RESPONSIVE LEADERBOARD AD AREA
Movie Articles

Massive craze for PowerStar Puneeth’s Anjaniputra

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳಿಗೆ ಕ್ರೇಜ಼್ ಅನ್ನೋದು ಡಿಫಾಲ್ಟ್ ಆಗಿ ಇದ್ದೇ ಇರುತ್ತದೆ. ಅದು ಅವರ ಹೆಸರಿಗಿರುವ, ಮಾಡಿರುವ ಸಿನಿಮಾಗಳ ಬ್ರ್ಯಾಂಡ್ ಗಿರುವ ತಾಕತ್ತು. ಅವರ ಅಭಿಮಾನಿ ಬಳಗ ದೊಡ್ಡದು, ಅವರ ಅಭಿಮಾನಿಗಳಿಗಿರುವ ಅಭಿಮಾನದ ಕಿಚ್ಚು ಕೂಡಾ ದೊಡ್ಡದು. ಹೀಗಾಗಿ ಅವರ ಸಿನಿಮಾಗಳಿಗೆ ಮಿಸ್ಸೇ ಇಲ್ಲದೆ ಹೌಸ್ ಫುಲ್ ಓಪೆನಿಂಗ್ ಸಿಗುತ್ತದೆ, ಸಿನಿಮಾ ಚೆನ್ನಾಗಿದೆ ಅನ್ನೋ ಟಾಕ್ ಬಂದುಬಿಟ್ಟರೆ ಬ್ಲಾಕ್ ಬಸ್ಟರ್ ಕನ್ಫರ್ಮ್.

ಈ ಮಾಸಾಂತ್ಯಕ್ಕೆ ಬಿಡುಗಡೆಯಾಗಲಿರುವ ಅಂಜನಿಪುತ್ರ ಚಿತ್ರಕ್ಕೂ ಜಬರ್ದಸ್ತ್ ಕ್ರೇಜ್ ಇದೆ. ಮೊಟ್ಟ ಮೊದಲ ಬಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರನ್ನು ನಿರ್ದೇಶಿಸಿರುವ ಹರ್ಷ ಮೂಲ ತಮಿಳು ಚಿತ್ರಕ್ಕೂ ಒಂದು ಕೈ ಮೇಲೆ ಎನ್ನುವ ಹಾಗೆ ಮಾಸ್ ದೃಶ್ಯಗಳನ್ನು ಸೆರೆ ಹಿಡಿದಿರುತ್ತಾರೆ ಎಂಬ ನಂಬಿಕೆ ಅಭಿಮಾನಿಗಳಲ್ಲಿದೆ. ಪುನೀತ್ ಜೋಡಿಯಾಗಿ ಕಿರಿಕ್ ಪಾರ್ಟಿ ಸೆನ್ಸೇಷನ್ ರಶ್ಮಿಕಾ ಮಂದಣ್ಣ ಅಭಿನಯಿಸಿರುವುದು ಚಿತ್ರದ ಮತ್ತೊಂದು ದೊಡ್ಡ ಆಕರ್ಷಣೆ. ರವಿ ಬಸ್ರೂರ್ ಹಾಡುಗಳು ನಿಧಾನವಾಗಿ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ ಅಲ್ಲದೆ ಟ್ರೈಲರ್ನಲ್ಲಿ ಕೇಳಿಬಂದ ಹಿನ್ನೆಲೆ ಸಂಗೀತ ಅಭಿಮಾನಿಗಳು ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತೆ ಮಾಡಿದೆ.

ಒಟ್ಟಿನಲ್ಲಿ ೨೦೧೭ರ ವರ್ಷ ಅಂಜನಿಪುತ್ರನ ಅಬ್ಬರದೊಂದಿಗೆ ಮುಗಿಯುವುದು ಗ್ಯಾರಂಟಿ. ದೊಡ್ಮನೆ ಹುಡ್ಗ ಚಿತ್ರದ ನಂತರ ಮತ್ತೊಂದು ಪೂರ್ಣ ಪ್ರಮಾಣದ ಮಾಸ್ ಪಾತ್ರದಲ್ಲಿ ಪುನೀತ್ ತಮ್ಮ ಅಭಿಮಾನಿಗಳ ಆಸೆಗಳನ್ನು ಈಡೇರಿಸುವುದು ಖಂಡಿತ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top