RESPONSIVE LEADERBOARD AD AREA
Film News

ಹಿರಿಯ ಲೇಖಕನಾಗಿ ಮಿರಿ ಮಿರಿ ಮಿಂಚಲು ಚಿನ್ನಾರಿ ಮುತ್ತ ರೆಡಿ

ಹಿರಿಯ ಲೇಖಕನಾಗಿ ಮಿರಿಮಿರಿ ಮಿಂಚಲು ಚಿನ್ನಾರಿ ಮುತ್ತ ರೆಡಿ

ವಿಜಯ್ ರಾಘವೇಂದ್ರ ಎಂತಹ ಪ್ರತಿಭಾನ್ವಿತ ನಟ ಅನ್ನೋದು ಇಡೀ ಕನ್ನಡ ಇಂಡಸ್ಟ್ರಿಗೆ ಗೊತ್ತಿರುವ ವಿಚಾರ. ಅವರೊಬ್ಬ ನಿರ್ದೇಶಕನ ನಟ, ನಿರ್ದೇಶಕ ಬಳಸಿಕೊಂಡಷ್ಟು ವೈನಾಗಿ ಅಭಿನಯಿಸೋದು ಅವರಿಗೆ ಗೊತ್ತು. ಸ್ವಭಾವತಃ ಸಂಕೋಚ ಸ್ವಭಾವದ, ಸಾತ್ವಿಕ ನಡತೆಯ ವಿಜಯ್ ರಾಘವೇಂದ್ರ ಅವರ ಪ್ರತಿಭೆಗೆ ಸವಾಲೊಡ್ಡುವಂತಹದ್ದೊಂದು ಸಿನಿಮಾ ಈಗ ಅವರಿಗೆ ಸಿಕ್ಕಿದೆ.

ಅದುವೇ ಮಾಲ್ಗುಡಿ ಡೇಸ್. ಇದು ಶಂಕರ್ ನಾಗ್ ಅವರು ನಿರ್ದೇಶಿಸಿದ್ದ ಕಲ್ಟ್ ಕ್ಲಾಸಿಕ್ ಧಾರಾವಾಹಿಯ ಪ್ರೇರಣೆ ಪಡೆದಿರೋದು ಅಂತ ನೀವು ಯೋಚಿಸಿದರೆ.. ತಪ್ಪು. ಇದು ನಿರ್ದೇಶಕ ಕಿಶೋರ್ ಮೂಡಬಿದಿರೆ ರಚಿಸಿರುವ ಅಪ್ಪಟ ಸೃಜನಶೀಲ ಕಥೆಯೊಂದನ್ನು ಆಧರಿಸಿದ ಚಿತ್ರ. ಸಿನಿಮಾದಲ್ಲಿ ವಿಜಯ್ ರಾಘವೇಂದ್ರ 70 ವರ್ಷ ವಯಸ್ಸಿನ ಮಾಗಿದ ಹಿರಿಯ ಲೇಖಕ. ಅವನ ತುಂಬಿದ ಕೊಡದಂತಹ ಜೀವನದ ವಿವಿಧ ಆಯಾಮಗಳನ್ನು ತೆರೆದಿಡುವ ಸತ್ವಪೂರ್ಣ ರಸಾನುಭವ ನೀಡುವ ಪಕ್ಕಾ ಸದಭಿರುಚಿ ಕಥೆ ಹೆಣೆದಿದ್ದಾರೆ ನಿರ್ದೇಶಕ ಕಿಶೋರ್.

ಎಪ್ಪತ್ತು ವರ್ಷಗಳ ವೃದ್ಧನ ಪಾತ್ರದಲ್ಲಿ ಕಾಣಿಸಿಕೊಳ್ಳಲು ವಿಜಯ ರಾಘವೇಂದ್ರ ಅವರು ಅನಾಮತ್ತು ನಾಲ್ಕು ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಳ್ಳ ಬೇಕಾಗುತ್ತಿತ್ತು. ಚಿತ್ರೀಕರಣ ಮುಗಿದ ಮೇಲೆ ಆ ಮೇಕಪ್ ತೆಗೆಯಲು ಹತ್ತಿರಹತ್ತಿರ ಎರಡು ಗಂಟೆಗಳಷ್ಟು ಸಮಯ ಹಿಡಿಯುತ್ತಿತ್ತು. ಇದನ್ನು ಒಮ್ಮೆ ಯೋಚಿಸಿ, ವಿಜಯ್ ಎಷ್ಟು ಕಷ್ಟ ಪಟ್ಟಿರಬೇಡ, ನಿರ್ದೇಶಕನ ವಿಷನ್ ಎಂಥದಿರಬಹುದೆಂದು.

ರತ್ನಾಕರ್ ಕಾಮತ್ ನಿರ್ಮಾಣದ ಈ ಚಿತ್ರಕ್ಕೆ ಗ್ರೀಷ್ಮಾ ಶ್ರೀಧರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಹಾಲಿವುಡ್ಡನವರೂ ನಾಚುವಂತೆ ವಿಜಯ್ ರಾಘವೇಂದ್ರ ಅವರಿಗೆ ಮೇಕಪ್ ಮಾಡಿರುವುದು ಕೇರಳ ಮೂಲದ ಪ್ರತಿಭಾವಂತ ರೋಷನ್.

ಒಟ್ಟಿನಲ್ಲಿ ಶನಿವಾರ ಬಿಡುಗಡೆಯಾದ ಫಸ್ಟ್ ಲುಕ್ ಪೋಸ್ಟರ್ ನಿಂದಲೇ ಕನ್ನಡ ಇಂಡಸ್ಟ್ರಿ ತುಂಬೆಲ್ಲ ದೊಡ್ಡ ಸಂಚಲನ ಮೂಡಿಸಿರುವ “ಮಾಲ್ಗುಡಿ ಡೇಸ್” ರಿಲೀಸ್ ಆದ ಮೇಲೆ ಹಂಡ್ರೆಡ್ ಡೇಸ್ ಓಡುವಂಥ ಸಿನಿಮಾ ಆಗಿ ರೂಪುಗೊಳ್ಳಲೆಂದು ನಮ್ಮ ನಿಮ್ಮೆಲ್ಲರ ಹಾರೈಕೆ 🙏

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top