RESPONSIVE LEADERBOARD AD AREA
Film News

ಅಲ್ಲಾ ಯಾ ಅಲ್ಲಾ ನಟರಾಜ ಬರ್ತಾನಲ್ಲ..

ಪ್ರಸಿದ್ಧ ಗಾಯಕ ಸೋನು ನಿಗಮ್ ಮುಂಬೈ ರಸ್ತೆಯೊಂದರಲ್ಲಿ ಭಿಕ್ಷುಕನ ಹಾಗೆ ಸೋಗು ಹಾಕಿ ಹಾಡು ಹೇಳಿಕೊಂಡು ಕೂತಿದ್ದ ವೀಡಿಯೊ ನೋಡಿದ್ದೀರಾ? ಈಗ ಕನ್ನಡದ ಸುಪ್ರಸಿದ್ಧ ನಟರೊಬ್ಬರು ಬೆಂಗಳೂರಿನ ಗಾಂಧಿ ಬಜಾರ್ ನ ರಸ್ತೆಬದಿಯಲ್ಲಿ ಬಿಕ್ಶುಕನಂತೆ ಕುಳಿತು ಹಾಡನ್ನು ಹಾಡಿದ್ದಾರೆ, ಯಾರವರು? ಅವರೇ ನಮ್ಮ ಕಾಮಿಡಿ ಕಿಂಗ್ ಅಧ್ಯಕ್ಷ ಶರಣ್, ರಸ್ತೆಬದಿಯಲ್ಲಿ ಕುಳಿತು ”ಅಲ್ಲಾ ಯಾ ಅಲ್ಲಾ ನಟರಾಜ ಬರ್ತಾನಲ್ಲ.. ” ಅಂತ ಅವರು ಹಾಡನ್ನು ಹೇಳಿಕೊಂಡು ಕೂತಿದ್ದರೆ ಯಾರೊಬ್ಬ ಜನಸಾಮಾನ್ಯರಿಗೂ ಅದು ಶರಣ್ ಎಂದು ತಿಳಿಯಲಿಲ್ಲ.

ಪವನ್ ವಡೆಯರ್ ನಿರ್ದೇಶನದ ”ನಟರಾಜ ಎಕ್ಸ್ಪ್ರೆಸ್” ಶೂಟಿಂಗ್ ಮತ್ತು ಡಬ್ಬಿಂಗ್ ಕಾರ್ಯಗಳು ಮುಗಿದು ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಈಗ ಚಿತ್ರದ ಪ್ರಮೋಷನ್ ಗೆ ಮುಂದಾಗಿರುವ ಚಿತ್ರತಂಡ ಈ ರೀತಿಯಾಗಿ ವಿನೂತನ ಪ್ರಯೋಗ ಮಾಡಿ ಎಲ್ಲರ ಗಮನ ಸೆಳೆದಿದೆ.. ಶರಣ್ ರಸ್ತೆಬದಿಯಲ್ಲಿ ಹಾಡು ಹೇಳಿ ಬಿಕ್ಷೆ ಬೇಡಿದ್ದಕ್ಕೆ ಅವರಿಗೆ ಸಿಕ್ಕ ಕಾಸೆಷ್ಟು ಗೊತ್ತಾ? ೧೨೮ ರೂಪಾಯಿಗಳು, ಹಿಡನ್ ಕ್ಯಾಮೆರಾ ಬಳಸಿ ಈ ವಿನೂತನ ಭಿಕ್ಷಾಟನೆಯನ್ನು ಸೆರೆಹಿಡಿಯಲಾಯಿತು.

ಮುಜುಗರಬಿಟ್ಟು, ಸ್ಟಾರ್ ಅನ್ನೋ ಅಹಂ ಇಲ್ಲದೆ ತಮ್ಮ ಚಿತ್ರದ ಪ್ರಮೋಷನ್ ಗಾಗಿ ಜನನಿಬಿಡ ರಸ್ತೆಯಲ್ಲಿ ಬಿಕ್ಶುಕನಾಗಿ ಕುಳಿತ ಶರಣ್ ರ ವೃತ್ತಿಪರತೆ ಮತ್ತು ಸರಳ ವ್ಯಕ್ತಿತ್ವಕ್ಕೆ ಕೈ ಮುಗಿಯಲೇ ಬೇಕು. ನಟರಾಜ ಸರ್ವಿಸ್ ಚಿತ್ರತಂಡಕ್ಕೆ ಶುಭವಾಗಲಿ.

RESPONSIVE LEADERBOARD AD AREA
RESPONSIVE LEADERBOARD AD AREA
To Top