RESPONSIVE LEADERBOARD AD AREA
Film News

‘ರಾಷ್ಟ್ರ ಪ್ರಶಸ್ತಿ’ಗಾಗಿ ಸ್ಪರ್ಧಿಸಲಿದೆ ‘ಕುರುಕ್ಷೇತ್ರ’…!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ, ಮುನಿರತ್ನ ನಿರ್ಮಾಣದ, ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರಕ್ಕಾಗಿ ಪ್ರೇಕ್ಷಕ ಪ್ರಭು ತಾಳ್ಮೆಯಿಂದ ಕಾಯುತ್ತಿರುವಾಗಲೇ ನಿರ್ಮಾಪಕರಿಂದ ಸಿಹಿ ಸುದ್ದಿಯೊಂದು ಬಂದಿದೆ. ಚಿತ್ರವು ‘ರಾಷ್ಟ್ರ ಪ್ರಶಸ್ತಿ’ಗಾಗಿ ಸ್ಪರ್ಧೆ ಮಾಡಲಿದೆ.

ಚಿತ್ರವು 2ಡಿ ಮತ್ತು 3ಡಿ ವರ್ಷನ್ ನಲ್ಲಿ ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿಯಿಂದ ‘ಯು/ ಎ ಸರ್ಟಿಫಿಕೆಟ್’ ಪಡೆದುಕೊಂಡಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ನಡುವೆ ನಿರ್ಮಾಪಕರು, ‘ನಮ್ಮ ಚಿತ್ರವು ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ್ದಾಗಿದ್ದು, ಅದ್ದೂರಿ ವೆಚ್ಚದಲ್ಲಿ ನಿರ್ಮಿಸಿದ್ದು, ರಾಷ್ಟ್ರಪ್ರಶಸ್ತಿ ಭಾಜನವಾಗುವ ಎಲ್ಲಾ ಅರ್ಹತೆ ಇದ್ದದ್ದರಿಂದ ಚಿತ್ರವನ್ನು ರಾಷ್ಟ್ರ ಪ್ರಶಸ್ತಿ ಆಯ್ಕೆಗಾಗಿ ಅರ್ಜಿ ಸಲ್ಲಿಸಲಾಗಿದೆ’ ಎಂದಿದ್ದಾರೆ ನಿರ್ಮಾಪಕ ಮುನಿರತ್ನ.

ಚಿತ್ರವನ್ನು ಬರುವ ಏಪ್ರಿಲ್ 5 ರಂದು ಬಿಡುಗಡೆ ಮಾಡುವುದಾಗಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಘೋಷಿಸಿದ್ದಾರೆ.

ಡಿ ಬಾಸ್ ದರ್ಶನ್ ದುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಸಿನಿಮಾ ಮೂರು ಗಂಟೆ ಐದು ನಿಮಿಷಗಳ ಅವಧಿಯಲ್ಲಿ ಮೂಡಿಬಂದಿದೆ. ಭೀಷ್ಮನ ಪಾತ್ರದಲ್ಲಿ ದಿವಂಗತರಾದ ರೆಬಲ್ ಸ್ಟಾರ್ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಇದೇ ಅವರ ಅಭಿನಯದ ಕೊನೆಯ ಚಿತ್ರ. ಕ್ರೇಜಿಸ್ಟಾರ್ ರವಿಚಂದ್ರನ್ ಶ್ರೀ ಕೃಷ್ಣನ ಪಾತ್ರದಲ್ಲಿ, ನಿಖಿಲ್ ಕುಮಾರ್ ಅಭಿಮನ್ಯುವಿನ ಪಾತ್ರದಲ್ಲಿ , ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಹಾಗೂ ದ್ರೌಪದಿಯ ಪಾತ್ರದಲ್ಲಿ ಸ್ನೇಹ ಅಭಿನಯಿಸಿದ್ದಾರೆ.

ನಾಗಣ್ಣ ನಿರ್ದೇಶನದ, ಭಾರಿ ಬಜೆಟ್ ನಲ್ಲಿ ತಯಾರಾಗಿರುವ ಈ ಚಿತ್ರದ ಚಿತ್ರೀಕರಣ ಕಳೆದ ವರ್ಷ ಪೂರ್ಣಗೊಂಡಿತ್ತು. ಆದರೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮತ್ತು ಗ್ರಾಫಿಕ್ಸ್ ಕೆಲಸಗಳಿಗಾಗಿ ಒಂದು ವರ್ಷ ತೆಗೆದುಕೊಂಡಿದೆ.

ತನ್ನ ಮೇಕಿಂಗ್ ಗಾಗಿ ಭಾರಿ ಕುತೂಹಲ ಹುಟ್ಟಿಸಿರುವ ಈ ಚಿತ್ರಕ್ಕೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಭಾಷಣೆಯನ್ನು ನೀಡಿದ್ದು, ವಿ ಹರಿಕೃಷ್ಣ ಸಂಗೀತವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top