RESPONSIVE LEADERBOARD AD AREA
Movie Reviews

MOVIE REVIEW – ಪ್ರೇಕ್ಷಕರಿಗೆ ಸ್ವೀಟ್ ಅನುಭವ ನೀಡುವ ಆರೆಂಜ್

ಆರೆಂಜ್ ಚಿತ್ರತಂಡ ಮೊದಲಿನಿಂದಲೂ ತಮ್ಮದು ಪಕ್ಕಾ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ಎಂದು ಹೇಳುತ್ತಲೇ ಇತ್ತು. ಫ್ಯಾಮಿಲಿ ಎಂಟರ್ ಟೈನರ್ ಅಂದ್ರೆ ಕುಟುಂಬ, ಮದುವೆ, ಲವ್ ಸ್ಟೋರಿ, ಹಾಡು, ಕುಣಿತ, ಆಕ್ಷನ್, ಸೆಂಟಿಮೆಂಟ್ ಹಾಗೂ ಒಂದಷ್ಟು ಕಾಮಿಡಿ. ಈ ಸೂತ್ರಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿದರೆ ಗೆಲ್ಲಬಹುದೇ? ಈ ಪ್ರಶ್ನೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ #ಆರೆಂಜ್ ಉತ್ತರ ಕೊಡುತ್ತದೆ. ವೆರಿ ಸಿಂಪಲ್ ಕತೆ ಇಟ್ಟುಕೊಂಡು ಆದರೆ ಎಲ್ಲೂ ಬೋರ್ ಆಗದಂತೆ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರ ಕೊಟ್ಟಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

ಕತೆ

ಒಂದು ಕಿತ್ತಳೆ ಹಣ್ಣಿನ ಕಾರಣದಿಂದಾಗಿ ನಾಯಕಿಯ ಮನೆ ಸೇರುವ ನಾಯಕ, ಯಾರದೋ ಮನೆಯಲ್ಲಿ ಹೋಗಿ ಕಿಲಾಡಿತನದಿಂದ ವರ್ತಿಸುವ ಭರಾಟೆಯಲ್ಲಿ ಎಡವಟ್ಟು ಮಾಡಿ ನಾಯಕಿಯನ್ನು ಪೇಚಿಗೆ ಸಿಲುಕಿಸುತ್ತಾನೆ. ನಂತರ ತಾನು ಮಾಡಿದ ಎಡವಟ್ಟುಗಳನ್ನು ಸರಿ ಮಾಡಲು ಸುಳ್ಳುಗಳನ್ನು ಹೇಳಿ ಮತ್ತಷ್ಟು ಎಡವಟ್ಟು ಮಾಡುತ್ತಾನೆ. ಒಂದು ಆರೆಂಜ್ ನಿಂದ ಶುರುವಾಗುವ ಎಡವಟ್ಟುಗಳು ಕೊನೆಗೆ ಹೇಗೆ ಸುಖಾಂತ್ಯದಲಿ ಕೊನೆಗೊಳ್ಳುತ್ತದೆ ಎನ್ನುವುದೇ ಚಿತ್ರದ ರಂಜನೀಯ ಕಥೆ.

ಅಭಿನಯ

ಗೋಲ್ಡನ್ ಸ್ಟಾರ್ ಗಣೇಶ್ ಅವರು ತಮ್ಮ ಎಂದಿನ ಸದಾ ತುಂಟತನದ ಲವರ್ ಬಾಯ್ ಇಮೇಜ್ ಮೂಲಕವೇ ತರಲೆ ತಮಾಷೆ ಮಾಡುತ್ತಾ, ಕಾಲೆಳೆಯುತ್ತಾ ಪ್ರೇಕ್ಷಕರನ್ನು ರಂಜಿಸುತ್ತಾರೆ. ಗ್ಲಾಮರ್‌ ಗೊಂಬೆಯಾಗಿ, ಅಪ್ಪಟ ಮನೆ ಮಗಳಾಗಿ ಪ್ರಿಯಾ ಆನಂದ್ ಕಾಣಿಸಿಕೊಳ್ಳುತ್ತಾರೆ. ಅವಿನಾಶ್, ರಂಗಾಯಣ ರಘು, ರವಿಶಂಕರ್ ಗೌಡ ಹಾಗೂ ಸಾಧು ಕೋಕಿಲ ತಮ್ಮ ತಮ್ಮ ಪಾತ್ರಗಳಿಗೆ ಗೌರವ ಸಲ್ಲಿಸಿದ್ದಾರೆ.

ತಾಂತ್ರಿಕತೆ

ಚಿತ್ರದ ಸಿಂಪಲ್ ಆದ ಕಥೆ ಪ್ರೇಕ್ಷಕರಿಗೆ ಬಹಳ ನೋಡಿ ಪರಿಚಯ ಇರುವಂತೆಯೇ ಇದೆ. ಕತೆ ಸಿಂಪಲ್ ಹಾಗೂ ರೆಗ್ಯುಲರ್ ಅನಿಸಿದರೂ ಚಿತ್ರದ ಟ್ರೀಮ್‌ಮೆಂಟ್ ಪ್ರೇಕ್ಷಕನನ್ನು ಸಖತ್ತಾಗಿ ನಗಿಸುತ್ತಾ ಎಂಟರ್ಟೈನ್ ಮಾಡುತ್ತದೆ. ಗೊಲ್ಡನ್ ಸ್ಟಾರ್ ಗಣೇಶ್ ನಟನೆ, ಸ್ಟೈಲಿಂಗ್ ಹಾಗೂ ಎನರ್ಜಿ ಸೂಪರ್. ಎಸ್.ತಮನ್ ಸಂಯೋಜಿಸಿರುವ ಟ್ರೆಂಡಿ ಹಾಡುಗಳಿಗೆ ಒಳ್ಳೆಯ ಕೊರಿಯಾಗ್ರಫಿ ಮಾಡಲಾಗಿದೆ. ಸಂತೋಷ್ ರೈ ಪಾತಾಜೆ ಕ್ಯಾಮೆರಾ ವರ್ಕ್ ಪಕ್ಕಾ ಕಮರ್ಷಿಯಲ್ ಹಾಗೂ ಕಲರ್ಫುಲ್. ಸ್ಕ್ರೀನ್ ಪ್ಲೇ ಎಲ್ಲೂ ಲ್ಯಾಗ್ ಆಗದ ಹಾಗೆ ಜಾಗರೂಕತೆ ವಹಿಸಿ ಗೆದ್ದಿದ್ದಾರೆ ನಿರ್ದೇಶಕ ಪ್ರಶಾಂತ್ ರಾಜ್.

ಕೊನೆಯ ಮಾತು

ಚಿತ್ರದ ಪೂರ್ತಿ ಪ್ರೇಕ್ಷಕರಿಗೆ ಮಜಾ ನೀಡೋದು ನಟರಾಜ್ ಅವರು ಬರೆದಿರುವ ಡೈಲಾಗ್ಸ್ ಮತ್ತು ಸಾಂದರ್ಭಿಕ ಹಾಸ್ಯ ಸನ್ನಿವೇಶಗಳು. ಈ ಚಿತ್ರವನ್ನ ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಬಹುದು. ಕ್ಲಾಸ್ ಮತ್ತು ಫ್ಯಾಮಿಲಿ ಆಡಿಯನ್ಸ್ ಎಲ್ಲರಿಗೂ ಖಂಡಿತವಾಗಿ ಆರೆಂಜ್ ಚಿತ್ರ ಇಷ್ಟವಾಗುತ್ತೆ.

ರೇಟಿಂಗ್ – 3.75/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top