RESPONSIVE LEADERBOARD AD AREA
Film News

ಖದರ್ ಕುಮಾರ್ ಪ್ರಜ್ವಲ್ ದೇವರಾಜ್ ಕಾಂಬಿನೇಷನ್ ನಲ್ಲಿ ಪಾರ್ವತಮ್ಮ ಪ್ರೊಡ್ಯೂಸರ್ ಹೊಸ ಸಿನಿಮಾ

ದಿಶಾ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಸುಮಲತಾ ಅಮ್ಮ, ಹರಿಪ್ರಿಯಾ ಅಭಿನಯದ “ಡಾಟರ್ ಆಫ್ ಪಾರ್ವತಮ್ಮ” ಚಿತ್ರ ನಿರ್ಮಾಣ ಮಾಡಿ ಗಮನ ಸೆಳೆದಿದ್ದ ನಿರ್ಮಾಪಕ ಕೆ ಎಂ ಶಶಿಧರ್ ತಮ್ಮ ಎರಡನೇ ಸಿನಿಮಾ ನಿರ್ಮಾಣಕ್ಕೆ ಸಜ್ಜಾಗುತ್ತಿದ್ದಾರೆ. ಖದರ್ ಕುಮಾರ್ ಅವರ ನಿರ್ದೇಶನದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸಲಿರುವ ಹೊಸ ಚಿತ್ರದ ನಿರ್ಮಾಣಕ್ಕೆ ಅವರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಡಾಟರ್ ಆಫ್ ಪಾರ್ವತಮ್ಮ ಚಿತ್ರದಲ್ಲಿ ಒಂದು ಸಾಂಸಾರಿಕ ಥ್ರಿಲ್ಲರ್ ವಿಷಯವನ್ನು ಜನರಿಗೆ ಹೇಳುವ ಪ್ರಯೋಗಕ್ಕೆ ಬೆನ್ನೆಲುಬಾಗಿ ನಿಂತಿದ್ದ ಶಶಿಧರ್ ಅವರು ಈ ಬಾರಿ ಒಂದು ಪಕ್ಕಾ ಕಮರ್ಷಿಯಲ್ ಸಬ್ಜೆಕ್ಟ್ ಮಾಡಲು ಇರುವಂತಹ ರಂಜನೀಯ ಸಿನಿಮಾಗೆ ಹಣ ಹೂಡಲು ಮುಂದಾಗಿದ್ದಾರೆ. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಹಲವು ಸಿನಿಮಾಗಳಿಗೆ ದುಡಿದು ಹೆಸರು ಮಾಡಿರುವ ಖದರ್ ಕುಮಾರ್ ಅವರು ಬರೆದಿರುವ ಪಕ್ಕಾ ಕಮರ್ಷಿಯಲ್ ಸ್ಕ್ರಿಪ್ಟ್ ನಿರ್ಮಾಪಕರಿಗೆ ಇಷ್ಟವಾಗಿದೆ. ಹೀಗಾಗಿ ತಡಮಾಡದೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ ಅವರು.

ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಮೂಲಕ ಶಂಕರ್ ಅವರನ್ನು ಸ್ವತಂತ್ರ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಕೊಟ್ಟಿದ್ದ ಶಶಿಧರ್, ತಮ್ಮ ಎರಡನೇ ಚಿತ್ರದಲ್ಲೂ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹೊತ್ತಿರುವ ಖದರ್ ಕುಮಾರ್ ಅವರಿಗೆ ಸಾಥ್ ನೀಡಲು ಮುಂದಾಗಿರುವುದು ಅವರೊಳಗಿನ ಸದಭಿರುಚಿ ನಿರ್ಮಾಪಕನ ಗುಣ ಸ್ವಭಾವಕ್ಕೆ ಸಾಕ್ಷಿ.

ನಾಯಕಿಯ ಹುಡುಕಾಟ ನಡೆಯುತ್ತಿದ್ದು, ಪ್ರಜ್ವಲ್ ದೇವರಾಜ್ ನಟನೆಯ ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ ತಿಂಗಳಲ್ಲಿ ಶುರುವಾಗಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top