RESPONSIVE LEADERBOARD AD AREA
Movie Reviews

ಅಭಿಮಾನಿಗಳಿಗೆ ಸಂಭ್ರಮ ಈ ನಟಸಾರ್ವಭೌಮ

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನಟಸಾರ್ವಭೌಮ ಅಭಿಮಾನಿಗಳ ಮನಸ್ಸು ಬಯಸುವ ಎಲ್ಲ ರಂಜನೆಯ ಜೊತೆಗೆ ಸ್ಪೆಷಲ್ ಟ್ವಿಸ್ಟ್ಗಳು ಇರುವ ಒಂದು ರಿವೇಂಜ್ ಡ್ರಾಮಾ. ಆ್ಯಕ್ಷನ್ ರೊಮ್ಯಾನ್ಸ್ ಮತ್ತು ಕಾಮಿಡಿಯ ಅದ್ಧೂರಿ ಪ್ಯಾಕೇಜ್ ಇರುವ ಪವನ್ ವಡೆಯರ್ ನಿರ್ದೇಶಿತ ಈ ಸಿನಿಮಾ ಸಲೀಸಾಗಿ ನೋಡಿಸಿಕೊಂಡು ಹೋಗುವ ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಅಪ್ಪು ಸಿನಿಮಾವಾಗಿ ಗೆದ್ದು ನಿಲ್ಲುತ್ತದೆ.

ಕತೆ

ಕೋಲ್ಕತ್ತಾದಿಂದ ಬೆಂಗಳೂರಿಗೆ ವರ್ಗವಾಗಿ ಬಂದಿರುವ ಪತ್ರಕರ್ತ ಗಗನ್ ದೀಕ್ಷಿತ್ ಯಾರನ್ನೋ ಹುಡುಕುತ್ತಿದ್ದಾನೆ. ಅದೊಮ್ಮೆ ಕಾರ್ಯನಿಮಿತ್ತ ಹೋದವನಿಗೆ ಕಿಲಾಡಿ ಕೇಂದ್ರ ಸಚಿವನ ಕೆಂಗಣ್ಣಿಗೆ ಗುರಿಯಾಗುತಾನೆ, ನಂತರ ಅದೇ ಕೇಂದ್ರ ಸಚಿವ ಮನೆಗೆದ್ದು ಗೆಳೆತನವನ್ನು ಸಂಪಾದಿಸುತ್ತಾನೆ. ಬೆಂಗಳೂರಿನಲ್ಲಿ ತಾನು ಬಾಡಿಗೆಗೆ ಪಡೆದಿರುವ ಭೂತ ಭೀತಿ ಇರುವ ಮನೆಯಲ್ಲಿರುವ ಆತ್ಮ ಅವನ ಮೇಲೆ ಬರಲು ಶುರುವಾಗುತ್ತದೆ. ಅದರ ಪ್ರಭಾವದಿಂದ ಸಿಕ್ಕ ಸಿಕ್ಕವರನ್ನು ಚಚ್ಚಲು ಶುರು ಮಾಡುತ್ತಾನೆ. ಏಕೆ ಹೀಗಾಗುತ್ತಿದೆ? ಆ ಆತ್ಮ ಯಾರದು? ಕೇಂದ್ರ ಸಚಿವನ ಹಿನ್ನೆಲೆಯೇನು? ಎಲ್ಲದಕ್ಕೂ ಉತ್ತರ ಚಿತ್ರದಲ್ಲಿದೆ.

ಅಭಿನಯ

ಅಕ್ಷರಶಃ ತಮ್ಮ ಹೆಗಲ ಮೇಲೆ ಹೊತ್ತು ನಟಸಾರ್ವಭೌಮ ಸಿನಿಮಾವನ್ನು ನಿಲ್ಲಿಸಿದ್ದಾರೆ ಅಪ್ಪು. ಅವರ ಡ್ಯಾನ್ಸ್ ಅದ್ಭುತ, ನಟನೆ ಆಕರ್ಷಕ, ಫೈಟ್ಗಳಲ್ಲಿ ಎಂದಿನ ಫೋರ್ಸ್ ಇದೆ. ಮುಖ್ಯವಾಗಿ ತೆರೆಯ ಮೇಲೆ ನೋಡಲು ಬಹಳ ಹ್ಯಾಂಡ್ಸಮ್ ಆಗಿ ಕ್ಯೂಟ್ ಆಗಿ ಕಾಣುತ್ತಾರೆ. ನಾಯಕಿಯರಲ್ಲಿ ಅನುಪಮಾ ಅವರದೇ ಮೇಲುಗೈ, ಅವರಿರುವ ಕೋಲ್ಕತ್ತಾ ಪೋರ್ಷನ್ ಇಡೀ ಸಿನಿಮಾದ ವಿಶೇಷ ಆಕರ್ಷಣೆ.

ತಾಂತ್ರಿಕತೆ

ಪವನ್ ಒಡೆಯರ್ ಅಭಿಮಾನಿಗಳಿಗಾಗಿ ಅಪ್ಪ ಅವರ ಬೆನ್ನಿಗೆ ನಿಂತಿರುವ ಫ್ಯಾಮಿಲಿ ಆಡಿಯನ್ಸ್ಗಾಗಿ ಸಿನಿಮಾ ಮಾಡಿದ್ದಾರೆ. ಆಕ್ಷನ್ ಕಾಮಿಡಿ ಮತ್ತು ಲವ್ ಸ್ಟೋರಿ ಅಂಶಗಳನ್ನು ಪೂರಕವಾಗಿ ಬ್ಲೆಂಡ್ ಮಾಡಿರುವ ನಿರ್ದೇಶಕರು ನ ಸಿನಿಮಾ ಎಲ್ಲೂ ಹಳಿ ತಪ್ಪದಂತೆ ಎಚ್ಚರ ವಹಿಸಿದ್ದಾರೆ. ಛಾಯಾಗ್ರಾಹಕ ವೈದಿ ಪ್ರತಿ ಫ್ರೇಮ್ನಲ್ಲೂ ಬಣ್ಣಗಳನ್ನು ತುಂಬಿ ತುಳುಕಿಸಿದ್ದಾರೆ. ಡಿ ಇಮಾನ್ ಹಿನ್ನೆಲೆ ಸಂಗೀತ ಸಿನಿಮಾ ನೋಡುವಾಗ ದೃಶ್ಯಗಳನ್ನು ಉದ್ದೀಪಿಸುವಲ್ಲಿ ಯಶಸ್ವಿಯಾದರೆ ಹಾಡುಗಳ ಸಂಗೀತ ಸಿನಿಮಾ ನೋಡಿದ ನಂತರವೂ ನಮ್ಮೊಡನೆ ಉಳಿಯಲಿದೆ.

ಕೊನೆಯದಾಗಿ

ನಟಸಾರ್ವಭೌಮ ಸಿನಿಮಾದಲ್ಲಿ ತಪ್ಪುಗಳಿಲ್ಲವೆಂದಲ್ಲ, ಇವೆ. ಆದರೆ ನಿರ್ದೇಶಕರ ಚಿತ್ರಕಥೆಯಲ್ಲಿನ ಚಾಕಚಕ್ಯತೆ ಚಿತ್ರದ ಓರೆಕೋರೆಗಳ ಬಗ್ಗೆ ಚಕಾರವೇ ತರಲು ಬಿಡುವುದಿಲ್ಲ. ಅಪ್ಪು ಅವರ ಆಲ್ ರೌಂಡರ್ ಪರ್ಫಾರ್ಮೆನ್ಸ್ ಚಿತ್ರವನ್ನು ಬೀಳಲು ಬಿಡುವುದೇ ಇಲ್ಲ. ಅವರೇ ಚಿತ್ರದ ಗೆಲುವಿನ ರೂವಾರಿ. ಅವರಿಂದಲೇ ಚಿತ್ರ ನಿಲ್ಲುತ್ತದೆ ಗೆಲ್ಲುತದೆ. ಇಂತಿಪ್ಪ ನಟಸಾರ್ವಭೌಮ’ನನ್ನು ಆರಾಮಾಗಿ ಒಮ್ಮೆ ಕಣ್ತುಂಬಿಕೊಳ್ಳಬಹುದು. ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಹೋಗಿ ಮಿಸ್ ಮಾಡದೇ ನೋಡಿ..

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top