RESPONSIVE LEADERBOARD AD AREA
Film News

ಪ್ರೀತಿಯ ಸಿಹಿಯಾದ ಸ್ವಾದ ಈ ಲವ್ ಮಾಕ್ಟೇಲ್

ರಘು ದೀಕ್ಷಿತ್ ಸಂಗೀತ ನೀಡಿರುವ ಬ್ಯೂಟಿಫುಲ್ ಹಾಡುಗಳು ಹಾಗೂ ಟ್ರೈಲರ್ ನಿಂದ ಕುತೂಹಲ ಮೂಡಿಸಿದ್ದ “ಲವ್ ಮಾಕ್ಟೇಲ್” ಚಿತ್ರ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅವರ ಮಹತ್ವಾಕಾಂಕ್ಷೆಯ ಚಿತ್ರವೂ ಹೌದು.

ನಾಯಕ ನಟ ಆದಿ ಉಡುಪಿಗೆ ಕಾರಿನಲ್ಲಿ ಹೋಗುವಾಗ ದಾರಿಯಲ್ಲಿ ಸಿಗುವ ಹುಡುಗಿಗೆ ತನ್ನ ಜೀವನದ ಪ್ರೇಮ ಕತೆಗಳನ್ನು ವಿವರಿಸುತ್ತಾ ತಾನು ಹೇಗೆ ನಾಯಕಿ ನಿಧಿಯನ್ನು ಮದುವೆಯಾಗಿ ಖುಷಿಯಾಗಿ ಜೀವನ ನಡೆಸುವ ಸಂದರ್ಭ ಬಂತು ಹಾಗೂ ತನ್ನ ಪ್ರೀತಿಯ ದಾಂಪತ್ಯ ಒಡೆದು ಹೋಗುವ ಪ್ರಸಂಗ ಎದುರಾಯಿತು ಎಂದು ವಿವರಿಸುತ್ತಾ ಕೊನೆಗೆ ಉಡುಪಿ ತಲುಪಿದಾಗ ಅವನಲ್ಲಿಗೆ ಹೋಗಲು ತಿಳಿಯುವ ಕಾರಣ ನೋಡಿದಾಗ ಪ್ರೇಕ್ಷಕರಿಗೆ ಭಾರವಾದ ಭಾವ ಉಂಟಾಗುವುದು ಖಚಿತ.

ಸರಳ ಸುಂದರ ಕತೆಗೆ ಸಾಕಷ್ಟು ಮನರಂಜನೆ ಜೊತೆಗೆ ಭಾವನಾತ್ಮಕ ಅಂಶಗಳನ್ನು ಬೆರೆಸಿ ಮೊದಲ ಯತ್ನದಲ್ಲೇ ನಿರ್ದೇಶಕನಾಗಿ ಕೃಷ್ಣ ಗೆದ್ದಿದ್ದಾರೆ. ಸಿನಿಮಾದಲ್ಲಿ ಬಹಳ ಇಷ್ಟವಾಗುವುದು ಕಥೆ ಹೇಳಿರುವ ರೀತಿ. ನಮ್ಮ ನಡುವೆಯೇ ಕತೆ ನಡೆಯುತ್ತಿದೆಯೇನೋ ಎಂಬಷ್ಟು ಆಪ್ಯಾಯಮಾನವಾಗಿ ಕಥೆ ಸಾಗುತ್ತದೆ. ಮೊದಲಾರ್ಧದಲ್ಲಿ ಬರುವ ಸ್ಕೂಲ್ ಕಾಲೇಜ್ ಎಪಿಸೋಡ್ ಬಹಳ ಖುಷಿ ಕೊಡುತ್ತದೆ. ಡಾರ್ಲಿಂಗ್ ಕೃಷ್ಣ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ನಾಯಕಿ ಮಿಲನ ನಾಗರಾಜ್ ಅವರದು ಅದ್ಭುತ ಅಭಿನಯ ಎಂದರೆ ಅತಿಶಯೋಕ್ತಿಯಲ್ಲ. ಬಹಳ ಕಾಲ ನೆನಪಿನಲ್ಲಿ ಉಳಿಯುವಂತಹ ಪಾತ್ರ ಅವರದು. ಕೃಷ್ಣ ಮತ್ತು ಮಿಲನ ಜೋಡಿ ಬಹಳ ಮುದ್ದಾಗಿ ತೆರೆ ಮೇಲೆ ಕಾಣುತ್ತಾರೆ. ಮಿಕ್ಕ ಪಾತ್ರಗಳೆಲ್ಲವೂ ಚೆನ್ನಾಗಿದ್ದು ಮತ್ತೊಬ್ಬ ನಾಯಕಿ ಅಮೃತಾ ಅಯ್ಯಂಗಾರ್ ಸಿಕ್ಕ ಪಾತ್ರದಲ್ಲಿ ಮಿಂಚುತ್ತಾರೆ.

ರಘು ದೀಕ್ಷಿತ್ ಸಂಗೀತ ಹಾಗೂ ಚಿತ್ರದ ಹಿನ್ನಲೆ ಸಂಗೀತ ಚಿತ್ರಕ್ಕೆ ಬಹುದೊಡ್ಡ ಪ್ಲಸ್ ಪಾಯಿಂಟ್. ಶ್ರೀ ಕ್ರೇಜಿಮೈಂಡ್ಸ್ ಅವರ ಕ್ಯಾಮರಾ ಕೈಚಳಕ ಹಾಗೂ ಸಂಕಲನ ಅಚ್ಚುಕಟ್ಟಾಗಿದ್ದು ಚಿತ್ರದ ಮೆರುಗನ್ನು ಹೆಚ್ಚಿಸಿದೆ.

ಒಂದು ಸುಂದರ ಪ್ರೀತಿಯ ಪಯಣದ ಹಿತಕರ ಅನುಭವದ ಜೊತೆಗೆ ಭಾವನೆಗಳ ಸಂಗಮವಾಗಿ ಲವ್ ಮಾಕ್ಟೇಲ್ ಹೊರಹೊಮ್ಮಿದ್ದು ಈ ವರುಷದ ಉತ್ತಮ ಚಿತ್ರಗಳ ಸಾಲಿನಲ್ಲಿ ಖಂಡಿತ ಸೇರುತ್ತದೆ. ಲವ್ ಸ್ಟೋರಿ ಸಿನಿಮಾ ಇಷ್ಟಪಡೋರು, ನಾಸ್ಟಾಲ್ಜಿಕ್ ಫೀಲಿಂಗ್ ಎಂಜಾಯ್ ಮಾಡೋರು, ಎಮೋಷನಲ್ ಕಥೆಗಳನ್ನು ನೋಡಲು ಬಯಸುವರು ಈ ಸಿನಿಮಾವನ್ನು ತಪ್ಪದೇ ನೋಡಬೇಕು.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top