RESPONSIVE LEADERBOARD AD AREA
Movie Reviews

Manjari is Decent Horror Thriller

ಪ್ರೇಕ್ಷಕರಿಗೆ ಮನರಂಜನೆಯ ತೃಪ್ತಿ ನೀಡುವ ದೆವ್ವ

ಅರುಣ್ ಸಾಗರ್ ನಟನೆಯ ಥ್ರಿಲ್ಲರ್ ಸಿನಿಮಾ ರಿಂಗ್ ಮಾಸ್ಟರ್ ನಿರ್ದೇಶನ ಮಾಡಿದ್ದ ವಿಶ್ರುತ್ ನಾಯಕ್ “ಮಂಜರಿ” ಚಿತ್ರದಲ್ಲಿ ಕತ್ತಲೆಯ ಮೊರೆ ಹೋಗದೆ, ಗ್ರಾಫಿಕ್ಸ್ ಗಳನ್ನು ಬಳಸದೇ ಗಟ್ಟಿ ಕಥೆಯೊಂದಿಗೆ ಅನಿರೀಕ್ಷಿತ ದೃಶ್ಯಗಳ ಸರಮಾಲೆಯ ವಿಶಿಷ್ಟ ಹಾರರ್ ಸಿನಿಮಾ ಮಾಡಿದ್ದಾರೆ.

ಕತೆ

ಅದೊಂದು ಫಾರ್ಮ್ ಹೌಸ್. ಆ ಫಾರ್ಮ್ ಹೌಸ್ನ ಕೇರ್ ಟೇಕರ್ ತನ್ನ ಸ್ನೇಹಿತರ ಜೊತೆ ಕುಡಿದು ಮಜಾ ಮಾಡಲು ಫಾರ್ಮ್ ಹೌಸ್ ಒಳಗೆ ಹೋಗುತ್ತಾನೆ. ಗೊತ್ತಿಲ್ಲದೆ ಅಲ್ಲಿ ಬಂದಿಯಾಗಿದ್ದ ಒಂದು ಅತೃಪ್ತ ಆತ್ಮವನ್ನು ವಿಮುಕ್ತ ಗೊಳಿಸುತ್ತಾನೆ. ಆ ಆತ್ಮ ಅಲ್ಲೇಕೆ ಬಂಧಿಯಾಗಿತ್ತು? ಅದರ ಗುರಿ ಏನು? ಆ ಫಾರ್ಮ್ ಹೌಸ್ ನ ಮಾಲೀಕರಿಗೆ ಆತ್ಮ ಏನು ಮಾಡುತ್ತದೆ? ಇದೆಲ್ಲವನ್ನು ರಂಜನೀಯವಾಗಿ ಕಟ್ಟಿಕೊಡುತ್ತದೆ ಮಂಜರಿ ಸಿನಿಮಾ.

ಅಭಿನಯ

ನಟಿ ರೂಪಿಕಾ ಒಳಗೆ ಇರುವ ನಟಿಯನ್ನು ಬಹಳ ಸಶಕ್ತವಾಗಿ ನಿರ್ದೇಶಕರು ಬಳಸಿಕೊಂಡಿದ್ದಾರೆ. ಇಡೀ ಸಿನಿಮಾ ಅವರ ಸುತ್ತವೇ ಸಾಗುವುದರಿಂದ ಎರಡು ಪಾತ್ರಗಳಲ್ಲಿ ರೂಪಿಕಾ ನಟನೆಯೆ ಚಿತ್ರದ ಜೀವಾಳ. ಉರ್ವಿ ಚಿತ್ರದಲ್ಲಿ ಗಮನ ಸೆಳೆದಿದ್ದ ಪ್ರಭು ಇಲ್ಲೂ ನೀಟಾದ ಅಭಿನಯವನ್ನೇ ನೀಡಿದ್ದಾರೆ. ವಿಜಯ್ ಚೆಂಡೂರ್ ಸ್ಯಾಂಡಲ್ ವುಡ್ ನ ಅಸೆಟ್ ಆಗಬಲ್ಲ ಒಳ್ಳೆಯ ಕಾಮಿಡಿಯನ್ ಎನ್ನುವುದನ್ನು ಸಾಬೀತು ಮಾಡುವಂತೆ ಚಿತ್ರದಲ್ಲಿ ಅವರ ಅಭಿನಯ ಮೂಡಿಬಂದಿದೆ.

ತಾಂತ್ರಿಕತೆ

ನಿರ್ದೇಶಕರಾದ ವಿಶ್ರುತ್ ನಾಯ್ಕ್ ಎಲ್ಲೂ ಬೋರ್ ಹೊಡೆಸದ, ಲ್ಯಾಗ್ ಇಲ್ಲದ ರಂಜನೀಯ ಚಿತ್ರಕಥೆ ಮಾಡಿದ್ದಾರೆ. ಮ್ಯಾಥ್ಯೂ ಮನು ಸಂಗೀತದಲ್ಲಿ ಮೂಡಿ ಬಂದಿರುವ ಚಿತ್ರದ ಎಲ್ಲ ಹಾಡುಗಳು ಕೇಳಲು ಇಂಪಾಗಿವೆ. ದೆವ್ವವನ್ನು ಕರೆಯುವ ಮತ್ತು ದೆವ್ವ ಬಿಡಿಸುವ ದೃಶ್ಯಗಳಲ್ಲಿ ಹಿನ್ನೆಲೆ ಸಂಗೀತ ಮತ್ತು ಸೌಂಡ್ ಎಫೆಕ್ಟ್ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಬಿ.ಆರ್‌.ಮನು ಅವರ ಛಾಯಾಗ್ರಹಣದಲಿ ಲೋಪವಿಲ್ಲ.

ಕೊನೆ ಮಾತು

ಚಂದನವನ ಒಂದು ರೀತಿ ಹಾರರ್ ಸಿನಿಮಾಗಳ ಹಬ್ ಆಗಿದೆ ಎಂದರೆ ತಪ್ಪಿಲ್ಲ. ಒಂದರ ಹಿಂದೆ ಒಂದರಂತೆ ಹಾರರ್ ಸಿನಿಮಾ ತೆರೆ ಕಾಣುತ್ತಿವೆ. ಆದರೆ ‘ಮಂಜರಿ’ ವಿಭಿನ್ನ ಶೈಲಿಯದ್ದು. ಕೊನೆಯ ದೃಶ್ಯದವರೆಗೆ ನಮ್ಮ ಕುತೂಹಲವನ್ನು ಕೆಣಕುತ್ತಲೇ ನೋಡಿಸಿಕೊಂಡು ಹೋಗಿ ಒಂದು ಒಳ್ಳೆಯ ಸಿನಿಮಾ ನೋಡಿದ ತೃಪ್ತಿ ನೀಡುವ ಸಿನಿಮಾ ಮಂಜರಿ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top