RESPONSIVE LEADERBOARD AD AREA
Film News

ನಿರ್ದೇಶಕರಾಗುತ್ತಿರುವ ನೀನಾಸಂ ಸತೀಶ್..!

‘ಲೂಸಿಯಾ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಕಾಣಿಸಿಕೊಂಡ ನೀನಾಸಂ ಸತೀಶ್ ಈಗ ನಿರ್ದೇಶಕರಾಗುತ್ತಿದ್ದಾರೆ. ಈ ವರ್ಷ ಇವರ ‘ಅಯೋಗ್ಯ’ ಚಿತ್ರ ಶತದಿನೋತ್ಸವ ಆಚರಿಸಿದೆ. ಇದೀಗ ತಾವೇ ಕಥೆ, ಚಿತ್ರಕಥೆ ರಚಿಸಿ ಚಿತ್ರವನ್ನು ನಿರ್ದೇಶಿಸುವ ಜವಾಬ್ದಾರಿ ಹೊತ್ತಿದ್ದು ಫೆಬ್ರವರಿಯಲ್ಲಿ ಇನ್ನೂ ಹೆಸರಿಡದ ಹೊಸ ಚಿತ್ರದ ಮುಹೂರ್ತ ನಡೆಯಲಿದೆ.

ರಂಗಭೂಮಿ ಹಿನ್ನೆಲೆಯ ಈ ನಟ, ಚಿತ್ರರಂಗಕ್ಕೆ ಕಾಲಿಡುವ ಮೊದಲು ಹಲವು ನಾಟಕಗಳನ್ನು ನಿರ್ದೇಶಿಸಿ, ನಿರ್ದೇಶನದ ಅನುಭವ ಪಡೆದಿದ್ದಾರೆ. ಅಲ್ಲದೆ ಕಳೆದ ಹತ್ತು ವರ್ಷಗಳಿಂದ ಕನ್ನಡ ಸಿನಿಮಾಗಳನ್ನು ಹತ್ತಿರದಿಂದ ನೋಡಿರುವ ಈ ನಟ, ಹಾಸ್ಯ ಮತ್ತು ಭಾವನೆಗಳನ್ನು ಕೇಂದ್ರೀಕರಿಸಿ ಹೊಸ ಚಿತ್ರದ ಕಥೆಯನ್ನು ರಚಿಸಿದ್ದು, ಫೆಬ್ರವರಿಯಲ್ಲಿ ಚಿತ್ರದ ಟೈಟಲ್ ಮತ್ತು ಟೀಸರ್ ಬಿಡುಗಡೆ ಆಗಲಿದೆ ಎಂದಿದ್ದಾರೆ.

ತಮ್ಮ ಸಹಜ ಅಭಿನಯದಿಂದ ಪ್ರೇಕ್ಷಕರ ಮನಗೆದ್ದಿರುವ ಇವರು ಅಭಿನಯಿಸಿರುವ ‘ಚಂಬಲ್’ ಮತ್ತು ‘ಗೋದ್ರಾ’ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಅಲ್ಲದೆ ಇವರು ಅಭಿನಯಿಸುತ್ತಿರುವ ಚೊಚ್ಚಲ ತಮಿಳು ಚಿತ್ರದ ಕೆಲಸಗಳು ನಡೆಯುತ್ತಿವೆ.

“ನನ್ನ ಬಳಿ ಮೂರ್ನಾಲ್ಕು ಚಿತ್ರ ಕಥೆಗಳು ಸಿದ್ಧವಿದ್ದು, ಅವುಗಳಲ್ಲಿ ಒಂದು ಕಥೆಯನ್ನು ಎತ್ತಿಕೊಂಡಿದ್ದೇನೆ. ಈ ಕಥೆಯನ್ನು ನನ್ನ 50ಕ್ಕೂ ಹೆಚ್ಚು ಗೆಳೆಯರಿಗೆ ಹೇಳಿದ್ದು, ಎಲ್ಲರೂ ಇದೇ ಕಥೆ ನನ್ನ ಚೊಚ್ಚಲ ನಿರ್ದೇಶನಕ್ಕೆ ಸೂಕ್ತ ಎಂದಿದ್ದಾರೆ. ಹಾಗಾಗಿ ಇದೇ ಕಥೆಯನ್ನು ನಿರ್ದೇಶಿಸುತ್ತಿದ್ದೇನೆ” ಎನ್ನುತ್ತಾರೆ ನೀನಾಸಂ ಸತೀಶ್.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top