RESPONSIVE LEADERBOARD AD AREA
Film News

‘ಮಟಾಶ್’ ಚಿತ್ರದ ಲಿರಿಕಲ್ ವಿಡಿಯೋಗೆ ‘ಕಾರ್ಟೂನ್’ ಟಚ್…!

ಎಸ್ ಡಿ ಅರವಿಂದ್ ನಿರ್ದೇಶಿಸುತ್ತಿರುವ ‘ಮಟಾಶ್’  ಚಿತ್ರದ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ರೆಸ್ಪಾನ್ಸ್ ಪಡೆಯುತ್ತಿದೆ. ಕವಿರಾಜ್ ಸಾಹಿತ್ಯವಿರುವ ‘ನಮೋ ವೆಂಕಟೇಶ…’ ಎಂಬ ಗೀತೆಗೆ, ವ್ಯಂಗ್ಯಚಿತ್ರಕಾರ ಜಿ ಎಸ್ ನಾಗನಾಥ್ ರಚಿಸಿರುವ ಕಾರ್ಟೂನ್ ಪಾತ್ರಗಳು ಮೆರಗು ನೀಡಿದ್ದು, ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಿವೆ.

ನೋಟ್ ಬ್ಯಾನ್ ಆದ ಸಂದರ್ಭದಲ್ಲಿ ಜನರಿಗೆ ಉಂಟಾದ ಸಮಸ್ಯೆಗಳನ್ನು ವ್ಯಂಗ್ಯ ಮತ್ತು ತಮಾಷೆಯನ್ನು ಹದವಾಗಿ ಬೆರೆಸಿ ಈ ಹಾಡಿನ ಮೂಲಕ ತೋರಿಸಲಾಗಿದೆ. ಆ ಸಂದರ್ಭದಲ್ಲಿನ ಜನರ ಪಜೀತಿಯನ್ನು ಈ ವ್ಯಂಗ್ಯಚಿತ್ರಗಳು ಸಮರ್ಥವಾಗಿ ಹೇಳಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಈ ಕಾರಣದಿಂದಾಗಿ ‘ನಮೋ ವೆಂಕಟೇಶ…’ ಹಾಡು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಈ ಲಿರಿಕಲ್ ವಿಡಿಯೋವನ್ನು ಅಕ್ಟೋಬರ್ 31ರಂದು ನಟ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ನಿರ್ದೇಶಕ ಅರವಿಂದ್ ಅವರೇ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳು ಇರಲಿವೆ. ಸತೀಶ್ ಪಾಟಕ್, ಗಿರೀಶ್ ಪಟೇಲ್ ಮತ್ತು ಚಂದ್ರಶೇಖರ್ ಮಣ್ಣೂರು ಚಿತ್ರವನ್ನು ನಿರ್ಮಿಸುತ್ತಿದ್ದು, ಸಮರ್ಥ ನರಸಿಂಹ ರಾಜು ಮತ್ತು ಐಶ್ವರ್ಯ ಸಿಂಧೋಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇತರ ತಾರಾಗಣದಲ್ಲಿ ರಜಿನಿ ಭಾರದ್ವಾಜ್ ರಘು ರಾಮನಕೊಪ್ಪ, ಮನೋಹರ್, ನಂದಗೋಪಾಲ್, ಸದಾನಂದ್, ರಾಜೇಂದ್ರನ್, ಸಿದ್ಧಾಂತ್ ಮುಂತಾದವರು ನಟಿಸಿದ್ದಾರೆ.

ಭಾಗಶಃ ಹೊಸಬರ ತಂಡವೇ ತಯಾರಿಸುತ್ತಿರುವ ‘ಮಟಾಶ್’ ಚಿತ್ರ, ತನ್ನ ಹೆಸರು ಮತ್ತು ವಿಭಿನ್ನ ಪ್ರೆಸೆಂಟೇಶನ್ ಗಳಿಂದಲೇ ಗಮನ ಸೆಳೆಯುತ್ತಿದೆ. ಇದೇ ಮೊದಲ ಬಾರಿಗೆ ಸಿನಿಮಾದ ಲಿರಿಕಲ್ ವಿಡಿಯೋವೊಂದರಲ್ಲಿ ಕಾರ್ಟೂನುಗಳನ್ನು ಬಳಸಿಕೊಂಡು ಪ್ರೇಕ್ಷಕರ ಗಮನ ಸೆಳೆಯುತ್ತಿರುವ ಪ್ರಯತ್ನ ವಿಭಿನ್ನವಾಗಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top