RESPONSIVE LEADERBOARD AD AREA
Film News

‘ಕವಲು ದಾರಿ’ಯ ಎರಡನೇ ಹಾಡು ಸಖತ್ ಟ್ರೆಂಡಿಂಗ್..!!

ಪುನೀತ್ ರಾಜ್ ಕುಮಾರ್ ಅವರ ಒಡೆತನದ ಪಿಆರ್ ಕೆ ಫಿಲಂಸ್ ರವರ ಮೊದಲ ನಿರ್ಮಾಣದ ಚಿತ್ರ ‘ಕವಲು ದಾರಿ’ ಚಿತ್ರ ತಂಡ ಕಳೆದ ವಾರವಷ್ಟೇ ಹಾಡೊಂದನ್ನು ಬಿಡುಗಡೆ ಮಾಡಿತ್ತು. ‘ನಿಗೂಢ…’ ಎಂಬ ಆ ಗೀತೆ ಚಿತ್ರದ ಕುರಿತು ಕುತೂಹಲ ಕೆರಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವಾರ, ಸಿದ್ಧಾರ್ಥ ಧ್ವನಿಯಲ್ಲಿ ಮೂಡಿ ಬಂದಿರುವ ‘ಇದೇ ದಿನ..’ ಎನ್ನುವ ಮತ್ತೊಂದು ಗೀತೆ ಬಿಡುಗಡೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಗುತ್ತಿದೆ. ಈ ಗೀತೆಗೆ ಚರಣ್ ರಾಜ್ ಸಂಗೀತ ನೀಡಿದ್ದಾರೆ.

‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಎಂಬ ವಿಭಿನ್ನ ಸಿನಿಮಾವನ್ನು ನಿರ್ದೇಶಿಸಿ ಗೆದ್ದಿದ್ದ ನಿರ್ದೇಶಕ ಹೇಮಂತ್ ರಾವ್, ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅನಂತ್ ನಾಗ್ ಮತ್ತು ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮೊದಲ ಗೀತೆಯೇ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಭಾವನಾತ್ಮಕ ವಿಷಯಗಳನ್ನು ಬಿಂಬಿಸುವ ಎರಡನೇ ಗೀತೆ ಕೂಡ ಕೇಳಲು ಮಧುರವಾಗಿದೆ.

ಚಿತ್ರದಲ್ಲಿ ಅನಂತನಾಗ್ ನಿವೃತ್ತ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರಿಷಿ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ.

ಇದೊಂದು ಕುತೂಹಲಭರಿತ ಸಸ್ಪೆನ್ಸ್ ಥ್ರಿಲ್ಲರ್ ಆಗಿದ್ದು, ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಬರುವ ಏಪ್ರಿಲ್ 12ರಂದು ಚಿತ್ರ ಬಿಡುಗಡೆಯಾಗುವುದು ಖಚಿತವಾಗಿದೆ. ಚಿತ್ರದಲ್ಲಿ ರೋಶಿನಿ ಪ್ರಕಾಶ್, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ಸಿದ್ದಾರ್ಥ ಮಾಧ್ಯಮಿಕ, ಸಿರಿ ರವಿ ಕುಮಾರ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top