RESPONSIVE LEADERBOARD AD AREA
Film News

‘ಪೈಲ್ವಾನ್’ ಸುದೀಪ್ ಮತ್ತು ಹಾಲಿವುಡ್ ಸ್ಟಂಟ್ ಮ್ಯಾನ್…!!

ಕಿಚ್ಚ ಸುದೀಪ ಅಭಿನಯಿಸುತ್ತಿರುವ ಬಹುನಿರೀಕ್ಷಿತ ‘ಪೈಲ್ವಾನ್’ ಚಿತ್ರದ ಸಾಹಸ ದೃಶ್ಯಗಳನ್ನು ನಿರ್ದೇಶಿಸಲು ಹಾಲಿವುಡ್ ನ ಖ್ಯಾತ ಸ್ಟಂಟ್ ಮಾಸ್ಟರ್ ‘ಲಾರ್ನೆಲ್ ಸ್ಟೋವಲ್’ ಮುಂದಿನ ವಾರ ಬೆಂಗಳೂರಿಗೆ ಬರಲಿದ್ದಾರೆ.

ಲಾರ್ನೆಲ್ ‘ಸಿವಿಲ್ ವಾರ್’, ‘ಕಿಕ್ ಬಾಕ್ಸರ್’, ‘ದ ಹಂಗರ್ ಗೇಮ್ಸ್’, ‘ರೈಡ್ ಅಲಾಂಗ್’, ‘ಡ್ರಾಗನ್ ಐಸ್’, ‘ಅನ್ ಡಿಸ್ ಪುಟೆಡ್ 3’ ಮುಂತಾದ ಹಾಲಿವುಡ್ ಚಿತ್ರಗಳಿಗೆ ಸ್ಟಂಟ್ಸ್ ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಬಾಲಿವುಡ್ ನ ಅಕ್ಷಯ್ ಕುಮಾರ್ ನಟನೆಯ ‘ಬ್ರದರ್ಸ್’, ಸಲ್ಮಾನ್ ಖಾನ್ ರ ‘ಸುಲ್ತಾನ್’ ಹಾಗೂ ಎಸ್ ಎಸ್ ರಾಜಮೌಳಿಯ ‘ಬಾಹುಬಲಿ’ ಚಿತ್ರಗಳಿಗೆ ವಿಶೇಷ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದವರು ಇದೇ ಲಾರ್ನೆಲ್ ಸ್ಟೋವಲ್.

ಕೃಷ್ಣ ನಿರ್ದೇಶನದ ‘ಪೈಲ್ವಾನ್’ ನಲ್ಲಿ ಮೂರು ರೀತಿಯ ಸ್ಟಂಟ್ಸ್ ಗಳನ್ನು ಪರಿಚಯಿಸುತ್ತಿದ್ದು, ಫೈಟ್ ಗಳು, ರೆಸ್ಲಿಂಗ್ ಮತ್ತು ಬಾಕ್ಸಿಂಗ್ ದೃಶ್ಯಗಳನ್ನು ತೋರಿಸಲಾಗುವುದು. ಅವುಗಳಲ್ಲಿ ಬಾಕ್ಸಿಂಗ್ ಸೀಕ್ವೆನ್ಸ್ ಗಳನ್ನು ಲಾರ್ನೆಲ್ ನಿರ್ದೇಶಿಸಲಿದ್ದಾರೆ. ಇದೊಂದು ಬಾಕ್ಸಿಂಗ್ ಕೇಂದ್ರಿತ ಚಿತ್ರವಾಗಿದ್ದು ಅತ್ಯಂತ ಸಹಜವಾಗಿ ದೃಶ್ಯಗಳು ಮೂಡಿಬರುವಂತೆ ಯೋಜಿಸಲಾಗಿದ್ದು, ಲಾರ್ನೆಲ್ ರನ್ನು ಕರೆ ತರಲಾಗುತ್ತಿದೆ ಎನ್ನುತ್ತಾರೆ ನಿರ್ದೇಶಕ ಕೃಷ್ಣ.

ಸುದೀಪ್ ಹೊರತುಪಡಿಸಿ, ಉಳಿದ ಸಾಹಸ ದೃಶ್ಯಗಳಲ್ಲಿ ಭಾಗವಹಿಸುವ ನಟರಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಲಾರ್ನೆಲ್ ಬರುತ್ತಿದ್ದಂತೆ, ಸುದೀಪ್ ರಿಗೆ ರಿಹರ್ಸಲ್ ಮಾಡಿಸಿ ನಂತರ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸಲು ನಿರ್ಧರಿಸಲಾಗಿದೆಯಂತೆ.

ಈಗಾಗಲೇ ಚಿತ್ರದ ಶೇಕಡಾ 75 ರಷ್ಟು ಚಿತ್ರೀಕರಣ ಮುಗಿದಿದ್ದು ಇದೇ ಡಿಸೆಂಬರ್ ನಲ್ಲಿ ಚಿತ್ರ ಪೂರ್ಣಗೊಳ್ಳಲಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಆರ್ ಆರ್ ಆರ್ ಮೋಶನ್ ಪಿಕ್ಚರ್ಸ್ ರವರ, ಸ್ವಪ್ನ ಕೃಷ್ಣ ನಿರ್ಮಿಸುತ್ತಿರುವ ‘ಪೈಲ್ವಾನ್’ಗೆ ನಾಯಕಿಯಾಗಿ ಆಕಾಂಕ್ಷಾ ಸಿಂಗ್ ನಟಿಸುತ್ತಿದ್ದು, ಬಾಲಿವುಡ್ ನ ‘ಹೀ ಮ್ಯಾನ್’ ಸುನಿಲ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರವಿಶಂಕರ್, ಕಬೀರ್ ದುಹಾನ್ ಸಿಂಗ್, ಶರತ್ ಲೋಹಿತಾಶ್ವ ಉಳಿದ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಕರುಣಾಕರ್ ಛಾಯಾಗ್ರಹಣ ಚಿತ್ರಕ್ಕಿದೆ.

RESPONSIVE LEADERBOARD AD AREA
Click to comment

You must be logged in to post a comment Login

Leave a Reply

RESPONSIVE LEADERBOARD AD AREA
To Top