RESPONSIVE LEADERBOARD AD AREA
Film News

ಕಿಚ್ಚ ಸುದೀಪ್ ಬಿಡುಗಡೆ ಮಾಡಲಿದ್ದಾರೆ ಉಪೇಂದ್ರ ರ ‘ಐ ಲವ್ ಯು’ ಟ್ರೇಲರ್..!

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಬಹುನಿರೀಕ್ಷಿತ ‘ಐ ಲವ್ ಯು’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಟ್ರೇಲರನ್ನು ಕಿಚ್ಚ ಸುದೀಪ ಬಿಡುಗಡೆ ಮಾಡಲಿದ್ದಾರೆ.

ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಮೇ ತಿಂಗಳಿನಲ್ಲಿ ಬಿಡುಗಡೆಯಾಗುವ ಸಿದ್ಧತೆಯಲ್ಲಿದೆ. ಆರ್ ಚಂದ್ರು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವು ಈಗಾಗಲೇ ತನ್ನ ಪೋಸ್ಟರ್ ಗಳಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ.

ಚಿತ್ರವು ಶೀಘ್ರದಲ್ಲಿಯೇ ಸೆನ್ಸಾರ್ ಮಂಡಳಿಯ ಮುಂದೆ ಬರಲಿದ್ದು, ಸೆನ್ಸಾರ್ ಮಂಡಳಿಯ ಕ್ಲಿಯರೆನ್ಸ್ ಬಳಿಕ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ತಾಜ್ ಮಹಲ್, ಚಾರ್ಮಿನಾರ್ ಮುಂತಾದ ವಿಭಿನ್ನ ಪ್ರೇಮಕಥೆಗಳನ್ನು ರೂಪಿಸಿ ಗೆದ್ದಿರುವ ಆರ್. ಚಂದ್ರು, ಇದೇ ಮೊದಲ ಬಾರಿಗೆ ಉಪೇಂದ್ರರ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

‘ಐ ಲವ್ ಯೂ’ ಚಿತ್ರದಲ್ಲಿ ಉಪೇಂದ್ರ ‘ಲವ್‌ ಗುರು’ವಿನ ಪಾತ್ರ ವಹಿಸುತ್ತಿದ್ದು, ರಚಿತಾರಾಮ್ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋನು ಗೌಡ ಮತ್ತು ತ್ರಿವೇಣಿ ಚಿತ್ರದಲ್ಲಿ ಇದ್ದಾರೆ. ಚಿತ್ರಕ್ಕೆ ಕಿರಣ್ ತೋಟಂಬೈಲ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣವಿರಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top