RESPONSIVE LEADERBOARD AD AREA
Film News

ಸುದೀಪ್ ರ ‘ಪೈಲ್ವಾನ್’ ಚಿತ್ರಕ್ಕೆ ಹಾಲಿವುಡ್ ಸ್ಟಂಟ್ ಮ್ಯಾನ್…!!

ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರಕ್ಕಾಗಿ ಹಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ‘ಲಾರ್ನೆಲ್ ಸ್ಟೋವಲ್’ ರನ್ನು ಕರೆತರಲಾಗುತ್ತಿದೆ.

ಲಾರ್ನೆಲ್ ‘ಸಿವಿಲ್ ವಾರ್’, ‘ಕಿಕ್ ಬಾಕ್ಸರ್’, ‘ದ ಹಂಗರ್ ಗೇಮ್ಸ್’, ‘ರೈಡ್ ಅಲಾಂಗ್’, ‘ಡ್ರಾಗನ್ ಐಸ್’, ‘ಅನ್ ಡಿಸ್ ಪುಟೆಡ್ 3’ ಮುಂತಾದ ಹಾಲಿವುಡ್ ಚಿತ್ರಗಳಿಗೆ ಸ್ಟಂಟ್ಸ್ ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ ‘ಬ್ರದರ್ಸ್’, ಸಲ್ಮಾನ್ ಖಾನ್ ರ ‘ಸುಲ್ತಾನ್’ ಹಾಗೂ ಎಸ್ ಎಸ್ ರಾಜಮೌಳಿಯ ‘ಬಾಹುಬಲಿ’ ಚಿತ್ರಗಳಿಗೆ ವಿಶೇಷ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದವರು ಇದೇ ಲಾರ್ನೆಲ್ ಸ್ಟೋವಲ್.

ಕೃಷ್ಣ ನಿರ್ದೇಶನದ ‘ಪೈಲ್ವಾನ್’ ನಲ್ಲಿ ಮೂರು ರೀತಿಯ ಸ್ಟಂಟ್ಸ್ ಗಳನ್ನು ಪರಿಚಯಿಸುತ್ತಿದ್ದು, ಫೈಟ್ ಗಳು, ರೆಸ್ಲಿಂಗ್ ಮತ್ತು ಬಾಕ್ಸಿಂಗ್ ದೃಶ್ಯಗಳನ್ನು ತೋರಿಸಲಾಗುವುದು. ಅವುಗಳಲ್ಲಿ ಬಾಕ್ಸಿಂಗ್ ಸೀಕ್ವೆನ್ಸ್ ಗಳನ್ನು ಲಾರ್ನೆಲ್ ನಿರ್ದೇಶಿಸಲಿದ್ದಾರೆ. ಇದೊಂದು ಬಾಕ್ಸಿಂಗ್ ಕೇಂದ್ರಿತ ಚಿತ್ರವಾಗಿದ್ದು ಅತ್ಯಂತ ಸಹಜವಾಗಿ ದೃಶ್ಯಗಳು ಮೂಡಿಬರುವಂತೆ ಯೋಜಿಸಲಾಗಿದ್ದು, ಲಾರ್ನೆಲ್ ರನ್ನು ಕರೆ ತರಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಕೃಷ್ಣ.

ಇದೀಗ ತಾನೇ ಕೆ ಸಿ ಸಿ ಯ ಕ್ರಿಕೆಟ್ ಪಂದ್ಯಗಳು ಮುಗಿಯುತ್ತಿದ್ದು, ಚಿತ್ರತಾರೆಗಳು ಮತ್ತೆ ಸಿನಿಮಾ ಕೆಲಸಗಳಿಗೆ ವಾಪಸಾಗುತ್ತಿದ್ದಾರೆ. ಇದರ ನೇತೃತ್ವ ವಹಿಸಿದ್ದ ಕಿಚ್ಚ ಸುದೀಪ ಕೂಡ ‘ಪೈಲ್ವಾನ್’ ಚಿತ್ರದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

ಲಾರ್ನೆಲ್, ಬೆಂಗಳೂರಿಗೆ ಅಕ್ಟೋಬರ್ ನಲ್ಲಿ ಬರಲಿದ್ದು, ಅದಕ್ಕಿಂತ ಮುಂಚಿತವಾಗಿ ತಾವು ಸಂಯೋಜಿಸಿರುವ ಸಾಹಸ ದೃಶ್ಯಗಳ ವೀಡಿಯೋಗಳನ್ನು ಚಿತ್ರತಂಡಕ್ಕೆ ಕಳುಹಿಸಲಿದ್ದು, ಅದರಂತೆ ಚಿತ್ರ ಚಿತ್ರತಂಡ ಸಿದ್ಧತೆಗಳನ್ನು ಮಾಡಿಕೊಳ್ಳಲಿದೆ. ಸುದೀಪ್ ಹೊರತುಪಡಿಸಿ, ಉಳಿದ ಸಾಹಸ ದೃಶ್ಯಗಳಲ್ಲಿ ಭಾಗವಹಿಸುವ ನಟರಿಗೆ ತರಬೇತಿಯನ್ನು ನೀಡಲಾಗುವುದು. ಲಾರ್ನೆಲ್ ಬರುತ್ತಿದ್ದಂತೆ, ಸುದೀಪ್ ರಿಗೆ ರಿಹರ್ಸಲ್ ಮಾಡಿಸಿ ನಂತರ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಲು ನಿರ್ಧರಿಸಲಾಗಿದೆಯಂತೆ.

ಚಿತ್ರದ ಪ್ರಮುಖ ಭಾಗಗಳನ್ನು ಹೈದರಾಬಾದ್ ಫಿಲಂ ಸಿಟಿಯಲ್ಲಿ ಚಿತ್ರಿಸಲಾಗಿದ್ದು, ಉಳಿದ ಭಾಗಗಳನ್ನು ಎರಡನೇ ಶೆಡ್ಯೂಲ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ.

ಆರ್ ಆರ್ ಆರ್ ಮೋಶನ್ ಪಿಕ್ಚರ್ಸ್ ರವರ, ಸ್ವಪ್ನ ಕೃಷ್ಣ ನಿರ್ಮಿಸುತ್ತಿರುವ ‘ಪೈಲ್ವಾನ್’ಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ನಟಿಸುತ್ತಿದ್ದು, ಬಾಲಿವುಡ್ ನ ‘ಹೀ ಮ್ಯಾನ್’ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರವಿಶಂಕರ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಉಳಿದ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top