RESPONSIVE LEADERBOARD AD AREA
Film News

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ಬರ್ತ್ಡೇ ಗಿಫ್ಟ್ ಆಗಿ “ಇನ್ಸ್ಪೆಕ್ಟರ್ ವಿಕ್ರಮ್” ಟೀಸರ್ ಜುಲೈ 3ಕ್ಕೆ ನಿಮ್ಮ ಮುಂದೆ

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್‌ ದೇವರಾಜ್ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ” ಚಿತ್ರದ ಟೀಸರ್ ಇದೇ ಜುಲೈ 3ನೇ ತಾರೀಕು ಬಿಡುಗಡೆಯಾಗುತ್ತಿದೆ. ಪ್ರಜ್ವಲ್ ಹುಟ್ಟುಹಬ್ಬದ ಉಡುಗೊರೆಯಾಗಿ ಬರುತ್ತಿರುವ ಈ ಟೀಸರ್ ನಲ್ಲಿ ಸಿನಿಮಾದೆಡೆಗೆ ಪ್ರೇಕ್ಷಕರು ಆಸಕ್ತಿ ಜಾಸ್ತಿ ಆಗಬಲ್ಲ ವಿಷಯಗಳಿವೆ.

ಈ ಸಿನಿಮಾ ಸೆಟ್ಟೇರಿದ ದಿನದಿಂದ ದಿನ ಕಳೆದಂತೆ ಅತಿಥಿ ಪಾತ್ರಗಳ ಎಂಟ್ರಿಯಿಂದ ದೊಡ್ಡ ಮಟ್ಟದಲ್ಲಿ ಕುತೂಹಲ ಕೆರಳಿಸಿರುವುದು ನಿಜ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಅವರು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದಾರೆ ಎಂಬ ಸುದ್ದಿಯ ಬೆನ್ನ ಹಿಂದೆಯೇ ರಮೇಶ್‌ ಅರವಿಂದ್‌ ಅವರು ಸಹ ವಿಶೇಷ ನೆಗೆಟಿವ್ ಶೇಡ್ಸ್ ಇರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು ಹುಬ್ಬೇರಿಸುವಂತಹ ವಿಷಯವಾಗಿ ಹೊರಬಿದ್ದಿತ್ತು. ಜೊತೆಗೆ ರಘು ಮುಖರ್ಜಿ ಅವರು ಕೂಡ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನೆಗೆಟಿವ್‌ ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ. ಈಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದ್ದು, ಎಡಿಟಿಂಗ್ ಟೇಬಲ್ ಮೇಲೆ ಸಿನಿಮಾ ನೋಡಿದ ಇಂಡಸ್ಟ್ರಿಯ ಹಲವರು ಸಿನಿಮಾ ಬಗ್ಗೆ ತುಂಬಾ ಒಳ್ಳೆಯ ಮಾತುಗಳನ್ನು ಆಡುತ್ತಿದ್ದಾರೆ.

ರಮೇಶ್ ಅವರ ನಟನೆಯ “ಪುಷ್ಪಕ ವಿಮಾನ” ಚಿತ್ರವನ್ನು ಬಹಳ ಕಲಾತ್ಮಕವಾಗಿ ಪೇಂಟಿಂಗ್ ನಂತೆ ಅದ್ಭುತವಾಗಿ ಮೂಡಿಬರುವಂತೆ ಶ್ರಮಿಸಿದ್ದ ನಿರ್ಮಾಪಕ ವಿಖ್ಯಾತ್ “ಇನ್ಸ್ಪೆಕ್ಟರ್ ವಿಕ್ರಂ” ಅಂದವಾಗಿ ರೂಪುಗೊಳ್ಳುಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಕನ್ನಡಿಗರಿಗೆ ಒಳ್ಳೆಯ ಸಿನಿಮಾ ಕೊಡಬೇಕೆಂಬ ಅವರ ಅಭಿಲಾಷೆ ಸ್ತುತ್ಯಾರ್ಹ.

ಮೊದಲ ಚಿತ್ರ ನಿರ್ದೇಶಿಸುತ್ತಿರುವ ನರಸಿಂಹ ಅವರು ಸಾಮಾನ್ಯ ಪ್ರೇಕ್ಷಕರಿಗೆ ಹಿಡಿಸುವ ಮಾಸ್ ಎಲಿಮೆಂಟ್ಗಳ ಆಧಾರದ ಮೇಲೆಯೇ ಒಂದು ಕ್ಲಾಸ್ ಸ್ಟೈಲಿಶ್ ಸಿನಿಮಾವಲ್ಲ ರೂಪಿಸುತ್ತಿದ್ದಾರೆ. ಅವರ ಪ್ರಕಾರ ಇನ್ಸ್ಪೆಕ್ಟರ್ ವಿಕ್ರಂ ಒಂದು ಫನ್ ಇರೋ ಆಕ್ಷನ್ ಸಿನಿಮಾ. ಎಲ್ಲ ವರ್ಗದ ಆಡಿಯನ್ಸ್ಗೆ ಇಷ್ಟವಾಗಬಲ್ಲ ವಿಷಯಗಳಿರುವ ಕಂಪ್ಲೀಟ್ ಎಂಟರ್ಟೇನರ್ ಸಿನಿಮಾ ಇದು.

ಸಿನಿಮಾ ಅತಿ ಶೀಘ್ರದಲ್ಲಿ ಥಿಯೇಟರ್ಗೆ ಲಗ್ಗೆ ಹಾಕಲು ಎಲ್ಲ ರೀತಿಯಲ್ಲೂ ಅಣಿಯಾಗುತ್ತಿದೆ. ಚಿತ್ರತಂಡ ತನ್ನ ಕಡೆಯಿಂದ ಹಾಕಬೇಕಾದ ಎಲ್ಲ ಪರಿಶ್ರಮ ಹಾಕಿದ್ದಾಗಿದೆ. ಇನ್ನೇನಿದ್ದರೂ ಅಭಿಮಾನಿ ದೇವರುಗಳ ಪ್ರೀತಿ ವಿಶ್ವಾಸ ಸಿನಿಮಾದ ಮೇಲೆ ಬೀಳಬೇಕಷ್ಟೆ.

ಸದ್ಯ ಚಿತ್ರದ ಟೀಸರ್ ಪ್ರೇಕ್ಷಕರು ಇನ್ಸ್ಪೆಕ್ಟರ್ ವಿಕ್ರಂ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲೇ ಬೇಕಪ್ಪಾ ಅಂತ ಅಂದುಕೊಳ್ಳುವ ಮಟ್ಟಿಗೆ ಮೂಡಿಬರಲಿ ಅನ್ನೋದು ನಮ್ಮೆಲ್ಲರ ಆಶಯ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top