RESPONSIVE LEADERBOARD AD AREA
Film News

‘ಕೆಜಿಎಫ್ ಚಾಪ್ಟರ್ 2’ ಗೆ ಮುಹೂರ್ತ..!!!

“ಕೆಜಿಎಫ್” ಚಾಪ್ಟರ್- 2 ನಿರೀಕ್ಷೆಯಂತೆ ಬುಧವಾರ ಮುಹೂರ್ತವನ್ನು ಮಾಡಿದೆ. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ , ನಿರ್ಮಾಪಕ ವಿಜಯ್ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ ಗೌಡ ಮತ್ತಿತರರು ಪಾಲ್ಗೊಂಡಿದ್ದರು.

ಈ ಕುರಿತು ಪ್ರಶಾಂತ್ ನೀಲ್ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಈ ರೀತಿ ಬರೆದಿದ್ದಾರೆ “ಕೆಜಿಎಫ್ ಚಾಪ್ಟರ್ 1″ ನಿಮ್ಮೆಲ್ಲರ ಅಪಾರ ಪ್ರೀತಿ ಗಳಿಸಿದೆ. ಇದೀಗ ಚಾಪ್ಟರ್ 2 ಬರಲು ಸಿದ್ಧವಾಗಿದ್ದು, ತಮಗೆ ಡಬಲ್ ಧಮಾಕ ವನ್ನು ನೀಡಲಿದೆ. ಅದಕ್ಕೆ ಬೇಕಾಗಿರುವುದು ನಿಮ್ಮ ಪ್ರೀತಿ ಮತ್ತು ಹಾರೈಕೆ” ಎಂದಿದ್ದಾರೆ

‘ನಿರ್ಮಾಪಕ ವಿಜಯ್ ಕಿರಗಂದೂರು ಕೂಡ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು ಬುಧವಾರ ಬೆಳಗ್ಗೆ ಎಲ್ಲರ ಪ್ರೀತಿ ದೇವರ ಆಶೀರ್ವಾದ ಎಲ್ಲರ ಸಹಕಾರದಿಂದ ‘ಚಾಪ್ಟರ್ 2′ ಮಾಡುತ್ತಿದ್ದೇವೆ’ ಎಂದಿದ್ದಾರೆ. ಅಲ್ಲದೆ ‘ಚಾಪ್ಟರ್ ಒಂದರ ಬಿಡುಗಡೆಗೆ ಹೊರರಾಜ್ಯಗಳಿಂದ ಸಹಾಯ ನೀಡಿದವರನ್ನು ತಮ್ಮ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿದ್ದಾರೆ.

“ಚಿತ್ರದ ಎರಡನೇ ಭಾಗ ಬರುತ್ತಿರುವುದು ನಮಗೆಲ್ಲರಿಗೂ ಡಬಲ್ ಧಮಾಕಾ ಹಾಗೆಯೇ ಡಬಲ್ ಕೆಲಸ, ಡಬಲ್ ಪರಿಶ್ರಮ. ನಾನು ಈ ಚಿತ್ರದ ಒಂದು ಭಾಗವಾಗಿ ರುವುದಕ್ಕೆ ಅತ್ಯಂತ ಸಂತೋಷವಿದೆ ಈ ಚಿತ್ರದ ಬಜೆಟ್ ಚಾಪ್ಟರ್ ಒಂದಕ್ಕಿಂತ ಹೆಚ್ಚಿನದಾಗಬಹುದು ನಾವು ಈ ಚಿತ್ರದಲ್ಲಿ ಇನ್ನಷ್ಟು ದೊಡ್ಡ ತಾರಾಬಳಗವನ್ನು ನೋಡಲು ಕಾತರರಾಗಿದ್ದೇವೆ” ಎಂದು ಹೇಳಿದ್ದಾರೆ.

“ಈ ಚಿತ್ರದಲ್ಲಿ ‘ರಾಕಿ ಭಾಯಿ’ಯ ಇನ್ನೊಂದು ಮುಖವನ್ನು ಕಾಣಲಿದ್ದೀರಿ. ಚಿತ್ರಕ್ಕಾಗಿ ಬಾಲಿವುಡ್ ನ ಹಿರಿಯ ನಟರು ಭಾಗವಹಿಸಲಿದ್ದಾರೆ. ಆದರೆ ಅವರ ಕಾಲ್ ಶೀಟ್ ಇನ್ನೂ ಪಕ್ಕಾ ಆಗಿಲ್ಲದ ಕಾರಣ ಇನ್ನೂ ಅಧಿಕೃತ ಘೋಷಣೆ ಏನು ಮಾಡಿಲ್ಲ.

ಚಿತ್ರದ ಚಿತ್ರೀಕರಣ ಮುಂದಿನ ವಾರದಿಂದ ಬೆಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರಾರಂಭವಾಗಲಿದ್ದು ಯಶ್ ಅವರು ಏಪ್ರಿಲ್ ನಲ್ಲಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರಂತೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top