RESPONSIVE LEADERBOARD AD AREA
Film News

ಮನೋರಂಜನ್ ಅಭಿನಯಿಸುತ್ತಿರುವ ಮುಂದಿನ ಚಿತ್ರ ‘ಪ್ರಾರಂಭ’ …!

‘ಸಾಹೇಬ’ ನಾಗಿ ಮಿಂಚಿದ್ದ ರವಿಚಂದ್ರನ್ ಪುತ್ರ ಮನೋರಂಜನ್, ಈಗ ನವ ನಿರ್ದೇಶಕ ಮನು ಕಲ್ಯಾಡಿ ನಿರ್ದೇಶಿಸುತ್ತಿರುವ ‘ಪ್ರಾರಂಭ’.. ‘ಲವ್ ಲೈಫ್ ಬಿಗಿನ್ಸ್’ ಎಂಬ ಆಕರ್ಷಕ ಟ್ಯಾಗ್ ಲೈನ್ ಹೊಂದಿರುವ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರದ ಮೊದಲ ಪೋಸ್ಟರ್ ಮನೋರಂಜನ್ ಅವರ ಜನ್ಮದಿನದಂದು ಬಿಡುಗಡೆಯಾಗಿದೆ. ಚಿತ್ರಕ್ಕೆ ನಾಯಕಿಯಾಗಿ ಕೀರ್ತಿ ಕಲಕೇರಿ ಎಂಬ ಮಾಡೆಲಿಂಗ್ ಬೆಡಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹುಬ್ಬಳ್ಳಿಯ ಈ ಹುಡುಗಿ ಈಗಾಗಲೇ ಮಿಸ್ ಗೋವಾ ಕಾಂಟೆಸ್ಟ್ ನಲ್ಲಿ ವಿನ್ನರ್ ಆಗಿದ್ದಾರೆ.

ನಿರ್ದೇಶಕ ಮನು ಅವರ ಸಹೋದರ ಜಗದೀಶ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ಮೈಸೂರು ಬಳ್ಳಾರಿ ಚಿಕ್ಕಮಗಳೂರು ಮುಂತಾದ ಕಡೆ ಸುಂದರ ಲೋಕೇಶ್ ಗಳನ್ನು ಹುಡುಕಿದ್ದು, ಜನವರಿಯ ಮಧ್ಯಭಾಗದಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

ಈ ನಡುವೆ ಮನೋರಂಜನ್ ಅವರು ‘ಚಿಲ್ಲಂ’ ಎನ್ನುವ ಚಿತ್ರದಲ್ಲಿ ನಟಿಸುತ್ತಿರುವುದಾಗಿ ಪ್ರಕಟಿಸಲಾಗಿತ್ತು ಬಳಿಕ ಡೇಟ್ ಸಮಸ್ಯೆಯಿಂದ ಚಿತ್ರ ಸ್ಥಗಿತಗೊಂಡಿತ್ತು ಇದೀಗ ಚಿತ್ರತಂಡ ಮನೋರಂಜನ್ ಅವರನ್ನು ಸಂಪರ್ಕಿಸಿದ್ದು 2019 ಕೊನೆಯ ಭಾಗದಲ್ಲಿ ಚಿತ್ರ ಆರಂಭವಾಗಲಿದೆಯಂತೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top