RESPONSIVE LEADERBOARD AD AREA
Movie Reviews

ವಿಶ್ವ ಮಾನವತ್ವ ಸಾರುವ ಕೋರ್ಟ್ ಕಥನ

ಡಾ ರಾಜಕುಮಾರ್ ಅವರ ಚಿತ್ರಗಳಲ್ಲಿ ಕಥೆ, ಸಾಹಿತ್ಯ,ಸಂಭಾಷಣೆಯ ಜೊತೆಗೆ ಕೊನೆಯಲ್ಲಿ ಅತ್ಯುತ್ತಮ ಸಂದೇಶವೊಂದು ಪ್ರೇಕ್ಷಕನ ಮನದಾಳದಲ್ಲಿ ಜಾರುತ್ತಿತ್ತು . ಅವರ ಚಿತ್ರಗಳು ಸಾಮಾನ್ಯ ಜನಸಾಮಾನ್ಯನ ತಟ್ಟುತಿದ್ದದು ಅದಕ್ಕಾಗಿಯೆ. ಅನಂತು v/s ನುಸ್ರತ್ ಚಿತ್ರದಲ್ಲಿ ತಾತನನ್ನು ಮರುಕಳಿಸುವ ಯತ್ನವನ್ನು ವಿನಯ್ ಮಾಡಿದ್ದಾರೆ.

ಈ ಚಿತ್ರ ಒಂದು ಪ್ರೌಢತ್ವವನ್ನು ಪಡೆದುಕೊಳುವುದಕ್ಕೆ ಮುಖ್ಯ ಕಾರಣ ಕಥೆಯಲ್ಲಿನ ಹಲವು ಆಯಾಮ. ಒಂದು ಕಡೆ ಪ್ರೀತಿ ಪ್ರೇಮಕ್ಕೆ ಜಾತಿಧರ್ಮದ ಅಡ್ಡಗೋಡೆ ಸಡಿಲವಾಗುತ್ತೆ, ಇನ್ನೊಂದೆಡೆ ಮಾನವನ ಜೀವನಕ್ಕೆ ಒಂದು ಬಲವಾದ ಗುರಿ ಮತ್ತು ಈ ಸಮಾಜಕ್ಕೆ ಒಳಿತನ್ನು ನೀಡುವುದು ಒಂದು ಅತ್ಯವಶ್ಯಕ ಕ್ರಿಯೆ ,ಮಗದೊಂದೆಡೆ ಗಂಡ ಹೆಂಡತಿಯ ನಿರರ್ಥಕ ಕದನಗಳು ಹೇಗೆ ಕೋರ್ಟ್ ಮೆಟ್ಟಿಲು ಹತ್ತಿ ಕೃಶಗೊಳ್ಳುತ್ತದೆ .ಇವೆಲ್ಲವನೂ ತೆರೆಯ ಮೇಲೆ ಒಂದು ಪುಟ್ಟ ಪ್ರೇಮ ಕಥಾನಕದ ಮೂಲಕ ದಿಗ್ದರ್ಶಕ ಸುಧೀರ್ ಶಾನಭೋಗ್ ಹೇಳುವ ಪರಿ ಮನಮೋಹಕವಾಗಿದೆ.

ವಿನಯ್ ರಾಜಕುಮಾರ್ ತೆರೆಯ ಮೇಲೆ ಲವಲವಿಕೆಯಿಂದ ಕಾಣುತ್ತಾರೆ , ಆದರೂ ಸಹ ನಟನೆಯಲ್ಲಿ ಇನ್ನೂ ಮಾಗಬೇಕಿದೆ. ಲತಾ ಹೆಗ್ಡೆ ನಾಯಕಿಯಾಗಿ ಆಕರ್ಷಕವಾಗಿದ್ದಾರೆ . ಚಿತ್ರದ ಬಹುಮುಖ್ಯ ಬಲವೆಂದರೆ ಅಭೂತಪೂರ್ವ ಪೋಷಕ ನಟರು. ಬಿ ಸುರೇಶ ಅವರದು ಅತ್ಯುತ್ತಮ ಅಭಿನಯ. ಸಂಗೀತದಲ್ಲಿ ಒಂದೆರಡು ಹಾಡು ಇಂಪಾಗಿದೆ. ಇಮ್ರಾನ್ ಖುಸ್ರೊವ್ ಅವರ ಘಜಲ್ ಕೇಳುಗರ ಕಿವಿಗೆ ತಂಪೆರೆಯುತ್ತದೆ . ಚಿತ್ರದ ಎಂಡ್ ಕ್ರೆಡಿಟ್ಸ್ ನಲ್ಲಿ ಬರುವ ಕುವೆಂಪು ಅವರ ಗೀತೆಯೊಂದು ವಿಶ್ವಮಾನವತ್ವದ ಪ್ರತೀಕವಾಗಿದೆ.

ಕೆಜಿಎಫ್ ಸುನಾಮಿಯ ನಂತರ ಸೌಮ್ಯವಾದ ನದಿ ತೀರದಲ್ಲಿ ದೋಣಿವಿಹಾರದ ಅನುಭವ ನೀಡುತ್ತದೆ ಅನಂತು v /s ನುಸ್ರತ್. ಒಮ್ಮೆ ನೋಡಿ ಬನ್ನಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top