RESPONSIVE LEADERBOARD AD AREA
Film News

ಬರುತ್ತಿದ್ದಾನೆ….! ‘ಕೋಟಿಗೊಬ್ಬ- 3’

‘ಕೋಟಿಗೊಬ್ಬ- 3’ ಚಿತ್ರದ ಬಗ್ಗೆ ಈಗ ಎಲ್ಲೆಡೆ ಸದ್ದು ಕೇಳಿಬರುತ್ತಿದೆ. ಕಿಚ್ಚ ಸುದೀಪ ಅಭಿನಯಿಸುತ್ತಿರುವ ಈ ಚಿತ್ರವನ್ನು ಸೂರಪ್ಪ ಬಾಬು ನಿರ್ಮಿಸುತ್ತಿದ್ದಾರೆ. ‘ಕೋಟಿಗೊಬ್ಬ 2’ ಸೂಪರ್ ಹಿಟ್ ಆಗಿದ್ದು, ಮೂರನೇ ಭಾಗದ ಕುರಿತು ಕುತೂಹಲ ಮೂಡಿದೆ.

ಕೆಲವು ಮೂಲಗಳ ಪ್ರಕಾರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳಿಗೆ 21 ಕೋಟಿ ಬೇಡಿಕೆ ಬಂದಿದೆ ಎನ್ನಲಾಗಿದೆ. ಕನ್ನಡದ ಟಿವಿ ಹಕ್ಕುಗಳಿಗೂ ಭಾರಿ ಬೇಡಿಕೆ ಬಂದಿದೆಯಂತೆ. ಆದರೆ ಸೂರಪ್ಪ ಬಾಬು ಚಿತ್ರ ಪೂರ್ಣಗೊಳ್ಳುವವರೆಗೆ ಹಕ್ಕುಗಳ ಮಾರಾಟದ ಬಗ್ಗೆ ಯೋಚಿಸದಿರಲು ತೀರ್ಮಾನಿಸಿದ್ದಾರೆ.

ಕೋಟಿಗೊಬ್ಬ-3 ಚಿತ್ರವನ್ನು ಶಿವಾ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಮೊದಲ ಹಂತದ ಚಿತ್ರೀಕರಣವನ್ನು ಬೆಲ್ ಗ್ರೇಡ್ ನಲ್ಲಿ ಮುಗಿಸಲಾಗಿದೆ. ಇನ್ನೆರಡು ಶೆಡ್ಯೂಲ್ ಗಳಲ್ಲಿ ಬೆಂಗಳೂರು ಮತ್ತು ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ಮಾಡಲು ಯೋಜಿಸಲಾಗಿದೆ.

ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ ಇರಲಿದೆ. ತಾರಾಗಣದಲ್ಲಿ ಮಡೋನಾ ಸೆಬಾಸ್ಟಿಯನ್ ಆಪ್ತಾಬ್ ಶಿವದಾಸನಿ, ರವಿಶಂಕರ್, ಶ್ರದ್ಧಾ ದಾಸ್, ತಬಲಾ ನಾಣಿ ಮುಂತಾದವರು ಇದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top