜರಿಯ ನಾಯಕ ನಾಯಕಿ, ಹೊಸ ಸಂಗೀತ ನಿರ್ದೇಶಕ ಹರ್ಷವರ್ಧನ್​ ರಾಜ್​​​ ಸಂಗೀತ ಚಿತ್ರಕ್ಕಿದೆ. ಪ್ರೀತಂ ತೆಗ್ಗಿನ ಮನೆ ಛಾಯಾಗ್ರಹಣ ಚಿತ್ರಕ್ಕಿದೆ. ರತ್ನಮಂಜರಿಯ ಎಲ್ಲ ಹಾಡುಗಳನ್ನ ಕೆ.ಕಲ್ಯಾಣ್​ ಬರೆದಿದ್ದಾರೆ. ಹಾಡುಗಳ ಕಂಪೋಸಿಂಗ್​ ಕೂಡ ಕಂಪ್ಲೀಟ್​ ಆಗಿದೆ. ಸುಮಾರು 2 ತಿಂಗಳುಗಳ ಕಾಲ ಸಿನಿಮಾದ ಚಿತ್ರೀಕರಣ ನಡೆಯಲಿದ್ದು, ವರ್ಷಾಂತ್ಯಕ್ಕೆ ರತ್ನಮಂಜರಿ ತೆರೆಗೆ ಬರಲಿದೆ.

ಚಿತ್ರದ ಪಾತ್ರಕ್ಕಾಗಿ ಅಖಿಲಾ ಪ್ರಕಾಶ್ ಅವರ ಮೂಗುತಿ ಮತ್ತು ಆಭರಣಗಳನ್ನು ಬಹಳ ಮುತುವರ್ಜಿಯಿಂದ ವಿಶೇಷವಾಗಿ ಶೋಭಾ ಅವರು ಡಿಸೈನ್ ಮಾಡಿದ್ದಾರೆ. ಹೆಣ್ಣು ಮಕ್ಕಳಿಗೆ ಮೂಗುತಿ ಅಂದ ಹೆಚ್ಚಿಸುವ ಒಂದು ವಿಶೇಷ ಆಭರಣ. ಈಗ ನಮ್ಮ ರತ್ನಮಂಜರಿ ಸುಂದರಿ ಅಖಿಲಾ ಪ್ರಕಾಶ್ ಅವರನ್ನು ಮೂಗುತಿ ಸುಂದರಿಯಾಗಿ ನೋಡಿಯಾದ ಮೇಲೆ ಅದೆಷ್ಟು ಪಡ್ಡೆಗಳು ನಿದ್ದೆ ಕೆಡಿಸಿಕೊಳ್ಳುತ್ತಾರೋ ನೋಡಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top