RESPONSIVE LEADERBOARD AD AREA
Movie Reviews

ನಗುವವರಿಗೆ ಮಾತ್ರ.. Yes Yes ಪಪ್ಪಾ

ನಗುವವರಿಗೆ ಮಾತ್ರ.. Yes Yes ಪಪ್ಪಾ

ಅವನು ಲೋಕಲ್ ಹೀರೋ ಜಾನಿ. ಅವನ ನೆರಳಿನಂತಿರುವ ಒಬ್ಬ ಪಪ್ಪಾ ಜೊತೆಗೊಬ್ಬ ಚಿಲ್ಟಾರಿ ಸೈಡ್ ಕಿಕ್ ಬೀಜ. ಜನರಿಗಾಗಿ ಡೀಲ್ ಮಾಡುವುದೇ ಅವನ ಕಾಯಕ. ಪಕ್ಕಾ ಲೋಕಲ್. ಮಾತಾಡೋದು ಕಂಗ್ಲಿಷ್. ಆಪತ್ತಿನಲ್ಲಿರುವವರಿಗಾಗಿ ಇಮ್ಮಿಡಿಯೇಟ್ ಆಗಿ ಧಾವಿಸುವ ಆಪ್ತರಕ್ಷಕ. ಇದು ಜಾನಿಯ ಕಥೆ. ಇವನು ನಿಮಗೆ ಹೊಸಬನಲ್ಲ, ಹಿಂದೆ ಇವನು ಪ್ರೀತಿ ಮೇರಾ ಕಾಮ್ ಅಂದುಕೊಂಡು ಮಾಡಿದ ಆಟಾಟೋಪಗಳನ್ನು ನೀವು ಮೆಚ್ಚಿದ್ದಿರಿ. ಈಗ ಅದೇ ಜಾನಿ ಪಪ್ಪಾ ಜೊತೆ ಎಸ್ ಎಸ್ ಎಂದುಕೊಂಡು ಮತ್ತೆ ಬಂದಿದ್ದಾನೆ. ಜಾನಿಯನ್ನ ಬ್ರ್ಯಾಂಡ್ ಮಾಡಿ. ಒಂದಷ್ಟು ಹಾಡುಗಳು, ಇನ್ನೊಂದಷ್ಟು ಸೆಂಟಿಮೆಂಟು, ಫೈಟ್ಸ್ , ಕಾಮಿಡಿ ಎಲ್ಲಾ ಸೇರಿಸಿ ಮತ್ತೊಮ್ಮೆ ಒಂದು ಪಕ್ಕಾ ಮಾಸ್ ಕಲರ್ ಫುಲ್ ಕಾಮಿಡಿ ಚಿತ್ರವನ್ನ ಪ್ರೀತಂ ಗುಬ್ಬಿ ಅಚ್ಚುಕಟ್ಟಾಗಿ ಮಾಡಿದ್ದಾರೆ.

ಸಂಪೂರ್ಣ ಕಾಮಿಡಿಮಯವಾಗಿ ಸಾಗುವ ಚಿತ್ರದಲ್ಲಿ ಲಾಜಿಕ್ ಹುಡುಕುವಂತಿಲ್ಲ. ಬರೀ ಮ್ಯಾಜಿಕ್ ಅಷ್ಟೇ. ‘ಬನ್ನಿ ದುಡ್ಡು ಕೊಟ್ಟು ಮಜಾ ಮಾಡಿ ಹೋಗಿ’ ಎನ್ನುವಂತಹ ಪ್ಯಾಕೇಜ್ನಲ್ಲಿ ಸಿನಿಮಾ ರೂಪುಗೊಂಡಿದೆ. ಹಾಗೆಂದು ಇದೇನು ಬರೀ ಸಿಲ್ಲಿ ಕಾಮಿಡಿ ಮಾತ್ರ ಇರುವ ಸಿನಿಮಾವಲ್ಲ, ಎಲ್ಲ ವರ್ಗದ ಜನರಿಗೂ ಜಾನಿ ಕಡೆಯಿಂದ ಸಂದೇಶ ಇದೆ. ನಗುವಿನ ಮೂಲಕ ಅದನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಬೋಧನೆ ಮಾಡಲು ಹೋಗದೆ, ಚಿತ್ರದ ಸಂಭಾಷಣೆ, ಸನ್ನಿವೇಶಗಳಲ್ಲಿ ಸಂದೇಶವನ್ನು ಅಡಗಿಸಿ ಇಡಲಾಗಿದೆ.

ಒಳ್ಳೆಯ ವಿಚಾರ ಏನೆಂದರೆ ನಗಿಸಲೆಂದೇ ಚಿತ್ರದುದ್ದಕ್ಕೂ ಇಟ್ಟಿರುವ ಹಲವಾರು ಫನ್ ಎಲಿಮೆಂಟ್ ಗಳು ಪ್ರೇಕ್ಷಕರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತವೆ. ಕಲರ್ ಕಲರ್ ಕಾಸ್ಟ್ಯೂಮ್ ಹಾಕಿಕೊಂಡು, ಕ್ವಾಟ್ಲೆ ಮಾಡ್ಕೊಂಡು, ಕಂಗ್ಲಿಷ್ ಆಡ್ಕೊಂಡು, ಟೈಮ್ ಟೈಮ್ಗೆ ಹಾಡು ಹಾಡಿಕೊಂಡು, ಫೈಟ್ ಮಾಡಿಕೊಂಡು ದುನಿಯಾ ವಿಜಯ್ ಮಿಂಚಿದ್ದಾರೆ. ಹೊಸ ಪದ್ಮಾವತಿ ರಚಿತಾ ರಾಮ್‌ ಪ್ರತಿ ಫ್ರೇಮ್‌ನಲ್ಲಿಯೂ ಕಣ್ಣು ಕೋರೈಸುತ್ತಾ ಮಾದಕವಾಗಿ ಕಾಣುತ್ತಾರೆ. ರಂಗಾಯಣ ರಘು ಮತ್ತು ಸಾಧು ಕೋಕಿಲಾ ತಮ್ಮ ರೆಪ್ಯುಟೇಷನ್ ಉಳಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದಲ್ಲಿ ಎರಡು ಹಾಡುಗಳು ಚೆನ್ನಾಗಿವೆ, ಹಿನ್ನೆಲೆ ಸಂಗೀತ ಪೂರಕವಾಗಿದೆ. ಛಾಯಾಗ್ರಾಹಕ ಕರುಣಾಕರನ್, ಕಲಾನಿರ್ದೇಶಕ ಮೋಹನ್ ಬಿ. ಕೆರೆ ಶ್ರಮ ಚಿತ್ರದ ಪ್ರತಿ ಫ್ರೇಮ್ ನಲ್ಲೂ ಕಂಡಿದೆ.

ಪ್ರೇಕ್ಷಕರು ಸಿನಿಮಾ ನೋಡಿ ನಕ್ಕು ನಕ್ಕು ಎಂಜಾಯ್ ಮಾಡಬೇಕು ಎಂಬ ಏಕೈಕ ಉದ್ದೇಶದಿಂದಲೇ ಚಿತ್ರಕತೆ ಹೆಣೆದಿರುವುದರಿಂದ ಕಥೆ ಚಿತ್ರಕಥೆಯಲ್ಲಿ ಹೊಸದೇನು ನಿರೀಕ್ಷೆ ಮಾಡುವಂತಿಲ್ಲ. ಮ್ಯಾಟರ್ ಬಹಳ ಸಿಂಪಲ್, ಜಾನಿ ಮತ್ತು ಪಪ್ಪಾ ಇರುವುದೇ ಕಾಮಿಡಿ ಮಾಡಲು, ನೀವು ನಗಬೇಕು, ಜಾನಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಜಾನಿ ನಗಿಸಿಯೇ ಕಳಿಸುತ್ತಾನೆ. ಆ ವಿಚಾರದಲ್ಲಿ ಸಂಶಯ ಬೇಡ.

Rating 3/5

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top