RESPONSIVE LEADERBOARD AD AREA
Film News

100 ಕೋಟಿ ದಾಟಿದ ‘ಕೆಜಿಎಫ್’ ಕಲೆಕ್ಷನ್ಸ್..!!

ಕಳೆದವಾರ(ಡಿ.21) ದೇಶದಾದ್ಯಂತ ಬಿಡುಗಡೆಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ಅಭಿನಯದ ‘ಕೆಜಿಎಫ್’ ಬಿಡುಗಡೆಯಾದ ಎಲ್ಲಾ ಐದು ಭಾಷೆಗಳಿಂದ ಒಟ್ಟು ನೂರು ಕೋಟಿ ಗಳಿಕೆ ಮಾಡಿದ್ದು, ಇನ್ನೂ ಯಶಸ್ಸಿನ ನಾಗಲೋಟ ಮುಂದುವರೆಸಿದೆ.

ಶಾರುಖ್ ಖಾನ್ ಅಭಿನಯದ ‘ಝೀರೋ’, ಧನುಷ್ ಅವರ ‘ಮಾರಿ -2’ ಹಾಗೂ ವಿಜಯ್ ಸೇತುಪತಿ ಅಭಿನಯದ ತಮಿಳು ಚಿತ್ರಗಳ, ಜೊತೆಗೆ ಕೆಜಿಎಫ್ ತೆರೆಕಂಡಿತ್ತು. ಈ ಎಲ್ಲಾ ಸಿನಿಮಾಗಳನ್ನು ಮೀರಿ ‘ಕೆಜಿಎಫ್’ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಮುಂದಿದೆ. ಹಿಂದಿ ಭಾಷೆ ಒಂದರಲ್ಲೇ 9 ನೇ ದಿನದ ಅಂತ್ಯಕ್ಕೆ, ಸುಮಾರು 23 ಕೋಟಿಯನ್ನು ಗಳಿಸಿದೆ.

ಇದುವರೆಗೆ ಹಿಂದಿಗೆ ಡಬ್ ಆದ ದಕ್ಷಿಣ ಭಾರತೀಯ ಸಿನಿಮಾಗಳ ಗಳಿಕೆಯನ್ನು ಮೀರಿಸುವತ್ತ ‘ಕೆಜಿಎಫ್’ ಮುನ್ನಡೆದಿದೆ. ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಭಾಷೆಗಿಂತಲೂ ಕಥೆ ಮುಖ್ಯ ಎನ್ನುವುದು ಈ ಚಿತ್ರದಿಂದ ಮತ್ತೊಮ್ಮೆ ಖಚಿತವಾಗಿದೆ.

ಹಿಂದಿಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಿದ ಫರ್ಹಾನ್ ಅಖ್ತರ್ ಮತ್ತು ರಿತೇಶ್ ಸಿಧ್ವಾನಿ ಚಿತ್ರದ ಗಳಿಕೆ ಕುರಿತು ಯಶ್ ಅವರ ಸಮ್ಮುಖದಲ್ಲಿ ಮುಂಬೈಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಖುಷಿ ಹಂಚಿಕೊಂಡರು.

ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದಲ್ಲಿ ಭುವನ್ ಗೌಡ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ, ಮತ್ತು ಶಿವಕುಮಾರ್ ಕಲಾ ನಿರ್ದೇಶನವಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top