RESPONSIVE LEADERBOARD AD AREA
Movie Reviews

ಬಜಾ಼ರ್ ಗೆ ಹೊಸ ಮಾಸ್ ಹೀರೋ ಎಂಟ್ರಿ

2017ರಲಿ ತೆರೆಕಂಡ ಚೌಕ ಚಿತ್ರದಲ್ಲಿ ಅನಧಿಕೃತವಾಗಿ ನಡೆಯುವ ಪಾರಿವಾಳ ರೇಸ್ ವಿಚಾರ ಕಥೆಯ ಒಂದು ಭಾಗವಾಗಿ ಬಂದು ಹೋಗಿತ್ತು. ಪಾರಿವಾಳ ರೇಸ್ ಟೂರ್ನಮೆಂಟ್ ಗಳು ಬಹಳ ಪ್ಯಾಷನೇಟ್ ಆಗಿ ಇಂದಿಗೂ ನಡೆಯುತ್ತವೆ ಅನ್ನೋದು ಬಹಳ ಜನಕ್ಕೆ ತಿಳಿದಿಲ್ಲ. ಅಸಲಿ ಈ ಪಾರಿವಾಳ ರೇಸ್ ಹುಟ್ಟಿಕೊಂಡಿದ್ದು ಹೇಗೆ? ಆ ರೇಸ್ನಲ್ಲಿ ಭಾಗವಹಿಸೋರು ಎಂತಹವರು? ಅವರಿಗೆ ಏನೆಂದು ಹೆಸರು? ರೇಸ್ ಗಾಗಿ ಪಾರಿವಾಳಗಳನ್ನು ಹೇಗೆ ತಯಾರಿ ಮಾಡಲಾಗುತ್ತದೆ? ಇವೆಲ್ಲ ವಿಷಯಗಳನ್ನು ‘ಬಜಾ಼ರ್’ ಚಿತ್ರದಲ್ಲಿ ತೆರೆದಿಡಲಾಗಿದೆ. ಒಂದು ಅಪರೂಪದ ಸಬ್ಜೆಕ್ಟ್ ಗೆ ಲಾಂಗು ಮಚ್ಚು ಕಲ್ಚರ್ ರೌಡಿಸಂನ ಲೇಪನ ಹಾಕಿ ಮುದ್ದಾದ ಜೋಡಿಗಳ ಲವ್ ಸ್ಟೋರಿಯನ್ನು ತಮ್ಮದೇ ಆದ ಸೂಕ್ಷಗಳೊಂದಿಗೆ ಪ್ರೇಕ್ಷಕರಿಗೆ ತೋರಿಸಿದ್ದಾರೆ ಸುನಿ.

ಕತೆ

ಅವ್ನೊಂಥರ ಬಿಸಿರಕ್ತದ ಕಾದಕಬ್ಬಿಣಿದಂಥಾ ಹುಡ್ಗ. ಅವನ ಹೆಸರು ಕಲ್ಕಿ. ಅವನು ಭೂಗತ ಲೋಕದ ದೊಡ್ಡ ಹ್ಯಾಂಡ್ ಯಜಮಾನ ಅನ್ನೋನ ರೈಟ್ ಹ್ಯಾಂಡ್. ನಡೆ ನುಡಿಯಲ್ಲಿ ದೌಲತ್ ಇದ್ದರೂ ಪರರಿಗಾಗಿ ಮಿಡಿಯುವ ಗುಣವಂತ. ಅವನಿಗೆ ಪಾರಿವಾಳ ರೇಸ್ ನಲ್ಲಿ ಶೋಕ್ ದಾರ್ ಆಗಬೇಕೆಂಬ ಆಸೆ ಇದೆ. ಅದೊಮ್ಮೆ ಲವ್ ಗಿಂತ ಲವ್ ಫೇಲ್ಯೂರ್ ಫೀಲಿಂಗೇ ದೊಡ್ಡದು ಎಂಬ ವಿಷಯ ತಿಳಿದು ಪಾರಿಜಾತ ಹೆಸರಿನ ಹುಡುಗಿನ ಆಯ್ಕೆ ಮಾಡಿಕೊಂಡು ಲವ್ ಫೇಲ್ಯೂರ್ ಮಾಡ್ಕೊಳ್ಳೋಕೆ ಅಂತಾನೇ ಅವಳ ಹಿಂದೆ ಬಿದ್ದು ಲವ್ ಮಾಡ್ತಾನೆ. ಇನ್ನೊಂದು ಕಡೆ ದುಶ್ಚಟಗಳಿಗೆ ದಾಸರಾದ ಖತರ್ನಾಕ್ ಗ್ಯಾಂಗ್ ಒಂದು ದೊಡ್ಡ ತಲೆಯೊಂದನ್ನು ಎತ್ತಿ ಹೆಸರಾಗಿ ಬಿಡುವ ಉಮೇದಿಯಲ್ಲಿ ಇರುತ್ತದೆ. ಹೀಗಿರುವಾಗ ಕಲ್ಕಿ ಹೇಗೆ ಶೋಕ್ ದಾರ ಆಗ್ತಾನೆ? ಅವನು ಬಯಸಿದ ಲವ್ ಫೇಲ್ಯೂರ್ ಫೀಲಿಂಗ್ ಅವನಿಗೆ ಸಿಗುತ್ತಾ? ಉತ್ತರ ಸಿನಿಮಾದಲ್ಲಿದೆ.

ಅಭಿನಯ

ಮೊದಲ ಚಿತ್ರದಲ್ಲೇ ತನ್ನ ಖಡಕ್ ಅಪಿಯರೆನ್ಸ್ ನಿಂದ ಧನ್ ವೀರ್ ಗಮನ ಸೆಳೆಯುತ್ತಾರೆ. ನಾಯಕಿ ಅದಿತಿ ಪ್ರಭುದೇವ ಅವರು ರಾಧಿಕಾ ಪಂಡಿತ್ ಅವರನ್ನು ನೆನಪಿಸುತ್ತಾರೆ. ಇಬ್ಬರ ಜೋಡಿ ತೆರೆಯ ಮೇಲೆ ಬಹಳ ಮುದ್ದಾಗಿ ಕಾಣುತ್ತದೆ. ಶರತ್ ಲೋಹಿತಾಶ್ವ ಮಗದೊಮ್ಮೆ ಭೂಗತ ಲೋಕದ ಪ್ರಬಲನಾಗಿ ಮಿಂಚಿದ್ದಾರೆ. ಕುಡುಕ ತಂದೆಯಾಗಿ ಧರ್ಮೇಂದ್ರ ಅರಸ್‌ ಅಭಿನಯ ಫರ್ಸ್ಟ್ ಕ್ಲಾಸ್.

ತಾಂತ್ರಿಕತೆ

ಬಜಾ಼ರ್ ರೌಡಿಸಂ ಬೇಸ್ ಸಿನಿಮಾವಾದರೂ ಎಲ್ಲಾ ವರ್ಗದ ಆಡಿಯೆನ್ಸ್ ಗೂ ತಲುಪುವಂತಹ ವಿಷಯಗಳನ್ನಿಟ್ಟು ಚಿತ್ರಕಥೆ ಹೆಣೆದಿದ್ದಾರೆ ಸುನಿ. ಬಜಾ಼ರ್ ನಲ್ಲಿ ಎಲ್ಲವೂ ಸಿಗುವಂತೆ ಬಜಾ಼ರ್ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ ಗಳು, ಲವ್ ಸ್ಟೋರಿ, ಫ್ಯಾಮಿಲಿ ಎಮೋಷನ್ಸ್, ಒಳ್ಳೆ ಡೈಲಾಗ್ಸು ಸಾಂಗ್ಸು ಎಲ್ಲವೂ ಇದೆ. ರವಿ ಬಸ್ರೂರ್ ಎಂದಿನಂತೆ ಬಿಜಿಎಮ್ ನಲ್ಲಿ ಅಬ್ಬರಿಸಿದ್ದಾರೆ.

ಕೊನೆಯದಾಗಿ

ಸ್ವಲ್ಪ ಅಭಿನಯ ಸುಧಾರಿಸಿಕೊಂಡರೆ ಧನ್ ವೀರ್ ಕನ್ನಡ ಇಂಡಸ್ಟ್ರಿಗೆ ಮತ್ತೊಬ್ಬ ಒಳ್ಳೆಯ ಹೀರೋ ಮೆಟೀರಿಯಲ್. ಸುನಿ ಅವರು ತಮ್ಮದೇ ಆದ ರೀತಿಯಲ್ಲಿ ಮಾಸ್ ಸಿನಿಮಾ ಮಾಡಿದ್ದರೂ ಲಾಂಗು ಮಚ್ಚುಗಳ ಆರ್ಭಟ ತುಸು ಹೆಚ್ಚೇ ಇದೆ. ಪಾರಿವಾಳ ಹಾರಾಟ ಸ್ಪರ್ದೆಯ ಹಿನ್ನೆಲೆ ಹಾಗೂ ರಹಸ್ಯಗಳನ್ನು ತೆರೆದಿಡುತ್ತಲೇ ಮಾಸ್ ಮನರಂಜನೆ ನೀಡುವ ‘ಬಜಾ಼ರ್’ ಚಿತ್ರವನ್ನು ಸೂಪರ್ ಅನ್ನಲಾಗದಿದ್ದರೂ “ಶೋಕ್ ದಾರ್”ನ ಖದರ್ ಕಹಾನಿಯಲ್ಲಿರೋ ತಾಜಾತನಕ್ಕಾಗಿ ಬಜಾ಼ರ್ ಕಾಣಲು ಚಿತ್ರಮಂದಿರಕ್ಕೆ ಹೋಗಿಬನ್ನಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top