RESPONSIVE LEADERBOARD AD AREA
Film News

ಪವರ್ ಸ್ಟಾರ್ ಜನ್ಮದಿನಕ್ಕೆ ‘ಜೇಮ್ಸ್’…!!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸುತ್ತಿರುವ ‘ಯುವರತ್ನ’ ದ ಚಿತ್ರೀಕರಣ ಸಂತೋಷ್ ಆನಂದ್ ರಾಮ್ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ನಡುವೆ ಪುನೀತ್ ಅವರ ಜನ್ಮದಿನ (ಮಾರ್ಚ್ 17)ದಂದು ಹೊಸ ಚಿತ್ರದ ಘೋಷಣೆಗೆ ಸಿದ್ಧತೆ ನಡೆಸಲಾಗುತ್ತಿದೆ.

ಶ್ರೀಮುರಳಿ ಅಭಿನಯದ ‘ಭರಾಟೆ’ ಚಿತ್ರದ ನಿರ್ದೇಶಕ ಚೇತನ್ ಕುಮಾರ್, ಪುನೀತ್ ಅವರ ಮುಂದಿನ ಚಿತ್ರ ‘ಜೇಮ್ಸ್’ ಅನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದ ಅಧಿಕೃತ ಘೋಷಣೆ ಯನ್ನು, ಪುನೀತ್ ಅವರ ಜನ್ಮದಿನದಂದು, ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮಾಡಲಿದ್ದಾರೆ.

ಕಿಶೋರ್ ಪತ್ತಿಕೊಂಡ ಈ ಮಾಸ್ ಎಂಟರ್ಟೈನರ್ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಹೆಸರೇ ಸೂಚಿಸುವಂತೆ ‘ಜೇಮ್ಸ್ ಬಾಂಡ್’ ನೆನಪಿಸುವ ಚಿತ್ರ ಇದಾಗಿದ್ದರೂ, ಸ್ಥಳೀಯ ನೇಟಿವಿಟಿಗೆ ತಕ್ಕಂತೆ ಚಿತ್ರದ ಸ್ಟೈಲ್ ಮತ್ತು ಫ್ಲೇವರ್ ಇರಲಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್.

ಪುನೀತ್ ಅವರ ಜನ್ಮದಿನದಂದು ‘ಜೇಮ್ಸ್’ ಚಿತ್ರ ಘೋಷಣೆಯಾಗುತ್ತಿರುವುದು ಅವರ ಅಭಿಮಾನಿಗಳಿಗೆ ಇನ್ನಷ್ಟು ಖುಷಿ ಉಂಟು ಮಾಡಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top