RESPONSIVE LEADERBOARD AD AREA
Film News

ರೇಮೋ ಚಿತ್ರದ ಮಹತ್ವದ ಪಾತ್ರದಲ್ಲಿ ಮಧುಬಾಲ

ಕಳೆದ ವರ್ಷ “ಪ್ರೀಮಿಯರ್ ಪದ್ಮಿನಿ” ಚಿತ್ರದಲ್ಲಿ ಸಿಡುಕು ಸ್ವಭಾವದ, ಸೂಕ್ಷ್ಮತೆ ಅರಿಯದ ಹೆಂಡತಿಯ ಪಾತ್ರದಲ್ಲಿ ತಮ್ಮ ನಟನೆಯ ತಾಕತ್ತನ್ನು ತೋರಿಸಿದ್ದ ಅಣ್ಣಯ್ಯ ಖ್ಯಾತಿಯ ಬೊಂಬೆ ಮಧುಬಾಲಾ ಅವರು ಪವನ್ ಒಡೆಯರ್ ನಿರ್ದೇಶಿಸುತ್ತಿರುವ ರೋಗ್ ಇಶಾನ ಹಾಗೂ ಕನ್ನಡದ ಕೃಷ್ ಆಶಿಕಾ ರಂಗನಾಥ್ ಅಭಿನಯಿಸುತ್ತಿರುವ “ರೇಮೋ” ಚಿತ್ರದಲ್ಲಿ ಡಾಕ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಕಥೆಗೆ ತಿರುವು ಕೊಡುವಂತಹ ಮಹತ್ವದ ಪಾತ್ರ.

ನಿರ್ದೇಶಕ ಪವನ್ ಒಡೆಯರ್ ಅವರೇ ಹೇಳುವಂತೆ ಮಧುರಂತಹ ದೊಡ್ಡ ಕಲಾವಿದರನ್ನ ಯಾವುದೋ ಸಾಧಾರಣ “ಹೋಗಿ-ಬರುವ” ಪಾತ್ರಕ್ಕೆ ಹಾಕಲಾವುದಿಲ್ಲ. ಅವರ ಗತ್ತಿಗೆ, ಅವರ ಪ್ರತಿಭೆಗೆ ತಕ್ಕ ಪಾತ್ರವನ್ನೇ ನಮ್ಮ ಚಿತ್ರದಲ್ಲಿ ನೀಡಲಾಗಿದೆ. ಈ ಪಾತ್ರ ನಾಯಕ-ನಾಯಕಿಯ ಜೀವನಕ್ಕೆ ವಿಶೇಷವಾದ ತಿರುವನ್ನು ನೀಡಿ ತೆರೆಯ ಮೇಲೆ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡಲಿದೆ.

ಅಣ್ಣಯ್ಯ ನಂತರ ಸುದೀಪ್ ಅವರ ರನ್ನ ಚಿತ್ರದಲ್ಲಿ ಚಿತ್ರದಲ್ಲಿ ಮನೋಜ್ಞ ಅಭಿನಯ ನೀಡಿದ್ದ ಮಧುಬಾಲ ಅಂದಿನಿಂದ ಕನ್ನಡ ಚಿತ್ರರಂಗದೊಡನೆ ವಿಶೇಷವಾಗಿ ಗುರುತಿಸಿಕೊಂಡಿದ್ದಾರೆ. ಸೀತಾರಾಮ ಕಲ್ಯಾಣ, ಪದ್ಮಿನಿ ಚಿತ್ರಗಳಲ್ಲಿಯೂ ಮಿಂಚಿದ ಅವರು ಈ ವರ್ಷ “ರೇಮೋ” ಚಿತ್ರದ ಮೂಲಕ ಕನ್ನಡ ಸಿನಿಪ್ರಿಯರಿಗೆ ಮತ್ತಷ್ಟು ಹತ್ತಿರವಾಗಲಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top