RESPONSIVE LEADERBOARD AD AREA
Film News

ಜಯರಾಮ್ ನಿರ್ದೇಶಿಸಲಿರುವ ಹೊಸ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ..!!

‘ಪ್ರಜಾಕೀಯ’ ಮತ್ತು ಸಿನಿಮಾ ಎರಡನ್ನೂ ಸಮತೂಕದಲ್ಲಿ ನಿಭಾಯಿಸುತ್ತಿರುವ ಸೂಪರ್ ಸ್ಟಾರ್ ಉಪೇಂದ್ರ ಇದೀಗ ಸಿನಿಮಾಗಳನ್ನು ಕೂಡ ಅಳೆದು ತೂಗಿ ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಅವರು ಅಭಿನಯಿಸಲಿರುವ ಮತ್ತೊಂದು ಹೊಸ ಚಿತ್ರ ಘೋಷಣೆಯಾಗಿದ್ದು, ಈ ಚಿತ್ರವನ್ನು ಜಯರಾಮ್ ಭದ್ರಾವತಿ ಎಂಬ ನಿರ್ದೇಶಕರು ನಿರ್ದೇಶಿಸಲಿದ್ದಾರೆ.

ಈ ವರ್ಷ ಉಪೇಂದ್ರ ರವರ ಸಾಕಷ್ಟು ಸಿನಿಮಾಗಳು ಬರಲಿರುವುದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ. ಮಯೂರ ಡಿಎಂ ನಿರ್ದೇಶನದ, ಟಿ ಆರ್ ಚಂದ್ರಶೇಖರ್ ನಿರ್ಮಿಸುತ್ತಿರುವ ಚಿತ್ರ, ಶಶಾಂಕ್ ನಿರ್ದೇಶನದ ಮತ್ತೊಂದು ಚಿತ್ರ, ಅದಲ್ಲದೆ ಆರ್ ಚಂದ್ರು ನಿರ್ದೇಶಿಸಿರುವ ‘ಐ ಲವ್ ಯು’ ಹೀಗೆ ಸಾಲು ಸಾಲು ಚಿತ್ರಗಳು ನಿರ್ಮಾಣದ ಹಂತದಲ್ಲಿವೆ.

ನಿರ್ದೇಶಕ ಜಯರಾಮ್ ಭದ್ರಾವತಿ ಈ ಮೊದಲು, ಸುಮಂತ್ ಶೈಲೆಂದ್ರ ಅಭಿನಯದ ‘ಚೆರ್ರಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಆರ್ ಚಂದ್ರು ಮತ್ತು ಮಹೇಶ್ ಬಾಬು ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅವರು ನಿರ್ದೇಶಿಸಲಿರುವ ಈ ಹೊಸ ಚಿತ್ರವನ್ನು ಎನ್ ಆರ್ ರಮೇಶ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರೀನ್ ಪ್ಲೇ ಕೆಲಸ ಮುಗಿದಿದ್ದು ಸಂಭಾಷಣೆಯನ್ನು ಸಿದ್ಧಪಡಿಸಲಾಗುತ್ತಿದೆ.

ರಿಯಲ್ ಸ್ಟಾರ್ ಉಪೇಂದ್ರ ಅವರನ್ನು ಈ ಮೊದಲು ನೋಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾಗಿ ತೋರಿಸಬೇಕೆಂಬ ಹಂಬಲ ಹೊಂದಿರುವ ಜಯರಾಮ್ ಅವರು ಈ ಚಿತ್ರದ ಹೆಸರನ್ನು ಇನ್ನೂ ಅಂತಿಮಗೊಳಿಸಿಲ್ಲ.

ಶೀಘ್ರದಲ್ಲಿಯೇ ರಿಯಲ್ ಸ್ಟಾರ್ ರವರ ‘ಐ ಲವ್ ಯು’ ಚಿತ್ರ ಬಿಡುಗಡೆಯಾಗಲಿದ್ದು, ಇದೇ ಮೊದಲ ಬಾರಿಗೆ ಉಪೇಂದ್ರ ಅವರನ್ನು ಆರ್ ಚಂದ್ರು ನಿರ್ದೇಶಿಸಿದ್ದಾರೆ. ರಚಿತರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದ್ದು, ಬಿಡುಗಡೆಗೆ ಮುನ್ನವೇ ತೆಲುಗಿನಲ್ಲೂ ಸಾಕಷ್ಟು ಸುದ್ದಿ ಮಾಡುತ್ತಿದೆ.

ಉಪೇಂದ್ರ ಅವರ ಮತ್ತೊಂದು ಚಿತ್ರ ‘ಹೋಂ ಮಿನಿಸ್ಟರ್’ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇದಲ್ಲದೆ ಓಂ ಪ್ರಕಾಶ್ ರಾವ್ ನಿರ್ದೇಶಿಸುತ್ತಿರುವ ‘ರವಿಚಂದ್ರ’ ಲೋಕಸಭಾ ಚುನಾವಣೆಯ ಬಳಿಕ ಬಿಡುಗಡೆಯಾಗಲಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top