RESPONSIVE LEADERBOARD AD AREA
Movie Articles

ಹಿಂದಿಗೆ ನಿರ್ದೇಶಕ ಇಂದ್ರಜಿತ್ ಲಂಕೇಶ್..

ಹಿಂದಿಯಲ್ಲಿ ನಟಿ ಶಕೀಲರ ಜೀವನಗಾಥೆ.. ಹೇಳುತ್ತಿರುವುದು ಇಂದ್ರಜಿತ್ ಲಂಕೇಶ್…!

ಹೌದು…! ‘ಲವ್ ಯು ಆಲಿಯಾ’ ಚಿತ್ರದ ನಂತರ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಇಂದ್ರಜಿತ್ ಲಂಕೇಶ್, ಇದೀಗ ಹಿಂದಿಯಲ್ಲಿ ಬಿಗ್‌ ಪ್ರಾಜೆಕ್ಟ್‌ ನೊಂದಿಗೆ ಬರುತ್ತಿದ್ದಾರೆ.  ಶಕೀಲಾ ರ ಜೀವನಗಾಥೆಯನ್ನು ಬಾಲಿವುಡ್ ಬೆಳ್ಳಿತೆರೆ ಮೇಲೆ ತರುವ ಅವಕಾಶ ಅವರಿಗೆ ಲಭಿಸಿದೆ.

ಹುಡುಗರ ಹಾಟ್ ಫೇವರೇಟ್ ಲಿಸ್ಟ್ ನಲ್ಲಿ ಬರುವ ಪ್ರಮುಖ ಹೆಸರುಗಳು ಸನ್ನಿ ಲಿಯೋನ್ ಮತ್ತು ಶಕೀಲಾ. ಸನ್ನಿಯ ಬಗ್ಗೆ ವೆಬ್ ಸೀರೀಸ್‌ ಬಂದಿದ್ದು, ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೆಟ್ ಮಾಡಿದೆ. ಆದರೆ ಶಕೀಲ ರವರ ಜೀವನಾಧಾರಿತ ಸಿನೆಮಾ ಇದುವರೆಗೆ ಬಂದಿರಲಿಲ್ಲ. ಇದೀಗ ಇಂದ್ರಜಿತ್ ಲಂಕೇಶ್ ಹಿಂದಿಯಲ್ಲಿ ಈ ಚಿತ್ರವನ್ನು ತರುತ್ತಿದ್ದಾರೆ. ತಮ್ಮ ಹಿಂದಿನ ಸಿನೆಮಾ ‘ತುಂಟಾಟ’ ಮತ್ತು ‘ಮೊನಲಿಸಾ’ ದಲ್ಲಿ ಇಂದ್ರಜಿತ್, ಶಕೀಲಾರನ್ನು ಗೆಸ್ಟ್ ರೋಲ್ ನಲ್ಲಿ ಕನ್ನಡಿಗರಿಗೆ ಪರಿಚಯಿಸಿದ್ದರು. ಈ ಚಿತ್ರ ಮಾಡುವ ಮುನ್ನ ಶಕೀಲಾ ರೊಂದಿಗೆ ಹಲವು ಬಾರಿ ವಿಸ್ತೃತವಾಗಿ ಮಾತನಾಡಿರುವ ಇಂದ್ರಜಿತ್, ಶಕೀಲಾ ರ ಬಗ್ಗೆ ಇದುವರೆಗೂ ತಿಳಿಯದ ಎಕ್ಸ್ಕ್ಲೂಸಿವ್ ಅಂಶಗಳು ಈ ಚಿತ್ರದಲ್ಲಿ ಇರಲಿವೆ ಎಂದಿದ್ದಾರೆ.

ತುಂಬಾ ಸ್ಟೈಲಿಶ್ ಆಗಿ, ಅದ್ದೂರಿಯಾಗಿ ಚಿತ್ರ ಮಾಡುವ ಇಂದ್ರಜಿತ್, ಈಗಾಗಲೇ ಚಿತ್ರದ ಶೇಕಡ 60 ರಷ್ಟು ಚಿತ್ರೀಕರಣ ಮುಗಿಸಿದ್ದಾರೆ. ಶಕೀಲಾ ಪಾತ್ರವನ್ನು ರಿಚಾ ಚಡ್ಡಾ ನಿರ್ವಹಿಸಿದ್ದು, ಚಿತ್ರದ ಇನ್ನೊಂದು ಪ್ರಮುಖ ಪಾತ್ರದಲ್ಲಿ ನಟಿ ಎಸ್ತರ್ ನರೋನ ಅಭಿನಯಿಸುತ್ತಿದ್ದಾರೆ. ಅವರ ಪಾತ್ರ ಏನೆಂಬುದು ಗುಟ್ಟಾಗಿಯೇ ಉಳಿದಿದೆ.
ಶಕೀಲಾ ಅವರ ಬಾಲ್ಯ, ಕುಟುಂಬ, ವೃತ್ತಿ ಬದುಕು, ಮುಂತಾದ ಇಂಟರೆಸ್ಟಿಂಗ್ ವಿಷಯಗಳನ್ನು ಇಟ್ಟುಕೊಂಡು ಚಿತ್ರದ ಕಥೆ ಹೆಣೆಯಲಾಗಿದೆ. ವಿಶೇಷವೆಂದರೆ ಶಕೀಲಾ ರ ಕಾರ್ಯಕ್ಷೇತ್ರವಾದ ಕೇರಳದ ಬದಲು, ತೀರ್ಥಹಳ್ಳಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ.
‘ತೀರ್ಥಹಳ್ಳಿಯ ಕೆಲವು ಪ್ರದೇಶಗಳು ಕೇರಳವನ್ನು ಮೀರಿಸುವಂತಿವೆ. ಅವುಗಳನ್ನು ಈ ಚಿತ್ರದಲ್ಲಿ ಸುಂದರವಾಗಿ ಸೆರೆ ಹಿಡಿಯಲಾಗಿದೆ ಅಲ್ಲದೆ, ಇತ್ತೀಚಿನ ಪ್ರವಾಹ ಮತ್ತು ಬಹುತೇಕ ಕೇರಳದ ಭಾಗಗಳು ಈಗಾಗಲೇ ಹಲವಾರು ಚಿತ್ರಗಳಲ್ಲಿ ತೋರಿಸಿರುವ ಕಾರಣ, ತೀರ್ಥಹಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎನ್ನುತ್ತಾರೆ ಇಂದ್ರಜಿತ್.

ಕನ್ನಡಿಗರು ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದು ಇದೇ ಮೊದಲೇನಲ್ಲ. ರಾಜೇಂದ್ರ ಸಿಂಗ್ ಬಾಬು, ವಿ ಶಾಂತರಾಮ್, ಗುರುದತ್ ರಂತಹ ಪ್ರತಿಭಾವಂತ ನಿರ್ದೇಶಕರು ಕೆಲವು ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸನ್ನು ಕಂಡಿದ್ದರು. ಇದೀಗ ಎರಡು ದಶಕಗಳ ನಂತರ ಇಂದ್ರಜಿತ್ ಆ ಪ್ರಯತ್ನ ಮಾಡುತ್ತಿದ್ದಾರೆ.       ಕನ್ನಡದ ಪ್ರತಿಭೆಗಳಾದ ಸಂದೀಪ್ ಮಲಾನಿ, ಎಸ್ತರ್ ನರೋನ, ವೀರ್ ಸಮರ್ಥ್ ಮುಂತಾದವರು ಇಂದ್ರಜಿತ್ ಜೊತೆಗೆ ಕೆಲಸ ನಿರ್ವಹಿಸುತ್ತಿದ್ದಾರೆ.
ಇದೇ ವರ್ಷ ಸಂಜಯ್ ದತ್ ರ ಬಯೋಪಿಕ್ ‘ಸಂಜು’, ಸೂಪರ್ ಡೂಪರ್ ಹಿಟ್ ಆಗಿತ್ತು. ಇದರ ಜೊತೆಜೊತೆಗೆ ಹಲವು ಬಯೋಪಿಕ್ ಚಿತ್ರಗಳು ಹಿಂದಿಯಲ್ಲಿ ಸಾಲು ಸಾಲಾಗಿ ಬರುತ್ತಿದ್ದು, ಶಕೀಲಾ ರ ಈ ಬಯೋಪಿಕ್ ಎಷ್ಟು ಹವಾ ಕ್ರಿಯೇಟ್ ಮಾಡಲಿದೆ ಎಂದು ಕಾಲವೇ ಹೇಳಬೇಕು. ಇಂದ್ರಜಿತ್ ಲಂಕೇಶ್ ಗೆ ಆಲ್ ದ ಬೆಸ್ಟ್ ಹೇಳೋಣವೇ?

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top